ಬೇರೆಯವರ ಭ್ರಷ್ಟಾಚಾರವನ್ನು ಮಾತಾಡುವ ಯತ್ನಾಳ್ ಖುದ್ದು ಒಬ್ಬ ಭ್ರಷ್ಟಾಚಾರಿ: ಎಎಸ್ ಪಾಟೀಲ್ ನಡಹಳ್ಳಿ
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಪಣ ತೊಟ್ಟವರಂತೆ ಮಾತಾಡುವ ಯತ್ನಾಳ್ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಒಮ್ಮೆಯೂ ಆ ಭಾಗದ ಸಮಸ್ಯೆಗಳನ್ನೂ ಚರ್ಚಿಸಿಲ್ಲ ಎಂದು ಹೇಳುವ ನಡಹಳ್ಳಿ ತಾನು ಶಾಸಕನಾಗಿದ್ದಾಗ ಸಮಸ್ಯೆಗಳ ಪುಸ್ತಕ ಮಾಡಿ ಹಂಚಿದ್ದನ್ನು, ಅಧಿವೇಶನ ನಡೆಯುವಾಗ ಪದೇಪದೆ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದನ್ನು ಮತ್ತು ಎಲ್ಲದರ ದಾಖಲೆ ತನ್ನಲ್ಲಿ ಇರೋದನ್ನು ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 1: ಮಾಜಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಇಂದು ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ಭ್ರಷ್ಟಾಚಾರದ ಅರೋಪ ಮಾಡಿದರು. ವಿಜಯಪುರದ ಮೂಲಕ ಹಾದು ಹೋಗುವ ರಾಷ್ಟ್ರಿಯ ಹೆದ್ದಾರಿಯಲ್ಲಿ ಯತ್ನಾಳ್ ಸ್ಮಾರ್ಟ್ ಆಡಿಟೋರಿಯಂ ಒಂದನ್ನು ಕಟ್ಟಿದ್ದಾರಂತೆ, ಅದಕ್ಕಾಗಿ ಬಹಳಷ್ಟು ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ, ಅದರೆ ಯತ್ನಾಳ್ ಮಾತ್ರ ತಮ್ಮ ಜಮೀನಿಗೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಎನ್ಒಸಿ ತೆಗೆದುಕೊಂಡು ₹55 ಕೋಟಿಯನ್ನು ಲೂಟಿ ಹೊಡೆಯುವ ಕೆಲಸ ಮಾಡಿದ್ದಾರೆ, ಈ ಅವ್ಯವಹಾರದ ದಾಖಲೆ ತನ್ನಲ್ಲಿದೆ ಎಂದು ನಡಹಳ್ಳಿ ಹೇಳಿದರು.
ಇದನ್ನೂ ಓದಿ: ಜನ ಏನಾದರೂ ಹೇಳಲಿ, 2028ರಲ್ಲಿ ರಾಜ್ಯದ ಮುಖ್ಯಮಂತ್ರಿ ನಾನೇ: ಬಸನಗೌಡ ಪಾಟೀಲ್ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ