‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಭರ್ಜರಿ ಅಪ್ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಮುಕ್ತರಾಗಿ ಬಂದಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈಗ ಅವರು ವಿವಿಧ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರ ಕಡೆಯಿಂದ ಒಂದು ಬಿಗ್ ಅಪ್ಡೇಟ್ ಬಂದಿದೆ. ‘ಓಂ 2’ ಸಿನಿಮಾ ಬರಲಿದೆ ಎಂದು 45 ಚಿತ್ರದ ಟ್ರೇಲರ್ ಲಾಂಚ್ನಲ್ಲಿ ಹೇಳಿದ್ದಾರೆ.
‘ಓಂ’ ಸಿನಿಮಾ ರಿಲೀಶ್ ಆಗಿ 3 ದಶಕಗಳು ಕಳೆದಿವೆ. ಈ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರೆ, ಶಿವರಾಜ್ಕುಮಾರ್ ಅವರು ನಟಿಸಿದ್ದರು. ಶಿವಣ್ಣ (Shivaraj Kumar) ಅವರಿಗೆ ಬೇರೆಯದೇ ಖದರ್ ಕೊಟ್ಟ ಸಿನಿಮಾ ಇದು. ಈಗ ಶಿವಣ್ಣ ಹಾಗೂ ಉಪೇಂದ್ರ ‘45’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ‘ಓಂ 2’ ಚಿತ್ರದ ಬಗ್ಗೆ ಕೇಳಲಾಯಿತು. ಈ ವೇಳೆ ಮಾತನಾಡಿದ ಉಪೇಂದ್ರ, ‘ನಾವು ಸರ್ಪ್ರೈಸ್ ಇಟ್ಟಿದ್ದೇವೆ. ಈಗಲೇ ರಿವೀಲ್ ಮಾಡಿದರೆ ಹೇಗೆ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos