ಯತ್ನಾಳ್ಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಲಿ: ರೇಣುಕಾಚಾರ್ಯ
ರಾಜ್ಯಾದ್ಯಂತ ಓಡಾಡಿ ಜನಾಭಿಪ್ರಾಯ ಸಂಗ್ರಹಿಸಿ ಹೊಸ ಪಾರ್ಟಿ ಕಟ್ತೀನಿ ಅಂತ ಯತ್ನಾಳ್ ಹೇಳುತ್ತಾರೆ, ಇವರೇನಾದರೂ ಹೊಸ ಪಕ್ಷ ಕಟ್ಟಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೇಕಾಗಿವಷ್ಟು ಅಭ್ಯರ್ಥಿಗಳೂ ಸಿಗಲಾರರು, ದಾರಿಹೋಕರ ಕೈಕಾಲು ಹಿಡಿದು ಚುನಾವಣೆಗೆ ನಿಲ್ಲಿಸಬೇಕಾಗುತ್ತದೆ ಎಂದು ಅಪರೂಪಕ್ಕೆ ನಕ್ಕ ರೇಣುಕಾಚಾರ್ಯ ಹೇಳಿದರು.
ದಾವಣಗೆರೆ, ಏಪ್ರಿಲ್ 1: ಬಸನಗೌಡ ಪಾಟೀಲ್ ಯತ್ನಾಳ್ರನ್ನು ಉಚ್ಚಾಟನೆಗೆ ಮೊದಲು ಟೀಕಿಸುತ್ತಿದ್ದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಈಗಲೂ ಅದನ್ನು ಮುಂದುವರಿಸಿದ್ದಾರೆ. ಹಿಂದೂ ಹುಲಿ ಅಂತ ಹೇಳಿಕೊಳ್ಳುವ ಯತ್ನಾಳ್ ಬಿಜೆಪಿ ಟಿಕೆಟ್ ನಿಂದ ಗೆದ್ದಿದ್ದು, ಅವರಲ್ಲಿ ಪಕ್ಷ ಬಿಟ್ಟು ಹೋರಾಡುವ ತಾಕತ್ತಿದ್ರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಲಿ, ಗೆದ್ದರೆ ಅವರನ್ನು ಸತ್ಕರಿಸುತ್ತೇವೆ ಸನ್ಮಾನ ಮಾಡುತ್ತೇವೆ ಎಂದು ಹೇಳಿದರು. ಯತ್ನಾಳ್ಗೆ ಬೇರೆಯವರನ್ನು ಬಯ್ಯುವುದಷ್ಟೇ ಗೊತ್ತು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ ಗೋಪಾಲ ಜೀ ಅವರನ್ನು ಬೈದಿರುವ ವಿಡಿಯೋ ಸಹ ತನ್ನ ಬಳಿ ಇದೆ ಎಂದು ರೇಣುಕಾಚಾರ್ಯ ಹೇಳಿದರು.
ಇದನ್ನೂ ಓದಿ: ಬಿಜೆಪಿ ಸೇರುವಾಗ ಬಿಎಸ್ವೈ ಕಾಲು ಹಿಡಿದಿದ್ದ ಯತ್ನಾಳ್ ಈಗ ಬೇರೆಯವರಿಂದ ಬಲಿಪಶು ಆಗುತ್ತಿದ್ದಾರೆ: ರೇಣುಕಾಚಾರ್ಯ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು

IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ

50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು

ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
