ಶಿವಕುಮಾರ್ ಪಕ್ಷದ ಕಾರ್ಯ ನಿಮಿತ್ತ ದೆಹಲಿಗೆ ಹೋಗಿರಬಹುದು, ನಮ್ಮ ಸಭೆಗೆ ಅದು ಸಂಬಂಧವಿಲ್ಲ: ಸತೀಶ್ ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾಗಿ 5ವರ್ಷಗಳ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಶಿವಕುಮಾರ್ ಮೊನ್ನೆಯಷ್ಟೇ ಔತಣಕೂಟವೊಂದನ್ನು ಏರ್ಪಡಿಸಿದ್ದರು. ಆ ಕೂಟದಲ್ಲಿ ಪರಮೇಶ್ವರ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಭಾಗಿಯಾಗಿದ್ದರು. ನಿನ್ನೆ ಸಚಿವ ಹೆಚ್ ಸಿ ಮಹದೇವಪ್ಪ ಮನೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದ ಶಾಸಕರು ಸಭೆ ನಡೆಸಿ ಹಲವು ವಿಷಯಗಳ ಮೇಲೆ ಚರ್ಚೆ ನಡೆಸಿದ್ದಾರೆ.
ಬೆಂಗಳೂರು, ಮಾರ್ಚ್ 18: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ದೆಹಲಿಗೆ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದ ಮಂತ್ರಿಗಳಾಗಲೀ, ಶಾಸಕರಾಗಲೀ ದೆಹಲಿಗೆ ಭೇಟಿ ನೀಡಿದಾಗ ಅದು ಸಹಜವಾಗೇ ಕುತೂಹಲಕ್ಕೆ ಕಾರಣವಾಗುತ್ತದೆ. ಶಿವಕುಮಾರ್ ಭೇಟಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದಾಗ, ಪಕ್ಷದ ಕೆಲಸಗಳಿಗೆ ಅವರು ಹೋಗಿರಬಹುದು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಸೇರಿದ ಶಾಸಕರು ಮತ್ತು ಮುಖಂಡರು ನಡೆಸಿದ ಸಭೆಗೂ ಶಿವಕುಮಾರ್ ಭೇಟಿಗೂ ಸಂಬಂಧವಿಲ್ಲ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕ್ಷಿಪ್ರ ಕ್ರಾಂತಿ ಬಿಜೆಪಿಯಲ್ಲಿ ನಡೆಯುತ್ತದೆ, ಕಾಂಗ್ರೆಸ್ನಲ್ಲಿ ಅಲ್ಲ, ನಮ್ಮ ಸರ್ಕಾರ ಗಟ್ಟಿಯಾಗಿದೆ: ಸತೀಶ್ ಜಾರಕಿಹೊಳಿ
Published on: Mar 18, 2025 10:35 AM
Latest Videos