ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ ಕೆಲಸ ಅಪೂರ್ಣ, ಪ್ರತ್ಯೇಕ ಮೀಟಿಂಗ್ ಬೇಕೆಂದ ತಮಿಳುನಾಡು
ದಕ್ಷಿಣ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಇವತ್ತು ನಡೆಯಬೇಕಿದ್ದ ಮೀಟಿಂಗ್ ಬಗ್ಗೆ ಡಿಕೆ ಶಿವಕುಮಾರ್ ಸಂಪುಟ ಸಭೆಯಲ್ಲಿ ಚರ್ಚಿಸಿದ್ದಾರಂತೆ. ಅದರೆ ನೀರಾವರಿ ಯೋಜನೆಗಳ ವಿಷಯ ಪ್ರಸ್ತಾಪವಾದಾಗೆಲ್ಲ ತಮಿಳುನಾಡು ಸರ್ಕಾರದಿಂದ ಕರ್ನಾಟಕಕ್ಕೆ ಹಿನ್ನಡೆಯಾಗುತ್ತಿದೆ. ಅಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಾಜ್ಯದ ಹಿತಾಸಕ್ತಿಯನ್ನು ಯಾವತ್ತೂ ಬಿಟ್ಟುಕೊಡಲ್ಲ, ಅದರಲ್ಲೂ ವಿಶೇಷವಾಗಿ ನೀರಾವರಿ ಸಮಸ್ಯೆಗಳ ವಿಚಾರದಲ್ಲಿ.
ದೆಹಲಿ, ಮಾರ್ಚ್ 18: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ (Delhi visit) ನೀಡಿದ ಉದ್ದೇಶ ಪೂರ್ತಿಗೊಂಡಿಲ್ಲ. ರಾಜ್ಯದ ನೀರಾವರಿ ಯೋಜನೆಗಳು ಮತ್ತು ತಮಿಳುನಾಡು ಸೇರಿದಂತೆ ಪಕ್ಕದೆ ರಾಜ್ಯಗಳ ಜೊತೆಯಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುಪ್ರೀಮ್ ಕೊರ್ಟ್ನಲ್ಲಿ ಇಂದು ಒಂದು ನೆಗೋಶಿಯೇಷನ್ ಮೀಟಿಂಗ್ ಏರ್ಪಡಿಸಲಾಗಿತ್ತು. ಕಳೆದ ಸಲ ದೆಹಲಿ ಭೇಟಿಯ ಸಂದರ್ಭದಲ್ಲ್ಲಿ ಶಿವಕುಮಾರ್ ಕೇಂದ್ರದ ಕೆಲ ಮಂತ್ರಿಗಳೊಂದಿಗೆ ಚರ್ಚಿಸಿದ್ದರಂತೆ. ಆದರೆ ತಮಿಳುನಾಡುನವರು ತಡರಾತ್ರಿ ಫೋನ್ ಮಾಡಿ ನಮಗೆ ಮೀಟಿಂಗ್ನಲ್ಲಿ ಭಾಗವಹಿಸಲಾಗಲ್ಲ, ನಮಗೋಸ್ಕರ ಒಂದು ಪ್ರತ್ಯೇಕ ಮೀಟಿಂಗ್ ಏರ್ಪಡಿಸಿ ಅಂತ ಹೇಳಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಶಿವಕುಮಾರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಕ್ಷದ ಸಂಘಟನೆ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಪುನೀತ್ ರಾಜ್ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ

ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ

ಕೋರ್ಟ್ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
