ಬಸನಗೌಡ ಯತ್ನಾಳ್ರನ್ನು ಉಚ್ಚಾಟಿಸಿ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಕೆಟ್ಟ ಸಂದೇಶ ನೀಡಿದೆ: ಶಿವರಾಜ ತಂಗಡಿಗಿ
ಯತ್ನಾಳ್ ಅವರನ್ನು ಉಚ್ಚಾಟಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಲಾಭವೂ ಅಲ್ಲ ನಷ್ಟವೂ ಅಲ್ಲ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅವರ ಪ್ರಚಾರದ ಹೊರತಾಗಿಯೂ ತಮ್ಮ ಪಕ್ಷ 136 ಸ್ಥಾನಗಳನ್ನು ಗೆದ್ದಿತ್ತು, ಅವರು ಕಾಂಗ್ರೆಸ್ ಗೆ ಬರುತ್ತೇನೆಂದರೆ ಸೇರಿಸಿಕೊಳ್ಳುವುದು ಬಿಡೋದು ಹೈಕಮಾಂಡ್ಗೆ ಬಿಟ್ಟಿರುವ ವಿಚಾರ, ಅದರೆ ಅವರೊಬ್ಬ ಉತ್ತಮ ನಾಯಕ ಎಂದು ಸಚಿವ ಹೇಳಿದರು.
ಕೊಪ್ಪಳ, ಮಾರ್ಚ್ 29: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಲ್ಲಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಮತ್ತು ನಾಯಕರ ಬಗ್ಗೆ ಟೀಕೆ ಮಾಡುತ್ತಿದ್ದರೇ ಹೊರತು ವೈಯಕ್ತಿಕವಾಗಿ ಏನೂ ಹೇಳಿದವರಲ್ಲ ಎಂದು ಸಚಿವ ಶಿವರಾಜ ತಂಗಡಿಗೆ (Shivaraj Tangadigi) ಹೇಳಿದರು. ಅವರೊಬ್ಬ ಹಿರಿಯ ನಾಯಕ ಮತ್ತು ವಿಜಯೇಂದ್ರ ರಾಜಕೀಯದಲ್ಲಿ ಕಣ್ಣುಬಿಡುವ ಮೊದಲೇ ಕೇಂದ್ರದಲ್ಲಿ ಸಚಿವರಾಗಿದ್ದರು. ಲಿಂಗಾಯತರು ಅತಿಹೆಚ್ಚು ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕದಲ್ಲಿ ಯತ್ನಾಳ್ ಅತ್ಯಂತ ಪ್ರಭಾವಶಾಲಿ ನಾಯಕ, ಅವರನ್ನು ಉಚ್ಚಾಟಿಸುವ ಮೂಲಕ ಬಿಜೆಪಿ ಆ ಸಮುದಾಯಕ್ಕೆ ಕೆಟ್ಟ ಸಂದೇಶ ನೀಡಿದೆ ಎಂದು ತಂಗಡಿಗಿ ಹೇಳಿದರು.
ಇದನ್ನೂ ಓದಿ: ಯತ್ನಾಳ್ ಫೈರ್ ಬ್ರ್ಯಾಂಡ್ ಲೀಡರ್, ಸ್ವಂತ ತಾಕತ್ತಿನ ಮೇಲೆ 140 ಸೀಟು ಗೆಲ್ಲುತ್ತಾರೆ; ವ್ಯಂಗ್ಯವಾಡಿದ ಬಿಜೆಪಿ ಮುಖಂಡ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ