ಈ ಜನ್ಮದಲ್ಲಲ್ಲ, ಮುಂದಿನ ಜನ್ಮದಲ್ಲೂ ಮುಸಲ್ಮಾನರ ಪಕ್ಷ ಕಾಂಗ್ರೆಸ್ ಸೇರುವುದಿಲ್ಲ: ಬಸನಗೌಡ ಯತ್ನಾಳ್
ಕಾಂಗ್ರೆಸ್ ಮುಸಲ್ಮಾನರ ಪಕ್ಷ ಅದು ಹಿಂದೂಗಳ ಪಕ್ಷ ಅಲ್ಲವೇ ಅಲ್ಲ, ಹಾಗಾಗಿ ತಾನು ಆ ಪಕ್ಷ ಸೇರುವ ಮಾತೇ ಉದ್ಭವಿಸಲ್ಲ ಎಂದು ಬಸನಗೌಡ ಯತ್ನಾಳ್ ಹೇಳಿದರು. ಜೈಲಿಗೆ ಹೋದ ಒಬ್ಬ ಮುಖ್ಯಮಂತ್ರಿ ಮತ್ತು ಅವರ ಮಗನ ಮಾತು ಕೇಳಿಕೊಂಡು ಬಿಜೆಪಿಯ ವರಿಷ್ಠರು ತನ್ನನ್ನು ಪಕ್ಷದಿಂದ ಉಚ್ಚಾಟಿಸುತ್ತಾರೆಂದರೆ ರಾಜ್ಯ ಬಿಜೆಪಿ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸಿಗೆ ಕೊಟ್ಟಿರುವಂತಿದೆ ಅಂತ ಯತ್ನಾಳ್ ಹೇಳಿದರು.
ಕೊಪ್ಪಳ, ಮಾರ್ಚ್ 31: ಉಚ್ಚಾಟನೆಯ ಬಳಿಕ ಒಂದೆರದು ದಿನಗಳ ಮಟ್ಟಿಗೆ ಮೌನವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮೊದಲಿನಂತೆ ಮಾತಾಡುವುದನ್ನು ಶುರುಮಾಡಿದ್ದಾರೆ. ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಈ ಜನ್ಮದಲ್ಲ್ಲಲ್ಲ ಮುಂದಿನ ಜನ್ಮದಲ್ಲೂ ಸೇರಲ್ಲ, ತಮ್ಮ ವಿರುದ್ಧ ಅಪಪ್ರಚಾರ ಸಹಜ, ವಿಜಯೇಂದ್ರರ (BY Vijayendra) ಬಳಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ನೆಟ್ವರ್ಕ್ ಇದೆ, ಅವರ ಬಳಿ ಸಾಕಷ್ಟು ಹಣ ಕೂಡ ಇದೆ, ಒಬ್ಬ ಕಡು ಭ್ರಷ್ಟ ಮಾಜಿ ಮುಖ್ಯಮಂತ್ರಿಯ ಮಗ ಮತ್ತು ಅಪ್ಪನ ಸಹಿಯನ್ನು ಫೋರ್ಜರಿ ಮಾಡಿದ ರಾಜ್ಯಧ್ಯಕ್ಷನನ್ನು ಪಕ್ಷದ ವರಿಷ್ಠರು ಯಾಕೆ ಬೆಂಬಲಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಸಭಾಧ್ಯಕ್ಷ ಯುಟಿ ಖಾದರ್ ಬಿಜೆಪಿ ಶಾಸಕರ ಸಸ್ಪೆನ್ಷನ್ ವಾಪಸ್ಸು ತೆಗೆದುಕೊಳ್ಳುವವರೆಗೆ ಪ್ರತಿಭಟನೆ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ