ಕುತೂಹಲ ಮೂಡಿಸಿದ ಬಸನಗೌಡ ಯತ್ನಾಳ್ ಮತ್ತು ಧಾರವಾಡ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ಭೇಟಿ
ಬಸನಗೌಡ ಪಾಟೀಲ್ ಯತ್ನಾಳ್ ನಿಸ್ಸಂದೇಹವಾಗಿ ಗೊಂದಲದಲ್ಲಿದ್ದಾರೆ. ಶನಿವಾರ ಹೊಸ ಪಕ್ಷ ಕಟ್ಟುವುದಿಲ್ಲವೆಂದು ಹೇಳಿದ್ದ ಅವರು ನಿನ್ನೆ ಅದರ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದ ನಾಯಕರು ಉಚ್ಚಾಟಿತ ಶಾಸಕನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಯತ್ನಾಳ್ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಎಣ್ಣೆ ಸೀಗೆಕಾಯಿ ಸಂಬಂಧವಿದೆ ಮತ್ತು ಕಾಂಗ್ರೆಸ್ ಸಿದ್ಧಾಂತವನ್ನು ಅವರು ಯಾವತ್ತೂ ಒಪ್ಪಲ್ಲ.
ಹುಬ್ಬಳ್ಳಿ, ಮಾರ್ಚ್ 31: ಬಿಜೆಪಿಯಿಂದ ಉಚ್ಚಾಟಿತರಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ರಾಜಕೀಯ ಪಕ್ಷಗಳ ಮತ್ತು ನಾಯಕರ ದೃಷ್ಟಿ ನೆಟ್ಟಿದೆ. ನಿನ್ನೆ ಯುಗಾದಿ ಹಬ್ಬವಾದರೂ (Ugadi festival) ಯತ್ನಾಳ್ ಹುಬ್ಬಳ್ಳಿಯಲ್ಲಿದ್ದರು. ನಗರದ ಹೋಟೆಲೊಂದರಲ್ಲಿ ಕಾಂಗ್ರೆಸ್ ಪಕ್ಷದ ಧಾರವಾಡ ಗ್ರಾಮೀಣ ಘಟಕ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅವರು ಯತ್ನಾಳ್ ಅವರನ್ನು ಭೇಟಿಯಾಗಿದ್ದು ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅವರಿಬ್ಬರೂ ಟೀ ಹೀರುತ್ತಾ ಮಾತಾಡುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಇದನ್ನೂ ಓದಿ: ಯುಗಾದಿ ಹಬ್ಬದಂದು ಹೈಕಮಾಂಡ್ಗೆ ಹೊಸ ಸಂದೇಶ ರವಾನೆ: ಸಂಚಲನ ಮೂಡಿಸಿದ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Mar 31, 2025 11:12 AM