Sign In

By signing in or creating an account, you agree with Associated Broadcasting Company's Terms & Conditions and Privacy Policy.

Unemployment in India | ಕೊರೊನಾ ಭೀಕರತೆಗೆ ಮತ್ತೆ 70 ಲಕ್ಷ ಜನರಿಗೆ ಉದ್ಯೋಗ ನಷ್ಟ; ನಿರುದ್ಯೋಗ ದರ 4 ತಿಂಗಳ ಗರಿಷ್ಠ

ಭಾರತದಲ್ಲಿ 2021ರ ಏಪ್ರಿಲ್​ ತಿಂಗಳಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಆ ಮೂಲಕ ನಿರುದ್ಯೋಗ ದರವು ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 8 ತಲುಪಿದೆ.

Unemployment in India | ಕೊರೊನಾ ಭೀಕರತೆಗೆ ಮತ್ತೆ 70 ಲಕ್ಷ ಜನರಿಗೆ ಉದ್ಯೋಗ ನಷ್ಟ; ನಿರುದ್ಯೋಗ ದರ 4 ತಿಂಗಳ ಗರಿಷ್ಠ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 03, 2021 | 5:27 PM

ಭಾರತದ ನಿರುದ್ಯೋಗ ದರವು ಏಪ್ರಿಲ್​ ತಿಂಗಳಲ್ಲಿ 4 ತಿಂಗಳ ಗರಿಷ್ಠ ಮಟ್ಟವಾದ ಶೇ 8 ತಲುಪಿದೆ. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಬೇಕು ಎಂಬ ಉದ್ದೇಶಕ್ಕೆ ರಾಜ್ಯಗಳಲ್ಲಿ ಆಡಳಿತದಲ್ಲಿ ಇರುವ ಸರ್ಕಾರಗಳು ಲಾಕ್​ಡೌನ್ ವಿಸ್ತರಣೆ ಮಾಡುತ್ತಿರುವುದರಿಂದ ಬಾಹ್ಯನೋಟ ದುರ್ಬಲವಾಗಿಯೇ ಇದೆ. ಮಾರ್ಚ್​ ತಿಂಗಳಲ್ಲಿ ಇದ್ದ ಶೇ 6.5ರ ಪ್ರಮಾಣದಿಂದ ಏಪ್ರಿಲ್​ನಲ್ಲಿ ಶೇ 7.97ಕ್ಕೆ ಏರಿಕೆ ಕಂಡಿದೆ. ಖಾಸಗಿ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯಾ ಎಕಾನಮಿ ಪ್ರೈ. ಲಿಮಿಟೆಡ್ ಪ್ರಕಾರ, ಕಳೆದ ತಿಂಗಳು 70 ಲಕ್ಷಕ್ಕೂ ಹೆಚ್ಚು ಉದ್ಯೋಗ ನಷ್ಟವಾಗಿದೆ.

“ಉದ್ಯೋಗ ಲಭ್ಯತೆಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಲಾಕ್​ಡೌನ್ ಪರಿಣಾಮವಾಗಿ ಹೀಗಾಗಿದೆ,” ಎಂದು ಸಿಎಂಐಇ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ. “ವೈರಾಣು ಸನ್ನಿವೇಶ ಈಗಲೂ ತೀವ್ರವಾಗಿಸೆ ಮತ್ತು ನಾವು ವೈದ್ಯಕೀಯ ಆರೋಗ್ಯ- ಸೇವೆಗಳಿಗೆ ಒತ್ತು ನೀಡಿದ್ದೇ, ಮೇ ತಿಂಗಳಲ್ಲೂ ಇದೇ ರೀತಿಯ ಉದ್ವಿಗ್ನ ಸನ್ನಿವೇಶ ಇರಲಿದೆ,” ಎಂದು ಹೇಳಲಾಗಿದೆ.

ಭಾನುವಾರದಂದು ಭಾರತದಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ ದಾಖಲೆಯ 3689 ಮುಟ್ಟಿದೆ. ಸೋಮವಾರದಂದು ಸ್ವಲ್ಪ ಮಟ್ಟಿಗೆ ಹೊಸ ಪ್ರಕರಣಗಳು ಕಡಿಮೆ ಆಗಿದೆ. ಶನಿವಾರದಂದು 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಒಂದೇ ದಿನ ವರದಿ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿತ್ತು. ಒಂದು ವೇಳೆ ಉದ್ಯೋಗ ದರ ಹೀಗೆ ಕಡಿಮೆ ಆಗುತ್ತಾ ಸಾಗಿದರೆ ಭಾರತದ ಆರ್ಥಿಕತೆಯು ಈ ವರ್ಷ ಎರಡಂಕಿ ಮುಟ್ಟುವ ಸಾಧ್ಯತೆ ಕಡಿಮೆ. ಹಲವು ಅರ್ಥಶಾಸ್ತ್ರಜ್ಞರು ಈಗಾಗಲೇ ಬೆಳವಣಿಗೆ ದರದ ಅಂದಾಜು ಕಡಿಮೆ ಮಾಡಿದ್ದಾರೆ.

ಕೋವಿಡ್- 19 ಸನ್ನಿವೇಶವನ್ನು ಸರ್ಕಾರವು ನಿರ್ವಹಿಸುತ್ತಿರುವ ರೀತಿಯು ನಿರುದ್ಯೋಗ ದರ ಹೆಚ್ಚಳಕ್ಕೆ ಉಲ್ಟಾ ಹೊಡೆಯುತ್ತಿದೆ. ಇನ್ನು ಈಚೆಗೆ ಐಎಚ್​ಎಸ್ ಮಾರ್ಕ್​ಇಟ್ ಪ್ರತ್ಯೇಕ ಸಮೀಕ್ಷೆಯಂತೆ, ಉತ್ಪಾದನಾ ವಲಯದಲ್ಲಿ ಏಪ್ರಿಲ್​ನಲ್ಲೂ ಉದ್ಯೋಗ ನಷ್ಟವಾಗುತ್ತಿದೆ. ಆದರೆ ಲ:ಎದ 13 ತಿಂಗಳಿಗೆ ಹೋಲಿಸಿದರೆ ಉದ್ಯೋಗ ನಷ್ಟ ಸ್ವಲ್ಪ ದುರ್ಬಲವಾಗಿದೆ ಎಂದು ಸಿಎಂಐಇ ದತ್ತಾಂಶ ತೋರಿಸಿದೆ. ಸರ್ಕಾರದಿಂದ ರಿಯಲ್​ಟೈಮ್ ಉದ್ಯೋಗ ಮಾಹಿತಿ ಅಧಿಕೃತವಾಗಿ ಹೊರಬಾರದಿದ್ದಾಗ ಅರ್ಥಶಾಸ್ತ್ರಜ್ಞರು ಆ ಬಗ್ಗೆ ನಿಗಾ ವಹಿಸುತ್ತಾರೆ. ಕಾರ್ಮಿಕರು ಹಳ್ಳಿಗಳಿಗೆ ಹಿಂತಿರುಗಿರುವುದರಿಂದ ಕೆಲಸ ಇಲ್ಲದಿರುವುದು ನಗರ ಪ್ರದೇಶದಲ್ಲಿ ಹೆಚ್ಚಿದೆ.

ಕಾರ್ಮಿಕರು ಕೆಲಸದಲ್ಲಿ ಇರುವುದು ಮತ್ತು ಕೆಲಸ ಹುಡುಕುತ್ತಿರುವುದು ಈ ಎರಡೂ ಸೇರಿ, ಕಾರ್ಮಿಕರ ಭಾಗವಹಿಸುವಿಕೆ ಏಪ್ರಿಲ್ ತಿಂಗಳಲ್ಲಿ ಶೇ 40ಕ್ಕಿಂತ ಕಡಿಮೆ ಇದೆ. “ಇದು ಆರ್ಥಿಕತೆಗೆ ದುಪ್ಪಟ್ಟು ಹೊಡೆತ,” ಎಂದು ವ್ಯಾಸ್ ಹೇಳಿದ್ದಾರೆ. “ಕೆಲವು ಕಾರ್ಮಿಕರು ಬೇಸರಗೊಂಡು ಕಾರ್ಮಿಕರ ಮಾರ್ಕೆಟ್ ಬಿಟ್ಟಿದ್ದಾರೆ. ಯಾರಿಗೆ ಅಗತ್ಯ ಇದೆಯೋ ಅವರಿಗೆ ಅಗತ್ಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಭಾರತದ ಆರ್ಥಿಕತೆಗೆ ಆಗುತ್ತಿಲ್ಲ ಎಂಬುದೇ ಸಮಸ್ಯೆ. ಆದ್ದರಿಂದ ಆದಾಯ ಕುಸಿಯುತ್ತಿದೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್ ಹಿನ್ನೆಲೆ ಮನೆ ಬಾಡಿಗೆದಾರರು, ಕಂಪನಿ ಉದ್ಯೋಗಿಗಳಿಗೆ ಹೊಸ ಆದೇಶ ಕೊಟ್ಟ ಸರ್ಕಾರ

(More than 70 lakh job loss in April month and unemployment rate reached 8%. By this unemployment at 4 month high level due to corona pandemic)

IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ