AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು

20 ವರ್ಷಗಳ ಹಿಂದೆ 10,000 ರೂಪಾಯಿ ಹೂಡಿಕೆ ಮಾಡಿ, ಈ ಕಂಪೆನಿಯ ಷೇರು ಖರೀದಿಸಿ ಇಟ್ಟುಕೊಂಡಿದ್ದವರಿಗೆ 2 ಕೋಟಿ ರೂಪಾಯಿ ಹಣ ದೊರೆಯುವಂತೆ ಮಾಡಿದೆ ಈ ಕಂಪೆನಿ.

10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು
ಸಾಂದರ್ಭಿಕ ಚಿತ್ರ
Srinivas Mata
|

Updated on: May 03, 2021 | 1:44 PM

Share

10,000 ರೂಪಾಯಿ ಹೂಡಿಕೆ ಮಾಡಿ, 2 ಕೋಟಿ ರೂಪಾಯಿ ರಿಟರ್ನ್ ಪಡೆದ ಉದಾಹರಣೆ ಎಲ್ಲಾದರೂ ಕೇಳಿದ್ದೀರಾ? ಷೇರುಪೇಟೆಯಲ್ಲಿ ಅಂಥ ಹಲವು ರತ್ನಗಳಿವೆ. ಕಾಲ ಕಳೆದಂತೆ ಹೂಡಿಕೆದಾರರನ್ನು ಕೋಟ್ಯಧಿಪತಿ ಮಾಡಿದ ಕಂಪೆನಿಗಳವು. ಅಂಥದ್ದೇ ಒಂದು ಕಂಪೆನಿ ಬಜಾಜ್ ಫೈನಾನ್ಸ್. ಈ ಷೇರಿನ ಬೆಲೆ ಶೇ 2,16,466 ಅಥವಾ 2165 ಪಟ್ಟು ಹೆಚ್ಚಳವಾಗಿ, 20 ವರ್ಷದಲ್ಲಿ ರೂ. 5,484.75 ಮುಟ್ಟಿದೆ. ಅಡ್ಜಸ್ಟೆಡ್ ಷೇರು ಬೆಲೆ 2001ರ ಏಪ್ರಿಲ್​ನಲ್ಲಿ ರೂ. 2.53 ಇತ್ತು. ಇದೇ ಅವಧಿಯಲ್ಲಿ ಬಿಎಸ್​ಇ ಸೆನ್ಸೆಕ್ಸ್ 1,354 ಗಳಿಕೆ ಕಂಡಿದೆ.

ಕೋವಿಡ್​-19 ಬಿಕ್ಕಟ್ಟಿನ ಅನಿಶ್ಚಿತತೆ ಮಧ್ಯೆಯೂ ಷೇರು ಪೇಟೆ ವಿಶ್ಲೇಷಕರು ಸಕಾರಾತ್ಮಕ ಭಾವವನ್ನೇ ಈ ಕಂಪೆನಿಯ ಪರ್ಫಾರ್ಮೆನ್ಸ್ ಬಗ್ಗೆ ಹೊಂದಿದ್ದಾರೆ. ಏಪ್ರಿಲ್ 27ನೇ ತಾರೀಕು ಫಲಿತಾಂಶ ಪ್ರಕಟಿಸಿರುವ ಬಜಾಜ್ ಫೈನಾನ್ಸ್, ಶೇ 42ರಷ್ಟು ಬೆಳವಣಿಗೆ ದಾಖಲಿಸಿ, ಮಾರ್ಚ್ ಕೊನೆಗೆ ನಾಲ್ಕನೇ ತ್ರೈಮಾಸಿಕದಲ್ಲಿ 1347 ಕೋಟಿ ರೂಪಾಯಿ ಕನ್ಸಾಲಿಡೇಟೆಡ್ ನಿವ್ವಳ ಲಾಭ ಗಳಿಸಿದೆ. ಇದಕ್ಕೂ ಮುಂಚಿನ ವರ್ಷದ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ 948 ಕೋಟಿ ರೂಪಾಯಿ ಲಾಭ ಮಾಡಿತ್ತು.

ಕಳೆದ ಒಂದು ವರ್ಷದಲ್ಲಿ ಬಜಾಜ್ ಫೈನಾನ್ಸ್ ಕಂಪೆನಿ ಷೇರು ಶೇ 139ರಷ್ಟು ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಸೆನ್ಸೆಕ್ಸ್ ಶೇ 52ರಷ್ಟು ಮೇಲೇರಿದೆ. ಅದೇ ರೀತಿ ಕಳೆದ ಹತ್ತು ವರ್ಷದಲ್ಲಿ ಕಂಪೆನಿಯು ಶೇ 7,963ರಷ್ಟು ಬೆಳವಣಿಗೆ ದಾಖಲಿಸಿದ್ದರೆ, ಸೂಚ್ಯಂಕವು ಶೇ 160ರಷ್ಟು ಪ್ರಗತಿ ಕಂಡಿದೆ. ಸದ್ಯಕ್ಕೆ ಜೆಎಂ ಫೈನಾನ್ಷಿಯಲ್​ನಿಂದ ಬಜಾಜ್ ಫೈನಾನ್ಸ್​ಗೆ 5,750ರ ಗುರಿ ನಿಗದಿಪಡಿಸಿ ಖರೀದಿಗೆ ಶಿಫಾರಸು ಮಾಡಲಾಗಿದೆ. ಇನ್ನು ಕಂಪೆನಿ ಕನ್ಸಾಲಿಡೇಟೆಡ್ ನಿವ್ವಳ ಲಾಭ ವಾರ್ಷಿಕ ಬೆಳವಣಿಗೆ ದರವು ಕಳೆದ 6 ವರ್ಷದಲ್ಲಿ ಶೇ 30ರ ದರದಲ್ಲಿ ಬೆಳೆದಿದೆ. FY21ರಲ್ಲಿ ಬಜಾಜ್ ಫೈನಾನ್ಸ್ ನಿವ್ವಳ ಲಾಭ ರೂ. 4419.82 ಕೋಟಿ ಇದ್ದರೆ, FY15ರಲ್ಲಿ ರೂ. 897.88 ಕೋಟಿ ಇತ್ತು.

ಬ್ರೋಕರೇಜ್ ಶಿಫಾರಸು ಮೋತಿಲಾಲ್ ಓಸ್ವಾಲ್​ನಿಂದ ಷೇರನ್ನು ಖರೀದಿಗೆ ಶಿಫಾರಸು ಮಾಡಿದ್ದು, ರೂ. 5865 ಬೆಲೆಗೆ ಗುರಿ ನಿಗದಿ ಮಾಡಲಾಗಿದೆ.

(ಈ ಲೇಖನ ಮಾಹಿತಿ ಉದ್ದೇಶಕ್ಕಾಗಿಯೇ ವಿನಾ ಷೇರು ಖರೀದಿ ಶಿಫಾರಸಲ್ಲ. ಒಂದು ವೇಳೆ ಖರೀದಿಸಿ ನಷ್ಟ ಸಂಭವಿಸಿದಲ್ಲಿ ಕಂಪೆನಿಯಾಗಲೀ ಲೇಖಕರಾಗಲೀ ಜವಾಬ್ದಾರರಲ್ಲ)

(ಮಾಹಿತಿ: ಮನಿ9.ಕಾಮ್)

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

( Investment of Rs 10,000 made 20 years ago become Rs 2 crore in Bajaj Finance shares)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ