ಯತ್ನಾಳ್ ಉಚ್ಚಾಟನೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದಾಗ ಯಡಿಯೂರಪ್ಪ ನೋ ಕಾಮೆಂಟ್ಸ್ ಎಂದರು!
ಯಡಿಯೂರಪ್ಪನವರು ಮಾಧ್ಯಮಗಳ ಜೊತೆ ಮಾತಾಡುವಾಗ ಕೆಮ್ಮು ಅವರನ್ನು ಪದೇಪದೆ ಬಾಧಿಸಿತು. ಬಿಜೆಪಿ ನಾಯಕರು ಬೆಲೆಯೇರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಬದಲು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕೆಂದು ಕಾಂಗ್ರೆಸ್ ನಾಯಕರರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸದೆ ವಿಜಯೇಂದ್ರ ಅವರಿಗೆ ಮಾತಾಡುವಂತೆ ಹೇಳಿದರು.
ಬೆಂಗಳೂರು, ಏಪ್ರಿಲ್ 1: ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಯ ಮುಂದೆ ನಿಂತು ಮಾಧ್ಯಮಗಳ ಜೊತೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ. ಆ ಬಗ್ಗೆ ನನ್ನನ್ನೇನೂ ಕೇಳಬೇಡಿ ಎಂದು ಅವರು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರು ಕೂಡ ಭಾಗಿಯಾಗುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಅವರು, ಜೆಡಿಎಸ್ ತನ್ನದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಿದೆ, ಅವರ ಹೋರಾಟಕ್ಕೂ ತಮ್ಮ ಬೆಂಬಲವಿದೆ ಎಂದು ಹೇಳಿದರು.
ಇದನ್ನೂ ಓದಿ: ಬೇರೆಯವರ ಭ್ರಷ್ಟಾಚಾರವನ್ನು ಮಾತಾಡುವ ಯತ್ನಾಳ್ ಖುದ್ದು ಒಬ್ಬ ಭ್ರಷ್ಟಾಚಾರಿ: ಎಎಸ್ ಪಾಟೀಲ್ ನಡಹಳ್ಳಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ