ಪ್ರಧಾನಿ ಮೋದಿ ಬಳಿ ರಾಷ್ಟ್ರಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರು ಪ್ರಧಾನಿ ಮೋದಿಯವರನ್ನು ಭಾರತದ ಧ್ವಜದಲ್ಲಿರುವ ಅಶೋಕ ಚಕ್ರದ ಬಗ್ಗೆ ಕೇಳಲು ಮಧ್ಯದಲ್ಲೇ ನಿಂತಿದ್ದಾರೆ. ಮೋದಿಯವರೊಂದಿಗೆ ಸಾಗುತ್ತಿದ್ದ ಚಿಲಿಯ ಅಧ್ಯಕ್ಷ ಅರ್ಧದಲ್ಲೇ ನಿಂತು ಭಾರತದ ತ್ರಿವರ್ಣ ಧ್ವಜದ ಮಧ್ಯೆ ಇರುವ ಅಶೋಕಚಕ್ರದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮೋದಿ ಆ ಬಗ್ಗೆ ವಿವರಿಸಿದ್ದಾರೆ.
ನವದೆಹಲಿ, ಏಪ್ರಿಲ್ 1: ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಭೇಟಿಯ ಸಂದರ್ಭದಲ್ಲಿ ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ (Gabriel Boric) ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಬಳಿ ಭಾರತದ ಧ್ವಜದಲ್ಲಿರುವ ಅಶೋಕ ಚಕ್ರದ ಬಗ್ಗೆ ಕೇಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಚಿಲಿಯ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಬೋರಿಕ್ ಮತ್ತು ಮೋದಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದರು. ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಧ್ವಜದಲ್ಲಿರುವ ಅಶೋಕ ಚಕ್ರದ ಮಹತ್ವದ ಬಗ್ಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದರು. ಬೋರಿಕ್ ಭಾರತೀಯ ಧ್ವಜದ ಬಳಿ ನಿಂತು, ಅಶೋಕ ಚಕ್ರವನ್ನು ತೋರಿಸುತ್ತಾ ಇದರ ವಿಶೇಷತೆಯೇನು? ಎಂದು ಕೇಳಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಮುಂದೆ ಬಂದು ಅದರ ಮಹತ್ವವನ್ನು ವಿವರಿಸಿದ್ದಾರೆ. ಅಶೋಕ ಚಕ್ರವು 24 ಗೆರೆಗಳನ್ನು ಹೊಂದಿರುವ ಕಡು ನೀಲಿ ಬಣ್ಣದ ಚಕ್ರವಾಗಿದ್ದು, ಇದು ಪ್ರಗತಿ, ಕರ್ತವ್ಯ ಮತ್ತು ಇತರ ವಿವಿಧ ಮೌಲ್ಯಗಳನ್ನು ಸಂಕೇತಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ