ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾಗೆ ಆಗಮಿಸಿದ್ದಾರೆ. 3 ದಿನಗಳ ಭೇಟಿಯ ಸಮಯದಲ್ಲಿ ಅವರು ರಕ್ಷಣಾ ಒಪ್ಪಂದ, ವ್ಯಾಪಾರದ ಕುರಿತು ಮಾತುಕತೆ ನಡೆಯುವ ಸಾಧ್ಯತೆ ಇದೆ. ರಕ್ಷಣಾ, ಇಂಧನ ಮತ್ತು ವ್ಯಾಪಾರದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಭೇಟಿಗಾಗಿ ಶ್ರೀಲಂಕಾಗೆ ಆಗಮಿಸಿದ್ದಾರೆ. ಅಧ್ಯಕ್ಷ ದಿಸನಾಯಕ ಅವರ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಪ್ರವಾಸವಾಗಿದೆ.
ಕೊಲಂಬೋ, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ರೀಲಂಕಾದ ಕೊಲಂಬೊಗೆ ಆಗಮಿಸಿದ್ದಾರೆ. ಮಳೆಯ ನಡುವೆಯೂ ಶ್ರೀಲಂಕಾದ 6 ಉನ್ನತ ಸಚಿವರು ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ವಿಶೇಷವಾಗಿ ಸ್ವಾಗತಿಸಿದರು. ಹಾಗೇ, ಸಾಂಪ್ರದಾಯಿಕವಾಗಿ ಸಿದ್ಧವಾಗಿದ್ದ ಕಲಾವಿದರು ಮೋದಿಗೆ ಆತ್ಮೀಯ ಸ್ವಾಗತ ಕೋರಿದರು. ಶ್ರೀಲಂಕಾದ ಸಚಿವರಾದ ವಿಜಿತಾ ಹೆರಾತ್, ನಲಿಂದಾ ಜಯತಿಸ್ಸ, ಅನಿಲ್ ಜಯಂತ, ರಾಮಲಿಂಗಂ ಚಂದ್ರಶೇಖರ್, ಸರೋಜಾ ಸಾವಿತ್ರಿ ಪೌಲ್‌ರಾಜ್ ಮತ್ತು ಕ್ರಿಶಾಂತ ಅಬೇಸೇನ ಇಂದು ಸಂಜೆ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Apr 04, 2025 09:32 PM
Latest Videos