ಯುಗಾದಿ ಹಬ್ಬದಂದು ಹೈಕಮಾಂಡ್ಗೆ ಹೊಸ ಸಂದೇಶ ರವಾನೆ: ಸಂಚಲನ ಮೂಡಿಸಿದ ಯತ್ನಾಳ್
ಬಿಜೆಪಿಯಿಂದ ಆರು ವರ್ಷಗಳ ಉಚ್ಛಾಟನೆಗೊಂಡಿರುವ ವಿಜಯಪುರ ನಗರ ಶಾಸಕ ಬಸನಗೌ ಪಾಟೀಲ್ ಯತ್ನಾಳ್ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಪಕ್ಷದಿಂದ ಅಮಾನತುಗೊಂಡಿರು ಬಳಿಕ ಯತ್ನಾಳ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ತಮ್ಮ ಮಾತಿನ ಸಮುರ ಮತ್ತಷ್ಟು ಹೆಚ್ಚು ಮಾಡಿದ್ದು, ಪರೋಕ್ಷವಾಗಿ ಹೈಕಮಾಂಡ್ಗೆ ಎಚ್ಚರಿ ಸಂದೇಶ ರವಾನಿಸಿದ್ದಾರೆ. ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಯತ್ನಾಳ್ ಇಂದು ಯುಗಾದಿ ಹಬ್ಬದಂದು ಸ್ಫೋಟಕ ಹೇಳಿಕೊಂದನ್ನು ನೀಡಿದ್ದಾರೆ.

ವಿಜಯಪುರ, ,(ಮಾರ್ಚ್ 30): ‘ಸತ್ಯವನ್ನೇ ಹೇಳುತ್ತೇನೆ, ನೇರವಾಗಿ ಮಾತನಾಡುತ್ತೇನೆ ಎಂಬ ಕಾರಣಕ್ಕಾಗಿ ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿಸಿದ್ದಾರೆ. ಇದರ ಹಿಂದೆ ಯಡಿಯೂರಪ್ಪ ಇದ್ದಾರೆ. ಆದರೆ, ನಾನು ಹೊಸ ಪಕ್ಷ ಕಟ್ಟುವುದಿಲ್ಲ. ಗೌರವಯುತವಾಗಿ, ‘ವಿತ್ ಪವರ್’ ಬಿಜೆಪಿಗೆ ವಾಪಸ್ ಬರುತ್ತೇನೆ’ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದರು. ಆದ್ರೆ, ಯುಗಾದಿ ಹಬ್ಬದಿನದಂದು ತಮ್ಮ ವರಸೆ ಬದಲಿಸಿದ್ದು, ಹೊಸ ಪಕ್ಷ ಕಟ್ಟು ಸುಳಿವು ನೀಡಿದ್ದಾರೆ. ಈ ಮೂಲಕ ಯತ್ನಾಳ್ ಮುಂದಿನ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪವಿದೆ, ಹಗರಣ ಮಾಡಿದ ಕುಟುಂಬ ಅದು. ಹಗರಣ ಮಾಡಿದ ಕುಟುಂಬವನ್ನು ಮುಂದುವರೆಸಿದರೆ . ರಾಜ್ಯದ ಜನರು ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇವತ್ತಿನಿಂದಲೇ ಜನ ಜಾಗೃತಿ ಶುರು ಮಾಡುತ್ತೇವೆ ಎಂದು ಹೈಕಮಾಂಡ್ಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿರು.
ಇದನ್ನೂ ಓದಿ: ಉಚ್ಚಾಟನೆ ಬಳಿಕ ಯತ್ನಾಳ್ ಮತ್ತೆ ಆ್ಯಕ್ಟೀವ್: ರಹಸ್ಯ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು?
ಜನರು ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗಲ್ಲ ಎನ್ನುತ್ತಿದ್ದಾರೆ. ಹಿಂದೂ ಪರವಾದ ಪಕ್ಷ ಬೇಕು ಎಂದು ಹೇಳುತ್ತಿದ್ದಾರೆ. ಹಿಂದೂಗಳು ಸಹನೆ ಉಳ್ಳವರು, ಕಾಂಗ್ರೆಸ್ ಒಂದು ಮುಸ್ಲಿಂ ಪಕ್ಷ. ಬಿಜೆಪಿ ಹಿಂದೂ ಪಕ್ಷವಾಗದಿದ್ರೆ ಐತಿಹಾಸಿಕ ನಿರ್ಧಾರ ಮಾಡುತ್ತಾರೆ. BSY ಕುಟುಂಬಕ್ಕೆ ನಾಯಕತ್ವ ಕೊಟ್ರೆ ಬಿಜೆಪಿ ಹೀನಾಯವಾಗಿ ಸೋಲುತ್ತೆ/ ಬಿಎಸ್‌ವೈ ಕುಟುಂಬ ಉತ್ತರ ಕರ್ನಾಟಕಕ್ಕೆ ಮಹಾಮೋಸ ಮಾಡಿದೆ. ಆಲಮಟ್ಟಿ ಡ್ಯಾಂಗೆ 25 ಸಾವಿರ ಕೋಟಿ ರೂ. ಕೊಡುವೆ ಎಂದು ಮೋಸ ಮಾಡಿದ್ದಾರೆ. ವಿಜಯಪುರ ನಗರಕ್ಕೆ ಬಂದಿದ್ದ 125 ಕೋಟಿ ರೂ. ಹಿಂಪಡೆದು ವಂಚಿಸಿದ್ದಾರೆ. ಬಿಎಸ್‌ವೈ ಬಿಟ್ಟರೆ ಲಿಂಗಾಯತರು ಕೈಬಿಡುತ್ತಾರೆ ಎನ್ನುವ ಭಯ ಬಿಡಲಿ ಎಂದು ಹೈಕಮಾಂಡ್ಗೆ ಯತ್ನಾಳ್ ಸಲಹೆ ನೀಡಿದರು.
ಜನರ ಅಭಿಪ್ರಾಯ ಸಂಗ್ರಹಿಸಿ ಒಂದು ಹಿಂದು ಪಕ್ಷ ಆಸ್ತಿತ್ವಕ್ಕೆ ತರಬೇಕಾಗುತ್ತದೆ. ಬಹಳಷ್ಟು ಜನರು ಬಿಜೆಪಿಯಿಂದ ಹಿಂದು ರಕ್ಷಣೆ ಮಾಡುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ಯಡಿಯೂರಪ್ಪ ಕುಟುಂಬ ಹೊಂದಾಣಿಕೆ ರಾಜಕೀಯ ಮಾಡಿ ಪಕ್ಷವನ್ನು ದುರ್ಬಲ ಮಾಡಿದೆ. ಹೀಗಾಗಿ ಹಿಂದುಗಳ ರಕ್ಷಣೆ, ದೇಶಕ್ಕಾಗಿ ಹಿಂದು ಪಕ್ಷ ಆಸ್ವಿತ್ವ ತರಬೇಕಾಗಿದೆ. ನಾವು, ಬಿಜೆಪಿ-ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಲ್ಲ. ಯಡಿಯೂರಪ್ಪ ಬಿಟ್ಟು ನಮಗೆ ಬೇರೆ ಗತಿಯಿಲ್ಲ ಎಂದು ನೀವು ಹೇಳಿದರೆ ನಮ್ಮ ದಾರಿ ನಾವು ಕಂಡುಕೊಳ್ಳಬೇಕಾಗುತ್ತದೆ. ಹಿಂದು ಪಕ್ಷ ಕಟ್ಟುವ ಬಗ್ಗೆ ಬೀದರ್‌ನಿಂದ ಹಿಡಿದು ಚಾಮರಾಜನಗರವರೆಗೂ ಒತ್ತಾಯಿಸಿದ್ದಾರೆ. ಹೀಗಾಗಿ ಹೊಸ ಪಕ್ಷದ ಬಗ್ಗೆ ನಾವು ಜನಾಭಿಪ್ರಾಯ ಸಂಗ್ರಹಿಸುತ್ತೇವೆ ಎಂದಿದ್ದಾರೆ.
ತಮ್ಮ ಸ್ವಾರ್ಥಕ್ಕಾಗಿ ಬಿಎಸ್‌ವೈ-ವಿಜಯೇಂದ್ರ ಹಿಂದುತ್ವವಾದಿಗಳನ್ನ ತುಳಿಯುತ್ತಾ ಬಂದಿದ್ದಾರೆ. ಅದಕ್ಕೆ ನಾನು ಈಗ ಬಲಿಯಾಗಿದ್ದಾನೆ. ಪಕ್ಷದಲ್ಲಿ ವಂಶಪಾರಂಪರ್ಯ ಮುಂದುವರಿಸಲು ಬಿಎಸ್‌ವೈ ಕುಟುಂಬ ಮುಂದಾಗಿದೆ. ಇದೇ ರೀತಿ ಮುಂದುವರಿದರೆ ನಾವು ಪರ್ಯಾಯ ಮಾರ್ಗ ಕಂಡು ಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಪಕ್ಷದಲ್ಲಿ ವಂಶಪಾರಪರ್ಯ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಪರ್ಯಾಯವಾಗಿ ನಾವು ನಿಲ್ಲಬೇಕಾಗುತ್ತದೆ. ಯುಗಾದಿ ಹಬ್ಬದ ಹೊಸ ವರ್ಷದಿಂದ ಈ ಸಂದೇಶ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
Published On - 1:32 pm, Sun, 30 March 25