ನಿಷ್ಠುರವಾಗಿ ಮಾತಾಡುವವರನ್ನು ಯಾವ ಪಕ್ಷವೂ ಇಟ್ಟುಕೊಳ್ಳಲ್ಲ, ಹಾಗಾಗೇ ಯತ್ನಾಳ್ ಬೆಲೆ ತೆತ್ತಿದ್ದಾರೆ: ಬಾಲಕೃಷ್ಣ
ತಾನು ಬಿಜೆಪಿ ಬಿಟ್ಟು ಹೊರಬಂದಾಗ ಅಲ್ಲಿನ್ನೂ ಕುಟುಂಬ ರಾಜಕಾರಣ ಶುರುವಾಗಿರಲಿಲ್ಲ, ಅದರೆ ನಂತರ ಸೇರಿದ ಜೆಡಿಎಸ್ ಪಕ್ಷ ದಲ್ಲಿ ಅದು ಶುರುವಾಗಿದ್ದರಿಂದ ಅದನ್ನೂ ಬಿಟ್ಟು ಕಾಂಗ್ರೆಸ್ ಗೆ ಬರಬೇಕಾಯಿತು ಎಂದು ಹೇಳಿದ ಬಾಲಕೃಷ್ಣ, ಯತ್ನಾಳ್ ಕಾಂಗ್ರೆಸ್ ಪಕ್ಷ ಸೇರುತ್ತೇನೆಂದರೆ ಸ್ವಾಗತಿಸಲು ತಾನ್ಯಾರೂ ಅಲ್ಲ, ಹೈಕಮಾಂಡ್ ಇದೆ, ರಾಜ್ಯ ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರಿದ್ದಾರೆ, ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ರಾಮನಗರ, ಮಾರ್ಚ್ 27: ನೇರ ಮತ್ತು ನಿಷ್ಠುರವಾಗಿ ಮಾತಾಡುವವರು ಯಾವ ಪಕ್ಷದಲ್ಲೂ ಇರಲಾಗಲ್ಲ, ನಿಷ್ಠುರವಾಗಿ ಮಾತಾಡಿದ್ದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ಹೇಳಿದರು. ಪಕ್ಷದಿಂದ ಉಚ್ಚಾಟನೆಗೊಳ್ಳುವುದು ಅವರಿಗೆ ಇದು ಮೊದಲ ಸಲವೇನಲ್ಲ, ಬಿಜೆಪಿ ಅವರನ್ನು ಜಿವಿತಾವಧಿಗೆ ವಜಾ ಮಾಡಲಾರದು, ಕರ್ನಾಟಕದಲ್ಲಿ ಅವರಿಲ್ಲದೆ ಅಧಿಕಾರಕ್ಕೆ ಬರೋದು ಸಾಧ್ಯವಿಲ್ಲ ಅಂತ ಬಿಜೆಪಿ ನಾಯಕರಿಗೂ ಗೊತ್ತಿದೆ ಎಂದು ಬಾಲಕೃಷ್ಣ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಲ್ಟಿ ಹೊಡೆದ ಆಟೋವನ್ನು ಮೇಲೆತ್ತಿದ ಶಾಸಕ: ಮಾನವೀಯತೆ ಮೆರೆದ ಹೆಚ್ಸಿ ಬಾಲಕೃಷ್ಣ
Latest Videos