ಸಿಎಂ ಮತ್ತು ಡಿಸಿಎಂ ಪ್ರಾಮಿಸ್ ಮಾಡವ್ರೆ, ನನ್ನನ್ನು ಮಂತ್ರಿ ಮಾಡಲೇಬೇಕು: ಹೆಚ್ ಸಿ ಬಾಲಕೃಷ್ಣ
ಕಾಂಗ್ರೆಸ್ ಪಕ್ಷದವರು ಕೆಲಸ ಮಾಡಲಿ ಅಂತ ಚನ್ನಪಟ್ಟಣದ ಜನ ತೀರ್ಪು ನೀಡಿದ್ದಾರೆ, ಕೆಲಸ ಮಾಡುತ್ತೇಬೆ ಎಂದು ಹೇಳಿದ ಬಾಲಕೃಷ್ಣ ಜೆಡಿಎಸ್ ಪಕ್ಷದ ಶಾಸಕರನ್ನು ಕಾಂಗ್ರೆಸ್ಗೆ ಕರೆತರುವ ವಿಚಾರವನ್ನು ಯೋಗೇಶ್ವರ್ ಅವರನ್ನೇ ಕೇಳಬೇಕು, ತನಗೆ ಅಷ್ಟೆಲ್ಲ ತಾಕತ್ತಿಲ್ಲ ಎಂದು ಹೇಳಿದರು.
ಬೆಂಗಳೂರು: ಸಂಪುಟ ಪುನಾರಚನೆಯ ಸುದ್ದಿ ಹರಡುತ್ತಲೇ ಕಾಂಗ್ರೆಸ್ ಶಾಸಕರ ಆಸೆಗಳು ಗರಿಗೆದರಿವೆ. ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ತನಗೆ ಮಂತ್ರಿ ಸ್ಥಾನ ಸಿಗಲೇಬೇಕು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ, ಪೊಲೀಸ್ ಕೆಲಸ ಮಾಡಿ ಸಾಕಾಗಿದೆ, ಪ್ರಮೋಶನ್ ಬೇಕೇಬೇಕು, ತಾನು ಲಾಬಿ ಮಾಡುವ ಕೆಲಸಕ್ಕೆ ಹೋಗಲ್ಲ, ಉಪ ಚುನಾವಣೆಯಲ್ಲಿ ತಾನು ಮಾಡಿದ ಕೆಲಸ ಹೈಕಮಾಂಡ್ಗೆ ಗೊತ್ತಿದೆ, ಯೋಗೇಶ್ವರ್ ಅವರೂ ಆಕಾಂಕ್ಷಿಯೇ, ಮಿನಿಸ್ಟ್ರಾಗಲು ಯಾರಿಗೆ ಆಸೆ ಇರಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೇರೆ ಸಿಎಂಗಳ ತರ ಸಿದ್ದರಾಮಯ್ಯ ಆಸ್ತಿ ಮಾಡಲು ಮುಂದಾಗಿದ್ರೆ ಅರ್ಧ ಬೆಂಗಳೂರು ಅವರದ್ದೇ ಇರ್ತಿತ್ತು: ಶಾಸಕ ಬಾಲಕೃಷ್ಣ
Follow Us
Latest Videos

