ಬಸನಗೌಡ ಯತ್ನಾಳ್ಗೆ ದೊಡ್ಡ ಅನ್ಯಾಯವಾಗಿದೆ, ಬಿಜೆಪಿ ಕಟ್ಟಿ ಬೆಳೆಸಿದವರಲ್ಲಿ ಅವರೂ ಒಬ್ಬ: ಶಿವರಾಜ ತಂಗಡಿಗಿ
ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಗೌರವ ಇಲ್ಲ ಅಲ್ಲೋದು ಯತ್ನಾಳ್ ಉಚ್ಚಾಟನೆಯಿಂದ ಸ್ಪಷ್ಟವಾಗುತ್ತದೆ, ಬಿಜೆಪಿಗೆ ಉತ್ತರ ಕರ್ನಾಟಕದಲ್ಲಿ ಅವರಷ್ಟು ಪ್ರಭಾವಿ ನಾಯಕ ಯಾರೂ ಇಲ್ಲ, ಅದರೆ ಒಂದು ಮಾತು ಮಾತ್ರ ಸತ್ಯ, ಅವರ ಉಚ್ಚಾಟನೆಯಿಂದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೊಪ್ಪಳ, ಮಾರ್ಚ್ 31: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಿಗಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಒಂದು ಕಾಲದಲ್ಲಿ ಜೊತೆಯಾಗಿದ್ದವರು. ಹಾಗಾಗೇ, ಸಚಿವನಿಗೆ ಯತ್ನಾಳ್ ಬಗ್ಗೆ ಸ್ವಲ್ಪ ಜಾಸ್ತಿಯೇ ಗೊತ್ತಿರಬಹುದು. ಯತ್ನಾಳ್, ಪಕ್ಷದ ಒಬ್ಬ ಹಿರಿಯ ನಾಯಕನಾಗಿದ್ದ ಯತ್ನಾಳ್ ಅವರಿಗೆ ತೀವ್ರ ಅನ್ಯಾಯವಾಗಿದೆ, ಯಾಕೆಂದರೆ ಬಿಎಸ್ ಯಡಿಯೂರಪ್ಪ ಮತ್ತು ಅನಂತಕುಮಾರ್ ಪಕ್ಷವನ್ನು ಕಟ್ಟುವಾಗ ಅವರೊಂದಿಗೆ ಪಕ್ಷ ಸಂಘಟನೆಯಲ್ಲಿ ದುಡಿದಿದ್ದರು, ಉತ್ತರ ಕರ್ನಾಟಕದಿಂದ ಕೇವಲ ಅವರು ಮಾತ್ರ ಬಿಜೆಪಿಯಿಂದ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದರು ಎಂದು ಹೇಳಿದರೆ ಅತಿಶಯೋಕ್ತಿ ಅನಿಸದು ಎಂದು ತಂಗಡಿಗಿ ಹೇಳಿದರು.
ಇದನ್ನೂ ಓದಿ: ಬಸನಗೌಡ ಯತ್ನಾಳ್ ಇಚ್ಛಿಸಿದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳೋದು ಕಷ್ಟ: ಎಂಬಿ ಪಾಟೀಲ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ