ಯತ್ನಾಳ್ ಉಚ್ಚಾಟನೆಯಿಂದ ರಾಜ್ಯದ ಹಿಂದೂವಾದಿಗಳಿಗೆ ಬಹಳ ನೋವಾಗಿದೆ: ಬಿ ಶ್ರೀರಾಮುಲು
ಪಕ್ಷದ ವರಿಷ್ಠರ ಕ್ರಮವನ್ನು ತಾನು ಪ್ರಶ್ನಿಸುತ್ತಿಲ್ಲ, ರಾಜ್ಯದಲ್ಲಿ ಲಿಂಗಾಯತ ಸಮುದಾಯ ಬಹಳ ದೊಡ್ಡದು, ಅವರ ಬೆಂಬಲವಿಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲಾರದು, ಚುನಾವಣಾ ರಾಜಕೀಯದಲ್ಲಿ ಸಂಖ್ಯಾಬಲಕ್ಕೆ ಎಷ್ಟು ಪ್ರಾಮುಖ್ಯತೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರ, ಸಣ್ಣ ಪುಟ್ಟ ವಿಷಯಗಳನ್ನು ಸರಿಪಡಿಸಿಕೊಂಡು ಮುಂದುವರಿಯಬೇಕಿದೆ, ವರಿಷ್ಟರನ್ನು ಭೇಟಿಯಾದಾಗ ಯತ್ನಾಳ್ ವಿಷಯ ಮಾತಾಡುತ್ತೇನೆ ಎಂದು ಶ್ರೀರಾಮುಲು ಹೇಳಿದರು.
ಬಳ್ಳಾರಿ, 27 ಮಾರ್ಚ್: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಬಿ ಶ್ರೀರಾಮುಲು ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಪರ ಬ್ಯಾಟ್ ಬೀಸಿದರು. ನಿಸ್ಸಂದೇಹವಾಗಿ ಬಸನಗೌಡ ಯತ್ನಾಳ್ ಲಿಂಗಾಯತ ಸಮುದಾಯದ ಬಹು ದೊಡ್ಡ ಮತ್ತು ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ನಾಯಕ, ಅವರ ಉಚ್ಚಾಟನೆಯಿಂದ ರಾಜ್ಯದ ಹಿಂದೂವಾದಿಗಳು ತುಂಬಾ ನೋವು ಅನುಭವಿಸುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು. ವ್ಯಕ್ತಿಗಿಂತ ಪಕ್ಷ ಮುಖ್ಯ ಮತ್ತು ಪಕ್ಷಕ್ಕಿಂತ ದೇಶ ಮುಖ್ಯ ಅಂತ ನಂಬಿರುವವರಲ್ಲಿ ತಾನೂ ಒಬ್ಬ, ಅದರೆ ಯತ್ನಾಳ್ ಉಚ್ಚಾಟನೆಯಿಂದ ಪಕ್ಷ ಬಲಗುಂದುತ್ತದೆ, ಹಾಗಾಗಿ ವರಿಷ್ಠರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಕೋರುತ್ತೇನೆ ಎಂದು ರಾಮುಲು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ರಾಜ್ಯಾದ್ಯಂತ ಯಾತ್ರೆ ಮಾಡುವೆ: ಮಾಜಿ ಸಚಿವ ಶ್ರೀರಾಮುಲು