ಯತ್ನಾಳ್ ಉಚ್ಚಾಟಿಸಿದ್ದಕ್ಕೆ ಪ್ರತಿಭಟನೆಗೆ ಸೇರಿದ್ದು 40 ಜನ: ಎಎಸ್ ಪಾಟೀಲ್ ನಡಹಳ್ಳಿ
ಬಸನಗೌಡ ಯತ್ನಾಳ್ ಪರ ಅವರ ಬೆಂಬಲಿಗರು ಪ್ರತಿಭಟನೆ ಮಾಡಿದರೆ ತಮ್ಮದೇನೂ ಆಭ್ಯಂತರವಿಲ್ಲ, ಅವರು ಎಷ್ಟು ಬೇಕಾದರೂ ಪ್ರತಿಭಟನೆ ನಡೆಸಲಿ, ಅದರೆ ಬಸನಗೌಡ ಯತ್ನಾಳ್ ಬಿಜೆಪಿ ನಾಯಕರ ವಿರುದ್ಧ ತಮ್ಮ ನಾಲಗೆ ಹರಿಬಿಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಎಸ್ ಪಾಟೀಲ್ ನಡಹಳ್ಳಿ ಹೇಳಿದರು. ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಪರ ನಿಷ್ಠರು ಈಗ ಯತ್ನಾಳ್ಗೆ ಎಚ್ಚರಿಕೆ ನೀಡಲಾರಂಭಿಸಿದ್ದಾರೆ.
ಬೆಂಗಳೂರು, ಮಾರ್ಚ್ 31: ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದನ್ನೆಲ್ಲ ನಂಬುವ ಅವಶ್ಯಕತೆಯಿಲ್ಲ, ತಮ್ಮನ್ನು ಉಚ್ಚಾಟಿಸಿದರೆ ಅನೇಕ ಬಿಜೆಪಿ ಮುಖಂಡರು ಸಾಮೂಹಿಕ ರಾಜೀನಾಮೆ (mass resignation) ಸಲ್ಲಿಸುತ್ತಾರೆ ಎಂದು ಅವರು ಹೇಳಿದ್ದರು, ಆದರೆ ಕೇವಲ ಇಬ್ಬರು ಮಾತ್ರ ಇದುವರೆಗೆ ರಾಜೀನಾಮೆ ಸಲ್ಲಿಸಿರೋದು ಎಂದು ಬಿಜೆಪಿ ಮಾಜಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಹೇಳಿದರು. ಯತ್ನಾಳ್ ಉಚ್ಚಾಟನೆಯಾದ ಮರುದಿನ ವಿಜಯಪುರದ ಗಾಂಧಿ ಚೌಕ್ನಲ್ಲಿ 40 ಜನ ಪ್ರತಿಭಟನೆಗೆ ಸೇರಿದ್ದರು, ಸಿದ್ದೇಶ್ವರ ಬ್ಯಾಂಕಲ್ಲಿದ್ದ ಜನರನ್ನು ಕರೆತಂದು ಪ್ರತಿಭಟನೆ ಮಾಡಿಸಲಾಯಿತು ಎಂದು ನಡಹಳ್ಳಿ ಹೇಳಿದರು.
ಇದನ್ನೂ ಓದಿ: ಹೊಸ ಪಕ್ಷ ಕಟ್ಟಲ್ಲ, ವಾಪಸ್ಸು ಕರೆಸಿಕೊಳ್ಳಿ ಅಂತ ಬೇಡಲ್ಲ, ಹೋರಾಟ ಮಾಡಿ ಬಿಜೆಪಿಯನ್ನು ರಿಪೇರಿ ಮಾಡ್ತೀನಿ: ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ