ಹೈಕಮಾಂಡ್ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ: ಇ ತುಕಾರಾಂ, ಸಂಸದ
ತನ್ನ ಪ್ರಕರಣವನ್ನೇ ತೆಗೆದುಕೊಂಡಿದ್ದೇಯಾದರೆ 2008 ರಿಂದ ಶಾಸಕನಾಗಿದ್ದೆ, ಕಳೆದ ಲೋಕ ಸಭಾ ಚುನಾವಣೆ ಸಮಯದಲ್ಲಿ ಹಿರಿಯ ನಾಯಕರು ಸಂಸತ್ ಸ್ಥಾನಕ್ಕೆ ಸ್ಪರ್ಧಿಸುವಂತೆ ಹೇಳಿದರು, ಮರುಮಾತಾಡದೆ ನಾಮಪತ್ರ ಸಲ್ಲಿಸಿದೆ ಮತ್ತು ಜನರ ಆಶೀರ್ವಾದದಿಂದ ಆಯ್ಕೆ ಕೂಡ ಆದೆ, ತಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ, ತನಗೆ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ತುಕಾರಾಮ್ ಹೇಳಿದರು.
ಬಳ್ಳಾರಿ, ಮಾರ್ಚ್ 31: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಳ್ಳಾರಿ ಸಂಸದ ಇ ತುಕಾರಾಂ ಅವರ ಹೆಸರು ಪ್ರಸ್ತಾವಾಗಿದೆಯೇ? ಅವರನ್ನೇ ಈ ಪ್ರಶ್ನೆ ತುಕಾರಾಮ್ ಅವರನ್ನೇ ಕೇಳಿದಾಗ, ಸ್ವಾತಂತ್ರ್ಯ ಸಿಕ್ಕಾಗಿನಿಂದ ಕಾಂಗ್ರೆಸ್ (Congress) ಹೈಕಮಾಂಡ್-ಪ್ರಧಾನ ಪಕ್ಷ, ಪಕ್ಷದಲ್ಲಿ ಏನೇ ಬೆಳವಣಿಗೆ ನಡೆದರೂ ಅದು ಹೈಕಮಾಂಡ್ ನಿರ್ದೇಶನದ ಮೇರೆಗೆ ನಡೆಯುತ್ತದೆ, ನಿರ್ಣಯಗಳನ್ನು ಎಲ್ಲರೂ ಕೂತ್ಕೊಂಡು ಚರ್ಚೆ ಮಾಡಿ ತೆಗೆದುಕೊಳ್ಳುತ್ತಾರೆ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೆಲ್ಲ ಬದ್ಧರಾಗಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಒಡಿಶಾದಲ್ಲಿ ಪೊಲೀಸರು- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ; ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಬಳಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Mar 31, 2025 03:39 PM