ಅಪಘಾತದಲ್ಲಿ ಅಕಾಲ ಮರಣಕ್ಕೀಡಾದ ಹಿಂದೂ ಕಾರ್ಯಕರ್ತನ ಕುಟುಂಬದ ಬೆಂಬಲಕ್ಕೆ ನಿಂತ ಬಸನಗೌಡ ಯತ್ನಾಳ್
ಸಂತೋಷನ ಮಕ್ಕಳ ಹೆಸರಲ್ಲಿ ಸಿದ್ದೇಶ್ವರ ಬ್ಯಾಂಕಲ್ಲಿ ₹ 5 ಲಕ್ಷ ಡಿಪಾಸಿಟ್ ಮಾಡಿಸುತ್ತೇನೆ, ತಿಂಗಳಿಗೆ ಸುಮಾರು ₹5,000 ಬಡ್ಡಿ ಅವರಿಗೆ ಸಿಗುತ್ತದೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದ ಯತ್ನಾಳ್, ಅಗಲಿದ ಕಾರ್ಯಕರ್ತನ ಸಹೋದರನಿಗೆ ಬಿಎಂಟಿಸಿಯಲ್ಲಿ ನೌಕರಿ ಸಿಕ್ಕಿದೆ, ಅವನು ನೌಕರಿಗೆ ಹೋಗುವುದು ಬೇಡ, ಅಣ್ಣ ಮಾಡುತ್ತಿದ್ದ ಟಿಸಿ ರಿಪೇರಿ ಕೆಲಸ ಮುಂದುವರಿಸಿಕೊಂಡು ಹೋಗಲಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದರು.
ವಿಜಯಪುರ, ಏಪ್ರಿಲ್ 1: ಬಸನಗೌಡ ಪಾಟೀಲ್ ಯತ್ನಾಳ್ ಇಂದು ಅಪಘಾತವೊಂದರಲ್ಲಿ ಅಕಾಲ ಮೃತ್ಯುವಿಗೀಡಾದ ಬಿಜೆಪಿ ಕಾರ್ಯಕರ್ತ ಮತ್ತು ಅವರ ಕಟ್ಟಾಭಿಮಾನಿ ಸಂತೋಷ ತಟಗಾರ (Santosh Tatgar) ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ತನ್ನ ಅಭಿಮಾನವಿಟ್ಟುಕೊಂಡಿರುವ ಹಿಂದೂತ್ವವಾದಿ ಕಾರ್ಯಕರ್ತರು ಉಚ್ಚಾಟನೆಯಿಂದ ದಿಗ್ಭ್ರಾಂತರಾಗಿ ಮನನೊಂದು ಕಣ್ಣೀರು ಹಾಕುತ್ತಿದ್ದಾರೆ. ಅದೇ ಯೋಚನೆಯಲ್ಲಿದ್ದ ಸಂತೋಷ್ ಕಾರು ಅಪಘಾತವೊಂದರಲ್ಲಿ ತಮ್ಮನ್ನು ಅಗಲಿದ್ದಾರೆ. ಕಾರ್ಯಕರ್ತರು ಎದೆಗುಂದುವುದು ಬೇಡ, ಯಾಕೆಂದರೆ ಜೀವನ ಅಮೂಲ್ಯವಾದದ್ದು, ಅದು ಹೋಯಿತು ಅಂತಾದರೆ ಮರಳಿ ಪಡೆಯುವುದು ಸಾಧ್ಯವಿಲ್ಲ, ಸಂತೋಷ್ ಪತ್ನಿ ಮತ್ತು ಪುಟ್ಟ ಪುಟ್ಟ ಮಕ್ಕಳನ್ನು ಅಗಲಿದ್ದಾನೆ, ಕುಟುಂಬಕ್ಕೆ ಕೈಲಾದ ನೆರವು ನೀಡುತ್ತೇನೆ ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ: ಬಸನಗೌಡ ಯತ್ನಾಳ್ ಈಗ ಸ್ವತಂತ್ರರು, ಒಂದ್ಯಾಕೆ ನಾಲ್ಕು ಹೊಸ ಪಕ್ಷ ಕಟ್ಟಲಿ: ರಾಜುಗೌಡ, ಮಾಜಿ ಶಾಸಕ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ