ಬಸನಗೌಡ ಯತ್ನಾಳ್ ಈಗ ಸ್ವತಂತ್ರರು, ಒಂದ್ಯಾಕೆ ನಾಲ್ಕು ಹೊಸ ಪಕ್ಷ ಕಟ್ಟಲಿ: ರಾಜುಗೌಡ, ಮಾಜಿ ಶಾಸಕ
ಬಸನಗೌಡ ಯತ್ನಾಳ್ ಅವರನ್ನು ವಾಪಸ್ಸು ಸೇರಿಸಿಕೊಳ್ಳುವಂತೆ ಮನವರಿಕೆ ಮತ್ತು ಮನವಿ ಮಾಡೋದು ಬೇರೆ ವಿಚಾರ, ಹಾಗೆ ಮಾಡಬೇಕಿದ್ದರೆ ಮಾಧ್ಯಮಗಳ ಮುಂದೆ ಹೇಳುವ ಅವಶ್ಯಕತೆ ಇಲ್ಲ, ಅದು ಕೇವಲ ಮಾಧ್ಯಮ ಹೇಳಿಕೆ ಅನಿಸಿಕೊಳ್ಳುತ್ತದೆ, ವರಿಷ್ಠರನ್ನು ಭೇಟಿಯಾಗಿ ಮಾತಾಡುವುದು ಪಕ್ಷದ ನಾಯಕರ ಸುಪರ್ದಿಗೆ ಬಿಟ್ಟ ವಿಚಾರ, ಮುಂಬರುವ ದಿನಗಳಲ್ಲಿ ಎಲ್ಲ ಸರಿಹೋಗಬಹುದು ಎಂದು ರಾಜುಗೌಡ ಹೇಳಿದರು.
ಬೆಂಗಳೂರು, ಮಾರ್ಚ್ 31: ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಶಾಸಕ ನರಸಿಂಹ ನಾಯಕ್ (ರಾಜುಗೌಡ), ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದರು. ಅವರಿಗೆ ಈಗ ಪಕ್ಷದ ಕಟ್ಟಪಾಡುಗಳಿಲ್ಲ, ಸಂಪೂರ್ಣವಾಗಿ ಸ್ವತಂತ್ರರಾಗಿರುವುದರಿಂದ ಏನು ಬೇಕಾದರು ಮಾತಾಡಬಹುದು, ಏನಾದರೂ ಸಲಹೆ ಸೂಚನೆ ನೀಡಬೇಕೆಂದರೂ ಆಗದು, ಹೊಸ ಪಕ್ಷ ಕಟ್ಟುವುದೇ ಅವರ ಮುಂದಿನ ಗುರಿಯಾಗಿದ್ದರೆ, ಒಂದ್ಯಾಕೆ 4 ಪಕ್ಷಗಳನ್ನು ಕಟ್ಟಲಿ ಎಂದು ರಾಜುಗೌಡ ಹೇಳಿದರು.
ಇದನ್ನೂ ಓದಿ: ಕುತೂಹಲ ಮೂಡಿಸಿದ ಬಸನಗೌಡ ಯತ್ನಾಳ್ ಮತ್ತು ಧಾರವಾಡ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ಭೇಟಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ