ಜನ ಏನಾದರೂ ಹೇಳಲಿ, 2028ರಲ್ಲಿ ರಾಜ್ಯದ ಮುಖ್ಯಮಂತ್ರಿ ನಾನೇ: ಬಸನಗೌಡ ಪಾಟೀಲ್ ಯತ್ನಾಳ್
ಪಕ್ಷ ತನ್ನನ್ನು ಉಚ್ಚಾಟಿಸಿದರೂ ತನ್ನ ವರಸೆ ಮತ್ತು ವರ್ತನೆ ಬದಲಾಗದು ಎಂದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅತ್ಮವಿಶ್ವಾಸದಿಂದ ಹೇಳಿದರು. ಜನರ ಪ್ರೀತಿ ಅಭಿಮಾನ ತನ್ನ ಜೊತೆ ಇದೆ, ವಿಜಯಪುರದಿಂದ ಬೆಂಗಳೂರಿಗೆ ಹೋಗುವ ಸಂದರ್ಬದಲ್ಲಿ ಚಹಾ, ಊಟಕ್ಕೆಂದು ಇಳಿದಾಗ ಹೋಟೆಲ್ಗಳಲ್ಲಿರುವ ಜನ ಪ್ರೀತಿಯಿಂದ ಮಾತಾಡಿಸುತ್ತಾರೆ ಮತ್ತು ತಾನು ಹೀಗೆಯೇ ಇರಬೇಕು ಬದಲಾಗಬಾರದು ಅನ್ನುತ್ತಾರೆ ಎಂದು ಯತ್ನಾಳ್ ಹೇಳಿದರು.
ವಿಜಯಪುರ, ಏಪ್ರಿಲ್ 1: ಯಾರೇನೇ ಹೇಳಲಿ, ಅಥವಾ ತಾನು ಹೀಗೆ ಹೇಳುತ್ತಿರುವುದಕ್ಕೆ ಹುಚ್ಚ ಅನ್ನಲಿ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಅಂತ ಹೇಳಲಿ ಅಥವಾ ಹತಾಶನಾಗಿದ್ದಾನೆ ಅಂತಾದ್ರೂ ಹೇಳಲಿ, 2028 ರಲ್ಲಿ ತಾನೇ ರಾಜ್ಯದ ಮುಖ್ಯಮಂತ್ರಿಯಾಗೋದು ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದಲ್ಲಿಂದಯ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಮೆದುಳಿಗೆ ಮತ್ತು ಬಾಯಿಗೆ ಸಂಪರ್ಕವಿಲ್ಲದವರ ಹಾಗೆ ಮಾತಾಡೋದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕೋರು ಎಂದು ನಗೆಯಾಡಿದರು.
ಇದನ್ನೂ ಓದಿ: ಅಪಘಾತದಲ್ಲಿ ಅಕಾಲ ಮರಣಕ್ಕೀಡಾದ ಹಿಂದೂ ಕಾರ್ಯಕರ್ತನ ಕುಟುಂಬದ ಬೆಂಬಲಕ್ಕೆ ನಿಂತ ಬಸನಗೌಡ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 01, 2025 04:47 PM