ಬಿಜೆಪಿ ರಾಜ್ಯ ಘಟಕದಲ್ಲಿ ಬಣಗಳಿಲ್ಲ, ಬಂಡಾಯವಿಲ್ಲ; ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ: ಬಿ ಶ್ರೀರಾಮುಲು
ನೀವು ವಿಜಯೇಂದ್ರರ ಬಣವೋ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಪಾಟೀಲ್ ಬಣವೋ ಅಂತ ಕೇಳಿದರೆ ಶ್ರೀರಾಮುಲು ಅವರು ತಾನು ಬಿಜೆಪಿ ಬಣ ಎನ್ನುತ್ತಾರೆ. ಬಸನನಗೌಡ ಯತ್ನಾಳ್ ಅವರಿಗೆ ಪಕ್ಷದ ಯಾವ ನಾಯಕನೊಂದಿಗೂ ವೈಮನಸ್ಸಿಲ್ಲ, ಅವರು ಪಕ್ಷದ ಒಳಿತಿಗಾಗಿ ಹೋರಾಡುತ್ತಿದ್ದಾರೆ, ಅವರದ್ದೊಂದು ಪ್ರತ್ಯೇಕ ಟೀಮಿದೆ ಅಂತ ಹೇಳುವುದು ತಪ್ಪು ಎಂದು ಶ್ರೀರಾಮುಲು ಹೇಳಿದರು.
ಮೈಸೂರು: ಮಾಜಿ ಸಚಿವ ಬಿ ಶ್ರೀರಾಮುಲು ಅವರು ಹೇಳುವ ಪ್ರಕಾರ ರಾಜ್ಯ ಬಿಜೆಪಿ ಘಟಕದಲ್ಲಿ ಬಂಡಾಯವಿಲ್ಲ, ಬಣಗಳಿಲ್ಲ. ಪಕ್ಷವೆಂದ ಮೇಲೆ ನಾಯಕರ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳಿರುತ್ತವೆ, ಅವುಗಳನ್ನು ನಾಯಕರೇ ಸರಿಮಾಡಿಕೊಳ್ಳುತ್ತಾರೆ, ಪಾರ್ಟಿ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಮತ್ತು ಸಂಘಟನಾತ್ಮಕವಾಗಿ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಶ್ರೀರಾಮುಲು (Sriramulu) ಹೇಳಿದರು. ರಾಜ್ಯದ ನಾಯಕರಿಗೆ ಸಾಧ್ಯವಾಗದ ಸಮಸ್ಯೆಗಳನ್ನು ವರಿಷ್ಠರು ಬಗೆಹರಿಸುತ್ತಾರೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶ್ರೀರಾಮುಲು ಜೊತೆಗೆ 50 ಶಾಸಕರನ್ನು ಸಂಪರ್ಕಿಸಿದ್ದೆ; ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ
Latest Videos