ಸಚಿವರೊಬ್ಬರು ಹನಿಟ್ರ್ಯಾಪ್ ಅಗಿರುವ ವಿಚಾರ ಗೊತ್ತಿಲ್ಲ, ಮಾಹಿತಿಯಿಲ್ಲದೆ ತೇಜೋವಧೆ ಮಾಡೋದು ಸರಿಯಲ್ಲ: ಬಾಲಕೃಷ್ಣ
ಯಾರೂ ನಮ್ಮನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡಲ್ಲ, ನಾವು ಸರಿಯಾಗಿರಬೇಕು, ನಮ್ಮ ನಡಾವಳಿ ಮತ್ತು ಸಾರ್ವಜನಿಕ ವರ್ತನೆ ನೆಟ್ಟಿಗಿರಬೇಕು, ಜನ ನಮ್ಮನ್ನು ನೋಡುತ್ತಿರುತ್ತಾರೆ, ರಾಜಕೀಯ ಬದುಕನ್ನು ಸ್ವಚ್ಛವಾಗಿಟ್ಟುಕೊಂಡರೆ ಟಾರ್ಗೆಟ್ ಆಗುವ ಸನ್ನವೇಶವೇ ಸೃಷ್ಟಿಯಾಗದು, ಬಹಳ ಬುದ್ದಿವಂತಿಕೆಯಿಂದ ಮತ್ತು ಹುಷಾರಾಗಿ ರಾಜಕಾರಣ ಮಾಡಬೇಕು ಎಂದು ಬಾಲಕೃಷ್ಣ ಹೇಳಿದರು.
ಬೆಂಗಳೂರು, 20 ಮಾರ್ಚ್: ಸಚಿವರೊಬ್ಬರು ಹನಿಟ್ರ್ಯಾಪ್ (honeytrap) ಆಗಿರುವ ವಿಷಯದಲ್ಲಿ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದರು. ಆದನ್ನು ಮಾಧ್ಯಮಗಳಲ್ಲಿ ನೋಡಿದ್ದಷ್ಟೇ ಗೊತ್ತು, ಇದು ಬಹಳ ಸೂಕ್ಷ್ಮ ವಿಚಾರ, ಇಂಥ ವಿಷಯಗಳಲ್ಲಿ ತಾನು ಪೆದ್ದು ಎಂದು ಹೇಳುವ ಬಾಲಕೃಷ್ಣ, ಸರಿಯಾದ ಮಾಹಿತಿ ಇಲ್ಲದೆ ಸಚಿವರ ತೇಜೋವಧೆ ಮಾಡುವುದು ಸರಿಯಲ್ಲ ಅನ್ನುತ್ತಾರೆ. ಒಂದು ಪಕ್ಷ ಸುದ್ದಿ ನಿಜವೇ ಆಗಿದ್ದರೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ, ನಾಯಕನಾದವನಿಗೆ ಬಾಯಿ ಮತ್ತು ಕಚ್ಚೆ ಭದ್ರವಾಗಿರಬೇಕೆಂದು ಹಿರಿಯ ರಾಜಕಾರಣಿಗಳು ಹೇಳಿದ್ದು ನೆನಪಾಗುತ್ತಿದೆ ಎಂದು ಶಾಸಕ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ಮತ್ತು ಡಿಸಿಎಂ ಪ್ರಾಮಿಸ್ ಮಾಡವ್ರೆ, ನನ್ನನ್ನು ಮಂತ್ರಿ ಮಾಡಲೇಬೇಕು: ಹೆಚ್ ಸಿ ಬಾಲಕೃಷ್ಣ