Karnataka Budget Session: ರಾಯರೆಡ್ಡಿ ಮತ್ತು ಯತ್ನಾಳ್ ಮಾತಿನ ಜಗಳದ ನಡುವೆ ಜೋಕ್ ಕಟ್ ಮಾಡಿ ಎಲ್ಲರನ್ನೂ ನಗಿಸಿದ ಸುರೇಶ್ ಕುಮಾರ್
ಒಂದು ಸಂದರ್ಭದಲ್ಲಿ ಬಸವರಾಜ ರಾಯರೆಡ್ಡಿ, ಯತ್ನಾಳ್ ಹೃದಯ ದೊಡ್ಡದು, ವಿಶಾಲ ಹೃದಯದವರು ಅಂತ ಹೇಳಿದಾಗ ಬಿಜೆಪಿ ಶಾಸಕ ಹಾಗೇನೂ ಇಲ್ಲ, ನಾನು ಸಂಕುಚಿತ ಹೃದಯದವನು ಅಂತ ಒಪ್ಕೋತೀನಿ ಅನ್ನುತ್ತಾರೆ. ಆಮೇಲೆ ಯತ್ನಾಳ್ ನಾವಿಬ್ಬರೂ ಉತ್ತರ ಕರ್ನಾಟಕದವರು ಅವರ ಹೆಸರಲ್ಲೂ ಬಸವರಾಜ ಇದೆ ನನ್ನ ಹೆಸರಲ್ಲೂ ಬಸವಣ್ಣ ಇದ್ದಾನೆ ಅಂತ ಹೇಳಿ ವಾಗ್ವಾದ ಮುಗಿಸುತ್ತಾರೆ.
ಬೆಂಗಳೂರು, ಮಾರ್ಚ್ 20: ಬಸವರಾಜ ರಾಯರೆಡ್ಡಿ (Basavaraj Rayareddy) ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಇಂದು ಸದನದಲ್ಲಿ ನಡೆದ ಹಾಸ್ಯ ಸ್ವರೂಪದ ಮಾತುಗಳು ಸದನ ಮತ್ತು ಸ್ಪೀಕರ್ ಅವರನ್ನು ನಗೆಗಡಲಲ್ಲಿ ಮುಳುಗಿಸಿದವು. ಯತ್ನಾಳ್ ಬಜೆಟ್ ಮೇಲೆ ಪ್ರಶ್ನೆಯೊಂದನ್ನು ಕೇಳಿದಾಗ ಎದ್ದು ನಿಲ್ಲುವ ರಾಯರೆಡ್ಡಿ ಬಜೆಟ್ ಮೇಲಿನ ಪ್ರಶ್ನೆಗಳಿಗೆ ತಾನು ಉತ್ತರಿಸಲು ಬರೋದಿಲ್ಲ, ತಾನು ಸರ್ಕಾರದ ಭಾಗವಲ್ಲ , ಐ ಯಾಮ್ ಟಾಕಿಂಗ್ ಅಬೌಟ್ ದಿ ಪ್ರೊಸೀಜರ್ ಅಂತ ಹೇಳಿದಾಗ ಯತ್ನಾಳ್ ಎದ್ದು ನಿಂತು ಐ ಯಾಮ್ ಆಲ್ಸೋ ಟಾಕಿಂಗ್ ಅಬೌಟ್ ಡಿ ಪ್ರೋಸೀಜರ್ ಅನ್ನುತ್ತಾರೆ. ಇಬ್ಬರ ನಡುವೆ ಮಾತಾಡುವ ಅವಕಾಶಕ್ಕಾಗಿ ಕಾದಾಟ ನಡೆದಾಗ ಹಿರಿಯ ಬಿಜೆಪಿ ಶಾಸಕ ಸುರೇಶ್ ಕುಮಾರ್ ಜೋಕೊಂದನ್ನು ಹೇಳಿ ಎಲ್ಲರನ್ನೂ ನಗಿಸುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಕ್ರಮ ಚಿನ್ನ ಸಾಗಾಟ ಕೇಸ್: ರನ್ಯಾ ತಂಟೆಗೆ ಹೋದ ಯತ್ನಾಳ್ ವಿರುದ್ಧ ಎಫ್‌ಐಆರ್