ಓರ್ವ ಮಂತ್ರಿಯನ್ನೇ ಹನಿಟ್ರ್ಯಾಪ್ ಮಾಡಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ ಬಾಂಬ್..!
ತಾನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ವಿಷಯವನ್ನು ಚರ್ಚಿಸಿರುವುದಾಗಿ ಹೇಳಿದ ಸತೀಶ್ ಜಾರಕಿಹೊಳಿ ಅದನ್ನು ಗೃಹ ಸಚಿವ ಜಿ ಪರಮೇಶ್ವರ್ ಅವರ ಗಮನಕ್ಕೂ ತರುವುದಾಗಿ ಹೇಳಿದರು. ಇದರಲ್ಲಿ ಕೇವಲ ತಮ್ಮ ಪಕ್ಷದವರು ಮಾತ್ರ ಅಲ್ಲ ಬೇರೆ ಪಕ್ಷದವರೂ ಶಾಮೀಲಾಗಿದ್ದಾರೆ, ಇಷ್ಟರಲ್ಲೇ ಮತ್ತೊಬ್ಬ ಪ್ರಭಾವಿ ವ್ಯಕ್ತಿ ಟ್ರ್ಯಾಪ್ ಆದರೆ ಆಶ್ಚರ್ಯಪಡಬೇಕಿಲ್ಲ ಎಂದು ಜಾರಕಿಹೊಳಿ ಹೇಳಿದರು.
ಬೆಂಗಳೂರು, (ಮಾರ್ಚ್ 20): ಕರ್ನಾಟಕದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಪ್ರಯತ್ನ ನಡೆಸಲಾಗಿದೆ ಎನ್ನುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ವಿಧಾನಸಭೆ ಸದನದಲ್ಲೂ ಸದ್ದು ಮಾಡಿದೆ. ಕಾನೂನು ಸುವ್ಯವಸ್ಥೆ ಕುರಿತಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ‘ ವಿರೋಧಿಗಳನ್ನು ಹತ್ತಿಕ್ಕಲು ಹೀಗಾ ಮಾಡೋದು’ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಬಗ್ಗೆ ಇಂದು (ಮಾರ್ಚ್ 20) ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಭಾವಿ ಸಚಿವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಆಗಿದ್ದು, ಸಚಿವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ. ಹನಿಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂದ್ರೆ ಆರೋಪಿಸಿದಂತಾಗುತ್ತೆ. ಅದು ರಾಜಕೀಯ ಆರೋಪ ಮಾಡಿದಂತಾಗುತ್ತೆ. ಹನಿಟ್ರ್ಯಾಪ್ ಯತ್ನ ಅಂತು ನಡೆದಿದೆ ಎಂದು ಖಚಿತಪಡಿಸಿದರು.
ಸಚಿವರು ದೂರು ಕೊಟ್ಟರಷ್ಟೇ ಅದು ಅಧಿಕೃತ. ಹನಿಟ್ರ್ಯಾಪ್ ಯಾರು ಮಾಡುತ್ತಿದ್ದಾರೆಂದು ಎಲ್ಲರಿಗೂ ಗೊತ್ತು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಒಂದು ತಂಡ ಇದೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಎಲ್ಲ ಪಕ್ಷದವರೂ ಚರ್ಚಿಸಬೇಕಾದ ವಿಷಯ ಎಂದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನಿಟ್ರ್ಯಾಪ್ ಬಲೆಯಲ್ಲಿ ಸಚಿವರನ್ನ ಸಿಲುಕಿಸಲು ಮಹಾ ಯತ್ನ: ಕಾಂಗ್ರೆಸ್ನಲ್ಲಿ ಸಂಚಲನ