Video: ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ(Anant Ambani) ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಪಾದಯಾತ್ರೆ ಆರಂಭಿಸಿದ್ದಾರೆ. ದ್ವಾರಕಾದಲ್ಲಿ ದ್ವಾರಕಾಧೀಶನ ದರ್ಶನದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ. 140 ಕಿ.ಮೀ ಪ್ರಯಾಣವು ಐದನೇ ದಿನಕ್ಕೆ ಕಾಲಿಟ್ಟಿದ್ದು, ದ್ವಾರಕಾ ತಲುಪಲು ಅವರಿಗೆ 2-4 ದಿನಗಳು ಬೇಕಾಗಬಹುದು ಎಂದು ಹೇಳಿದ್ದಾರೆ.
ಜಾಮ್ನಗರ, ಏಪ್ರಿಲ್ 1: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ(Anant Ambani) ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಪಾದಯಾತ್ರೆ ಆರಂಭಿಸಿದ್ದಾರೆ. ದ್ವಾರಕಾದಲ್ಲಿ ದ್ವಾರಕಾಧೀಶನ ದರ್ಶನದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ. 140 ಕಿ.ಮೀ ಪ್ರಯಾಣವು ಐದನೇ ದಿನಕ್ಕೆ ಕಾಲಿಟ್ಟಿದ್ದು, ದ್ವಾರಕಾ ತಲುಪಲು ಅವರಿಗೆ 2-4 ದಿನಗಳು ಬೇಕಾಗಬಹುದು ಎಂದು ಹೇಳಿದ್ದಾರೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ನಾನು ಯಾವಾಗಲೂ ದ್ವಾರಕಾಧೀಶನನ್ನು ನೆನಪಿಸಿಕೊಳ್ಳುತ್ತಿದ್ದೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಕೆಲಸ ಪೂರ್ಣಗೊಳ್ಳುತ್ತಿತ್ತು ಎಂದು ಹೇಳಿದರು. ದ್ವಾರಕಾಧೀಶನು ನಮ್ಮನ್ನು ಆಶೀರ್ವದಿಸಲಿ ಎಂದಿದ್ದಾರೆ. ಪ್ರತಿ ರಾತ್ರಿ 10-12 ಕಿಲೋಮೀಟರ್‌ಗಳನ್ನು ತನ್ನ Z+ ಭದ್ರತೆ ಮತ್ತು ಸ್ಥಳೀಯ ಪೊಲೀಸ್ ರಕ್ಷಣೆಯಲ್ಲಿ ಪಾದಯಾತ್ರೆ ನಡೆಸುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ