ನಿನ್ನೆ ಚಿಂಚೋಳಿಯಲ್ಲಿದ್ದ ಬಸನಗೌಡ ಯತ್ನಾಳ್ ಇಂದು ಹೈದರಾಬಾದ್ ಮೂಲಕ ಬೆಂಗಳೂರಿಗೆ ಆಗಮನ
ರಾಜ್ಯದ ರಾಜಕೀಯ ವಲಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಂದಿನ ನಡೆ ಏನು ಅನ್ನೋದು ತೀವ್ರ ಕುತೂಹಲಕ್ಕೆಡೆ ಮಾಡಿದೆ. 6-ವರ್ಷ ಅವಧಿಗೆ ಉಚ್ಚಾಟನೆ ಎಂದರೆ ದೀರ್ಘಾವಧಿಯೇ ಸರಿ. ಅವರಿಗೀಗ 62 ರ ಪ್ರಾಯ, ಉಚ್ಚಾಟನೆ ಅವಧಿಯನ್ನು ಮುಗಿಸುವ ಹೊತ್ತಿಗೆ 68-ವರ್ಷದವರಾಗಿರುತ್ತಾರೆ. ಅಷ್ಟರಲ್ಲಾಗಲೇ 2028ರ ವಿಧಾನಸಭಾ ಚುನಾವಣೆ ಮತ್ತು 2029ರ ಲೋಕಸಭಾ ಚುನಾವಣೆ ಮುಗಿದಿರುತ್ತವೆ.
ಬೆಂಗಳೂರು, ಮಾರ್ಚ್ 28: ನಿನ್ನೆ ಚಿಂಚೋಳಿಯಲ್ಲಿದ್ದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಬೆಂಗಳೂರಿಗೆ ಆಗಮಿಸಿದರು. ಚಿಂಚೋಳಿಯಿಂದ ಹೈದರಾಬಾದ್ ಹೋಗಿ ಅಲ್ಲಿಂದ ಅವರು ಫ್ಲೈಟ್ ಹತ್ತಿ ಬೆಂಗಳೂರು ಆಗಮಿಸಿದರೆಂದು ನಮ್ಮ ಬೆಂಗಳೂರು ವರದಿಗಾರ ಹೇಳುತ್ತಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯತ್ನಾಳ್ ಕಾರಲ್ಲಿ ಹೊರಬೀಳುವುದನ್ನು ಇಲ್ಲಿ ನೋಡಬಹುದು. ಉಚ್ಚಾಟನೆಯ ಬಳಿಕ ಅವರು ಮಾಧ್ಮಮಗಳ ಜೊತೆ ಮಾತಾಡುವ ಗೋಜಿಗೆ ಹೋಗುತ್ತಿಲ್ಲ.
ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಷ್ಠುರವಾಗಿ ಮಾತಾಡುವವರನ್ನು ಯಾವ ಪಕ್ಷವೂ ಇಟ್ಟುಕೊಳ್ಳಲ್ಲ, ಹಾಗಾಗೇ ಯತ್ನಾಳ್ ಬೆಲೆ ತೆತ್ತಿದ್ದಾರೆ: ಬಾಲಕೃಷ್ಣ