ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ: ಐಎಎಸ್​ ಅಧಿಕಾರಿ ಶಿವಯೋಗಿ ಕಳಸದ್​ ಮೂಲಕ ತನಿಖೆಗೆ ಸರಕಾರ ಆದೇಶ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯೊಳಗೆ 24 ಕೊವಿಡ್​ ರೋಗಿಗಳು ಆಮ್ಲಜನಕದ ಕೊರತೆಯಿಂದ ಸತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರಕಾರ ತನಿಖೆ ನಡೆಸಲು ಆದೇಶಿಸಿ, ತನಿಖಾಧಿಕಾರಿಯಾಗಿ, ಐಎಎಸ್​ ಅಧಿಕಾರಿ ಶಿವಯೋಗಿ ಕಳಸದ್​ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ: ಐಎಎಸ್​ ಅಧಿಕಾರಿ ಶಿವಯೋಗಿ ಕಳಸದ್​ ಮೂಲಕ ತನಿಖೆಗೆ ಸರಕಾರ ಆದೇಶ
ಸರ್ಕಾರಿ ಆಸ್ಪತ್ರೆ
Follow us
ಡಾ. ಭಾಸ್ಕರ ಹೆಗಡೆ
| Updated By: guruganesh bhat

Updated on:May 03, 2021 | 10:16 PM

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಕಳೆದ 24 ಗಂಟೆಯಲ್ಲಿ 24 ಕೊವಿಡ್ ರೋಗಿಗಳು ಸತ್ತಿರುವ ಹಿನ್ನೆಲೆಯಲ್ಲಿ ಸರಕಾರ ಹಿರಿಯ ಐಎಎಸ್ ಶಿವಯೀಗ ಕಳಸದ್ ಅವರನ್ನು ವಿಚಾರಣಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಸಾವಿನ ಹಿಂದಿನ ಕಾರಣಗಳನ್ನು ಹುಡುಕಿ ಮೂರು ದಿನಗಳೊಳಗೆ ವರದಿ ನೀಡುವಂತೆ ಆದೇಶ ಹೊರಡಿಸಿದೆ.

ನಿನ್ನೆ ಮಧ್ಯಾಹ್ನ ಆಮ್ಲಜನಕ ಉತ್ಪಾದನಾ ಘಟಕ ನಿಂತಿದ್ದ ಕಾರಣಕ್ಕೆ ಆಮ್ಲಜನಕದ ಕೊರತೆ ಉಂಟಾಗಿತ್ತು. ಅದಾದ ಮೇಲೆ ಚಾಮರಾಜನಗರವು ಮೈಸೂರಿನಿಂದ ಆಮ್ಲಜನಕ ತರಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ, ಅದು ಬರಲೇ ಇಲ್ಲ. ಮತ್ತು ತಡ ರಾತ್ರಿ ಆಮ್ಲಜನಕ ಹೊತ್ತ ಲಾರಿ ಬರುವಷ್ಟರಲ್ಲಿ ದುರಂತ ನಡೆದೇ ಹೋಗಿತ್ತು. ವಿರೋಧ ಪಕ್ಷಗಳು ಈಗಾಗಲೇ ಆರೋಗ್ಯ ಸಚಿವ ಡಾ. ಸುಧಾಕರ್ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ, ಎಸ್. ಸುರೇಶ್ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಮತ್ತು ಜಲ್ಲಾ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ಕೋರಿವೆ. ಇದರ ಬೆನ್ನಲ್ಲೆ ಈಗ ಸರಕಾರ ವಿಶೇಷ ತನಿಖಾಧಿಕಾರಿಯನ್ನು ನೇಮಿಸಿ ಮೂರು ದಿನಗಳೊಳಗೆ ವರದಿ ನೀಡುವಂತೆ ಆದೇಶ ನೀಡಿದೆ.

ಇದನ್ನೂ ಓದಿ:

ಆಕ್ಸಿಜನ್ ವ್ಯತ್ಯಯ: 24 ಜನರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ ಎಂದ ಸಚಿವ ಸುರೇಶ್ ಕುಮಾರ್

ವೆಂಟಿಲೇಟರ್ ಆಪರೇಟರ್​ಗಳ ಕೊರತೆ; ಉಡುಪಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹೆಚ್ಚಿದ ಒತ್ತಡ

(Karnataka government appoints IAS officer Shivayogi Kalasad to investigate reasons for Oxygen scarcity led to 24 deaths in 24 hours)

Published On - 2:11 pm, Mon, 3 May 21