AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀತಾ ಅಂಬಾನಿ ಮಗ ದಪ್ಪ ಇರಲು ಇದೇ ಕಾರಣ? ಅನಂತ್ ಅಂಬಾನಿಯನ್ನು ಬಿಟ್ಟಿಲ್ಲ ಬೊಜ್ಜಿನ ಸಮಸ್ಯೆ

ನೀತಾ ಅಂಬಾನಿ ಹಾರ್ವರ್ಡ್ ಇಂಡಿಯಾ ಸಮ್ಮೇಳನದಲ್ಲಿ ಅವರ ಕಿರಿಯ ಮಗ ಅನಂತ್ ಅಂಬಾನಿಯವರ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದು, ಜೀವನದಲ್ಲಿ ಅವರ ಮಗ ಎದುರಿಸಿದ್ದ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆರೋಗ್ಯದ ವಿಷಯದಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದ್ದರೂ, ಅದರಲ್ಲಿಯೂ ಸಂತೋಷ, ಪ್ರೀತಿ ಕಂಡುಕೊಂಡ ಒಬ್ಬ ಯುವಕ ಹೇಗಿರಬಹುದು ಎಂಬುದನ್ನು ಅವರು ವಿವರಿಸಿದ್ದಾರೆ.

ನೀತಾ ಅಂಬಾನಿ ಮಗ ದಪ್ಪ ಇರಲು ಇದೇ ಕಾರಣ? ಅನಂತ್ ಅಂಬಾನಿಯನ್ನು ಬಿಟ್ಟಿಲ್ಲ ಬೊಜ್ಜಿನ ಸಮಸ್ಯೆ
ನೀತಾ ಅಂಬಾನಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 20, 2025 | 6:18 PM

Share

ಇತ್ತೀಚೆಗೆ ನೀತಾ ಅಂಬಾನಿ ಹಾರ್ವರ್ಡ್ ಇಂಡಿಯಾ ಸಮ್ಮೇಳನದಲ್ಲಿ ಕಾಣಿಸಿಕೊಂಡಿದ್ದರು. ಈ ಕುರಿತು ಹಲವಾರು ವಿಡಿಯೋಗಳನ್ನು ನೀವು ನೋಡಿರಬಹುದು. ಆ ಸಮ್ಮೇಳನದಲ್ಲಿ ನೀತಾ ಅಂಬಾನಿ ಅವರು ಅವರ ಕಿರಿಯ ಮಗ ಅನಂತ್ ಅಂಬಾನಿಯವರ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದು, ಜೀವನದಲ್ಲಿ ಅವರ ಮಗ ಎದುರಿಸಿದ್ದ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆರೋಗ್ಯದ ವಿಷಯದಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದ್ದರೂ, ಅದರಲ್ಲಿಯೂ ಸಂತೋಷ, ಪ್ರೀತಿ ಕಂಡುಕೊಂಡ ಒಬ್ಬ ಯುವಕ ಹೇಗಿರಬಹುದು ಎಂಬುದನ್ನು ಅವರು ವಿವರಿಸಿದ್ದಾರೆ.

ನೀತಾ ಅಂಬಾನಿ ಅವರು ಅನಂತ್ ಅವರ ಆರೋಗ್ಯದ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ಬೊಜ್ಜು” ನನ್ನ ಮಗನ ಜೀವಮಾನದ ಹೋರಾಟ. ಇದನ್ನು ಆತ ಮೆಟ್ಟಿನಿಂತು ಸಂತೋಷ ಕಂಡುಕೊಂಡಿದ್ದಾನೆ. ಬದುಕಿನಲ್ಲಿ ಹಲವಾರು ಅಡೆತಡೆ ಬಂದರೂ ಕೂಡ ಅದಕ್ಕೆ ಕುಗ್ಗದೆ ಅದನ್ನು ಎದುರಿಸಿದ್ದಾನೆ. ಅವನಲ್ಲಿರುವ ಅಚಲ ನಂಬಿಕೆ, ಸಕಾರಾತ್ಮಕ ಯೋಚನೆಗಳು ಜೀವನವನ್ನು ಪ್ರೀತಿಸುವಂತೆ ಮಾಡಿದೆ. ಜೀವನದುದ್ದಕ್ಕೂ ಸ್ಥೂಲಕಾಯತೆಯ ವಿರುದ್ಧ ಹೋರಾಡಿ ಮತ್ತಷ್ಟು ಸಕಾರಾತ್ಮಕ ಯೋಚನೆಗಳನ್ನು ಬೆಳೆಸಿಕೊಂಡಿದ್ದಾನೆ. ಆ ಸಮಸ್ಯೆಯನ್ನು ಮೆಟ್ಟಿ ನಿಂತಿದ್ದಾನೆ.” ಎಂದರು. ಜೊತೆಗೆ, ನೀತಾ ಅಂಬಾನಿ ಅವರು ಅನಂತ್ ಅವರ ಜೀವನ ಸಂಗಾತಿ ರಾಧಿಕಾ ಮರ್ಚೆಂಟ್ ಬಗ್ಗೆಯೂ ಮಾತನಾಡಿದ್ದು “ನನ್ನ ಮಗ ಮತ್ತು ರಾಧಿಕಾಳನ್ನು ಒಟ್ಟಿಗೆ ನೋಡುವುದು ಇಂದು ರೀತಿಯ ಮ್ಯಾಜಿಕ್ ಇದ್ದಂತೆ. ಅವರಿಬ್ಬರದ್ದು ಒಂದು ರೀತಿಯ ವಿಶೇಷ ಬಂಧನ” ಎಂದು ಅವರು ಹೇಳಿದ್ದಾರೆ.

ನೀತಾ ಅಂಬಾನಿ ಅವರು ತನ್ನ ಮಗನ ಕುರಿತು ಹೇಳುತ್ತಾ, ತನ್ನ ತಾಯಿಯ ಬಗ್ಗೆಯೂ ಕೆಲವು ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದು ದೀರ್ಘಕಾಲದ ಅವರ ಕನಸನ್ನು ಬಹಿರಂಗಪಡಿಸಿದ್ದಾರೆ. “ನಾನು ಇಲ್ಲಿಗೆ ಬರುವ ಮೊದಲು ನನ್ನ 90 ವರ್ಷದ ತಾಯಿ ತುಂಬಾ ಭಾವುಕರಾದರು. ಬಳಿಕ ನನ್ನ ಇಬ್ಬರು ಸೊಸೆಯಂದಿರಾದ ಶ್ಲೋಕಾ ಮತ್ತು ರಾಧಿಕಾ ಅವರಿಗೆ ಕರೆ ಮಾಡಿ, ನೀತಾ ಚಿಕ್ಕವರಿದ್ದಾಗ, ಅವಳು ಬಯಸಿದರೂ ನಾವು ಅವಳನ್ನು ಹಾರ್ವರ್ಡ್ಗೆ ಕಳುಹಿಸಲು ಸಾಧ್ಯವಾಗಲಿಲ್ಲ ಆದರೆ ಈಗ, ಅವಳನ್ನು ಹಾರ್ವರ್ಡ್ನಲ್ಲಿ ಮಾತನಾಡಲು ಕರೆದಿದ್ದಾರೆ ಎಂದು ಸಂತೋಷ ಹಂಚಿಕೊಂಡರು. ಈ ಕಾರಣದಿಂದ ನನ್ನ ತಾಯಿಯನ್ನು ಸಂತೋಷಪಡಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ತುಂಬಾ ಧನ್ಯವಾದ ಹೇಳಲು ಬಯಸುತ್ತೇನೆ” ಎಂದರು.

ಇದನ್ನೂ ಓದಿ: ಸಿಸೇರಿಯನ್ ನಂತರ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ

ಹಾರ್ವರ್ಡ್ ಇಂಡಿಯಾ ಸಮ್ಮೇಳನದಲ್ಲಿ ನೀತಾ ಅಂಬಾನಿ ಅವರ ಉಪಸ್ಥಿತಿ ಭಾಷಣಕ್ಕಿಂತ ಹೆಚ್ಚಿನದಾಗಿತ್ತು ಎಂಬುದು ಸುಳ್ಳಲ್ಲ. ಅದರಲ್ಲಿಯೂ ಅವರಿಗೆ ಅವರ ಕುಟುಂಬದ ಮೇಲಿರುವ ಪ್ರೀತಿ ಮಾತುಗಳಲ್ಲಿ ಕಂಡುಬರುತ್ತಿತ್ತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ