AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿಟ್ರ್ಯಾಪ್ ಬಲೆಯಲ್ಲಿ ಸಚಿವರನ್ನ ಸಿಲುಕಿಸಲು ಮಹಾ ಯತ್ನ: ಕಾಂಗ್ರೆಸ್​ನಲ್ಲಿ ಸಂಚಲನ

ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಮತ್ತೊಮ್ಮೆ, ಹನಿಟ್ರ್ಯಾಪ್ ಎಂಬ ಭೂತ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ ಹಿಂದಿನ ಹನಿಟ್ರ್ಯಾಪ್ ಪ್ರಕರಣಗಳು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟಗೆ ಸದ್ದು ಮತ್ತು ಸುದ್ದಿ ಮಾಡಿದ್ದವು. ಇದೀಗ ಅದೇ ರೀತಿಯ ಮತ್ತೊಂದು ಹನಿಟ್ರ್ಯಾಪ್, ರಾಜಕೀಯ ಪಡಸಾಲೆಯಲ್ಲಿ ಗುಲ್ಲೇಬಿಸಿದೆ. ಹನಿಟ್ರ್ಯಾಪ್ ಬಲೆಯಲ್ಲಿ ಪ್ರಭಾವಿ ಸಚಿವರನ್ನೇ ಸಿಲುಕಿಸಲು ಮಹಾ ಯತ್ನ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಹನಿಟ್ರ್ಯಾಪ್ ಬಲೆಯಲ್ಲಿ ಸಚಿವರನ್ನ ಸಿಲುಕಿಸಲು ಮಹಾ ಯತ್ನ: ಕಾಂಗ್ರೆಸ್​ನಲ್ಲಿ ಸಂಚಲನ
Honeytrap
TV9 Web
| Edited By: |

Updated on:Mar 20, 2025 | 5:07 PM

Share

ಬೆಂಗಳೂರು, (ಮಾರ್ಚ್ 18): ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್(Honeytrap) ಕುರಿತ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಹೌದು… ಕರ್ನಾಟಕ ರಾಜಕೀಯದಲ್ಲಿ (Karnataka Politics) ಹನಿಟ್ರ್ಯಾಪ್ ಶಬ್ದ ಕೇಳಿದ್ರೆ ರಾಜಕಾರಣಿಗಳ ಮೈ ನಡುಗುತ್ತೆ. ಇಂತಹ ಹನಿಟ್ರ್ಯಾಪ್ ಎಂಬ ಗುಮ್ಮ ರಾಜ್ಯಕ್ಕೆ ಮತ್ತೆ ಒಕ್ಕರಿಸಿಕೊಂಡಿದೆ. ಅದೂ ಕೂಡ ಅಂತಿಂತಹ ವ್ಯಕ್ತಿಯ ವಿರುದ್ದ ಆರೋಪ ಕೇಳಿ ಬಂದಿಲ್ಲ. ಕರ್ನಾಟಕ ಪ್ರಭಾವಿ ಸಚಿವರನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಲು ಪ್ರಯತ್ನ ಪಟ್ಟಿದ್ದಾರೆ ಎಂಬ ಸುದ್ದಿ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ. ತುಮಕೂರು ಮೂಲದ ಸಚಿವರನ್ನ ಹನಿಟ್ರ್ಯಾಪ್ ಮಾಡುವುದಕ್ಕೆ ಯತ್ನಿಸಲಾಗಿದೆಯಂತೆ. ಆದ್ರೆ ಹನಿಟ್ರ್ಯಾಪ್ ಮಾಡೋಕೆ ಬಂದಿದ್ದಾರೆ ಎಂದು ಅನುಮಾನ ಬರುತ್ತಿದ್ದಂತೆಯೇ ಸಚಿವರು ಎಚ್ಚೆತ್ತುಕೊಂಡಿದ್ದಾರೆ. ಈಗ ಇದೇ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಷ್ಟಕ್ಕೂ ಹನಿಟ್ರ್ಯಾಪ್ ಯತ್ನ ನಡೆದಿದ್ದು ವಿಧಾನಸೌಧದ ಅಸುಪಾಸಿನಲ್ಲಿ ಎನ್ನಲಾಗುತ್ತಿದೆ. ಅದು ಸಚಿವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಹಿಂದೆ ಅದರದ್ದೇ ಕಾಂಗ್ರೆಸ್​ನ ಪ್ರಭಾವಿ ನಾಯಕನ ಕೈವಾಡ ಇರುವ ಬಗ್ಗೆ ಸದ್ದಿ ಹರಿದಾಡುತ್ತಿದೆ. ಕೆಲ ಹೆಸರುಗಳು ಚರ್ಚೆಯಾಗುತ್ತಿವೆ. ಆದ್ರೆ ಯಾರು, ಯಾಕೆ ಹನಿಟ್ರ್ಯಾಪ್ ಟ್ರೈ ಮಾಡಿದ್ದಾರೆ? ಯಾರು ಮಾಡಿಸಲು ಯತ್ನಿಸಿದ್ದರು ಎನ್ನುವುದು ಗೊತ್ತಿದ್ದರೂ ಅದನ್ನು ಯಾರು ಬಾಯ್ಬಿಡುತ್ತಿಲ್ಲ. ಈ ಬಗ್ಗೆ ಎಲ್ಲೂ ಯಾರೂ ಕೂಡ ಮಾತನಾಡಿಲ್ಲ. ದೂರು ಕೂಡ ದಾಖಲಾಗಿಲ್ಲ. ಇನ್ನು ತಮ್ಮನ್ನು ಹನಿಟ್ರ್ಯಾಪ್​ ಮಾಡಲು ಪ್ರಯತ್ನಿಸಿರುವ ಬಗ್ಗೆ ಹೈಕಮಾಂಡ್​ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ರಾಜ್ಯ ಕಾಂಗ್ರೆಸ್​​ನಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಬಿಜೆಪಿ ಮುಖಂಡ: ಬೆತ್ತಲೆ ವಿಡಿಯೋ..20 ಲಕ್ಷಕ್ಕೆ ಡಿಮ್ಯಾಂಡ್‌.. ಮಾಯಾಂಗನೆ ಲಾಕ್

ತುಮಕೂರು ಭಾಗದ ಸಚಿವರಿಗೆ ಹನಿಟ್ರ್ಯಾಪ್ ಆರೋಪದ ಬಗ್ಗೆ ಸಚಿವ ಬೈರತಿ ಸುರೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಮಾಡುವವರಿಗೆ ಯಾವುದೇ ಕ್ಷಮೆ ಇಲ್ಲ. ಯಾರಾದರು ಹನಿಟ್ರ್ಯಾಪ್ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ಯಾವುದೇ ಹನಿಟ್ರ್ಯಾಪ್ ನಡೆದಿಲ್ಲ. ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದರು.

ತಮ್ಮದೇ ಪಕ್ಷದ ಪ್ರಭಾವಿ ನಾಯಕ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಗೆ ಒಳಪಡಿಸುವ ಪ್ರಯತ್ನ ನಡೆಸಲಾಗಿದೆ ಎಂಬುದು ಕಾಂಗ್ರೆಸ್​​ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು,  ಈ ಸಂಬಂಧ ವಿಧಾನಸೌಧದ ಮೊಗಸಾಲೆಯಲ್ಲೂ ಶಾಸಕರು-ಸಚಿವರ ನಡುವೆ ಹನಿಟ್ರ್ಯಾಪ್ ಕುರಿತು ಗುಸು ಗುಸು ಚರ್ಚೆಗಳು ನಡೆಯುತ್ತಿವೆ.

ಅದೇನೇ ಇರಲಿ ರಾಜ್ಯದ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿದೆ ಎಂಬ ಸುದ್ದಿ ಈಗ ರಾಜಕೀಯದಲ್ಲಿ ದೊಡ್ಡ ಮಟ್ಟಿಗೆ ಸಂಚಲನ‌ ಸೃಷ್ಟಿ ಮಾಡಿದೆ. ಯಾಕಂದ್ರೆ ಈಗಾಗಲೇ ರನ್ಯಾ ರಾವ್ ಡ್ರಗ್ಸ್ ಪ್ರಕರಣದಲ್ಲಿ ಸಚಿವರಿಬ್ಬರ ಹೆಸರು ಕೇಳಿ ಬರುತ್ತಿದೆಯಾದರೂ ಹೆಸರು ಬಹಿರಂಗ ಆಗಿಲ್ಲ. ಆದ್ರೆ ಇದೇ ಕೇಸ್, ರಾಜ್ಯ ಸರ್ಕಾರಕ್ಕೆ ತಲೆ ಬಿಸಿ ತಂದಿಟ್ಟಿದ್ದಲ್ಲದೇ ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದಂತೂ ಸತ್ಯ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Tue, 18 March 25