ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ; ವಿಜಯಪುರದಲ್ಲಿ ರಾಜೀನಾಮೆಗಳ ಪರ್ವ ಆರಂಭ
ವಿಜಯಪುರದಲ್ಲಿ ಬಿಜೆಪಿಯ ಮಹಿಳಾ ಮೋರ್ಚಾಗೆ ಬಲಬಂದಿದ್ದೇ ನಮ್ಮ ಸಾಹೇಬರಿಂದ (ಬಸನಗೌಡ ಯತ್ನಾಳ್), ಮಹಿಳೆಯರು ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕೆಂದು, ಮನೆಯಿಂದ ಅಚೆಬಂದು ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಹೇಳುತ್ತಾರೆ, ಕಣ್ಣೀರು ಹಾಕೋದು ಬೇಡ ಅಂದುಕೊಂಡರೂ ಅದು ತಾನಾಗಿ ಬರುತ್ತಿದೆ, ಅವರಿಲ್ಲದೆ ನಾವು ಪಕ್ಷದಲ್ಲಿ ಇರಲ್ಲ ಎಂದು ಮಹಿಳಾ ಮೋರ್ಚಾದ ಅಧ್ಯಕ್ಷೆ ಲಕ್ಷ್ಮಿ ಕನ್ನೊಳ್ಳಿ ಹೇಳುತ್ತಾರೆ.
ವಿಜಯಪುರ, ಮಾರ್ಚ್ 28: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದಕ್ಕೆ ಅಸಮಾಧಾನಗೊಂಡಿರುವ ಪಕ್ಷದ ನಗರ ಮಂಡಳ, ಎಸ್ಸಿ ಮೋರ್ಚಾ ಮತ್ತು ಮಹಿಳಾ ಮೋರ್ಚಾದ ಪದಾಧಿಕಾರಿಗಳು (office bearers) ಇವತ್ತು ಜಿಲ್ಲಾಧ್ಯಕ್ಷರಿಗೆ ತಮ್ಮ ರಾಜೀನಮೆ ಸಲ್ಲಿಸಿದ್ದಾರೆ. ಎಸ್ಸಿ ಮೋರ್ಚಾದ ಅಧ್ಯಕ್ಷ ಪ್ರವೀಣ್ ಕಾಂಬ್ಳೆ ನಮ್ಮ ವಿಜಯಪುರ ವರದಿಗಾರನೊಂದಿಗೆ ಮಾತಾಡಿದ್ದು, ಯತ್ನಾಳ್ ಅವರಿಲ್ಲದಿದ್ದರೆ ಪಕ್ಷದ ವರ್ಚಸ್ಸು ಇರಲ್ಲ ಮತ್ತು ಅಧಿಕಾರಕ್ಕೆ ಬರೋದು ಸಾಧ್ಯವೇ ಇಲ್ಲ, ಅವರನ್ನು ಪಕ್ಷಕ್ಕೆ ವಾಪಸ್ಸು ಕರೆಸಿಕೊಳ್ಳದ ಹೊರತು ತಾವ್ಯಾರೂ ವಾಪಸ್ಸಾಗಲ್ಲ ಎಂದು ಹೇಳಿದರು.
ಇದನ್ನೂ ಓದಿ: ನಿನ್ನೆ ಚಿಂಚೋಳಿಯಲ್ಲಿದ್ದ ಬಸನಗೌಡ ಯತ್ನಾಳ್ ಇಂದು ಹೈದರಾಬಾದ್ ಮೂಲಕ ಬೆಂಗಳೂರಿಗೆ ಆಗಮನ
ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ