ಯತ್ನಾಳ್ರನ್ನು ವಾಪಸ್ಸು ಕರೆದು ರಾಜ್ಯಾಧ್ಯಕ್ಷ ಮಾಡದಿದ್ದರೆ ಉಗ್ರ ಹೋರಾಟ: ಉಚ್ಚಾಟಿತ ಶಾಸಕನ ಬೆಂಬಲಿಗರು
ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಅವರ ನಾಯಕತ್ವಕ್ಕೆ ಮಾಡಿರುವ ದೊಡ್ಡ ಅವಮಾನ, ಅವರನ್ನು ಪಕ್ಷಕ್ಕೆ ವಾಪಸ್ಸು ಕರೆಸಿಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ, ಯತ್ನಾಳ್ ಅವರ ಉಚ್ಚಾಟನೆ ರದ್ದು ಮಾಡಿ ಪಕ್ಷದ ರಾಜ್ಯಾದ್ಯಕ್ಷ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಭಾಷಣ ಮಾಡುತ್ತಿದ್ದ ಯತ್ನಾಳ್ ಅವರ ಬೆಂಬಲಿಗ ಹೇಳಿದರು.
ವಿಜಯಪುರ, ಮಾರ್ಚ್ 28: ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಿರುವುದನ್ನು ವಿರೋಧಿಸಿ ರಾಜೀನಾಮೆ ನೀಡುವುದು, ಪ್ರತಿಭಟನೆ ನಡೆಸುವುದು ಶುರುವಾಗಿದೆ. ತಲೆಗೆ ಕೇಸರಿ ಬಣ್ಣದ ಪೇಟಾ ಇಲ್ಲವೇ ಟೊಪ್ಪಿ ತೊಟ್ಟು ಪ್ರತಿಭಟನೆ ನಡೆಸುತ್ತಿರುವವರನ್ನು ಇಲ್ಲಿ ನೋಡಬಹುದು. ಒಬ್ಬ ಯುವ ಬೆಂಬಲಿಗ ಮೈಕ್ ಹಿಡಿದು ಮಾತಾಡಿ, ರಾಜ್ಯದ ಬಿಜೆಪಿ ನಾಯಕರು ಷಡ್ಯಂತ್ರ ನಡೆಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತಾರದೆ ಯತ್ನಾಳ್ ಅವರನ್ನು ಉಚ್ಚಾಟಿಸಿದ್ದಾರೆ, ಅವರು ಹಿಂದೂಗಳ ಪ್ರಶ್ನಾತೀತ ನಾಯಕ, ಅವರಿಲ್ಲದಿದ್ದರೆ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಯತ್ನಾಳ್ ಬಗ್ಗೆ ವರಿಷ್ಠರಿಗೆ ಆಗಿರಬಹುದಾದ ತಪ್ಪು ಗ್ರಹಿಕೆ ಚರ್ಚಿಸಲು ಸಿದ್ಧರಿದ್ದೇವೆ: ಕುಮಾರ್ ಬಂಗಾರಪ್ಪ
ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ