ಯತ್ನಾಳ್ ಫೈರ್ ಬ್ರ್ಯಾಂಡ್ ಲೀಡರ್, ಸ್ವಂತ ತಾಕತ್ತಿನ ಮೇಲೆ 140 ಸೀಟು ಗೆಲ್ಲುತ್ತಾರೆ; ವ್ಯಂಗ್ಯವಾಡಿದ ಬಿಜೆಪಿ ಮುಖಂಡ
ವರಿಷ್ಠರು ಅವರನ್ನು ಪಕ್ಷದಿಂದ ವಜಾ ಮಾಡಿ ಒಳ್ಳೇ ಕೆಲಸವನ್ನೇ ಮಾಡಿದ್ದಾರೆ, ಅವರು ಬಿಜೆಪಿಗೆ ಬರುವ ಮೊದಲು ಜಿಲ್ಲೆಯಲ್ಲಿ ಪಕ್ಷದಿಂದ ಐವರು ಶಾಸಕರಿದ್ದರು, ಈಗ ಅವರೊಬ್ಬರೇ ಇದ್ದಾರೆ ಎಂದು ಗೋಪಾಲ್ ಹೇಳಿದರು. ತಮ್ಮೊಂದಿಗೆ ಅಪಾರವಾದ ಸಂಖ್ಯೆಯಲ್ಲಿ ಬೆಂಬಲಿಗರಿದ್ದಾರೆ ಎಂದು ಯತ್ನಾಳ್ ಭಾವಿಸಿದ್ದಾರೆ, ಅದರೆ, ಪಕ್ಷದೊಂದಿಗೆ ಗಟ್ಟಿಯಾಗಿರುವವರು ಪಕ್ಷದಲ್ಲೇ ಇದ್ದಾರೆ ಎಂದು ಗೋಪಾಲ್ ಹೇಳಿದರು.
ವಿಜಯಪುರ, ಮಾರ್ಚ್ 28: ಪಕ್ಷದಿಂದ ಉಚ್ಚಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷಕ್ಕೆ ವಾಪಸ್ಸಾಗಲು ತಮ್ಮ ಬೆಂಬಲಿಗರಿಂದ ಅಲ್ಲಿಲ್ಲಿ ಪ್ರತಿಭಟನೆ ಮಾಡಿಸುವ ಬದಲು ಹಿಂದೂತ್ವದ ಆಧಾರದ ಮೇಲೆ ಪಕ್ಷ ಕಟ್ಟಿ ಚುನಾವಣೆಯಲ್ಲಿ ಹೋರಾಡಲಿ ಎಂದು ವಿಜಯಪುರ ಬಿಜೆಪಿ ಮುಖಂಡ ಗೋಪಾಲ್ ಹೇಳಿದರು. ಗೌಡರು ಫೈರ್ ಬ್ರ್ಯಾಂಡ್ ನಾಯಕ, ಹಿಂದೂ ಹುಲಿ ಮತ್ತು ಮಾಸ್ ಲೀಡರ್, ತಮ್ಮದೇ ಆದ ಪಕ್ಷಕಟ್ಟಿ 140 ಸೀಟು ಗೆಲ್ಲುವುದು ಕಷ್ಟವೇನಲ್ಲ ಎಂದು ಗೋಪಾಲ ವ್ಯಂಗ್ಯವಾಡಿದರು. ಅವರ ಉಚ್ಚಾಟನೆಯಿಂದ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ; ವಿಜಯಪುರದಲ್ಲಿ ರಾಜೀನಾಮೆಗಳ ಪರ್ವ ಆರಂಭ
ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ