ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಬಬಲೇಶ್ವರ ಕ್ಷೇತ್ರದಿಂದ ₹ 25 ಲಕ್ಷ ದೇಣಿಗೆ ನೀಡುತ್ತೇವೆ: ಅಭಿಮಾನಿಗಳು
ಬಸನಗೌಡ ಯತ್ನಾಳ್ ಅವರು ಹೊಸ ಪಕ್ಷ ಕಟ್ಟಿದರೆ ಅವರ ಜೊತೆ ಹೋಗುತ್ತೇವೆ, ಬಿಜೆಪಿಯಲ್ಲಿ ಮುಂದುವರಿಯುತ್ತೇನೆ ಅಂತ ಹೇಳಿದರೆ ಅವರ ಜೊತೆ ಇರುತ್ತೇವೆ, ಒಂದು ವೇಳೆ ಅವರು ಹೊಸ ಪಕ್ಷ ಕಟ್ಟುವುದಾದರೆ ಬಬಲೇಶ್ವರ ಕ್ಷೇತ್ರದಿಂದ ₹ 25 ಲಕ್ಷ ದೇಣಿಗೆಯನ್ನು ಪಕ್ಷಕ್ಕೆ ನೀಡುತ್ತೇವೆ, ಅವರೇನೇ ಮಾಡಿದರೂ ಅವರ ಜೊತೆ ಇರುತ್ತೇವೆ ಎಂದು ಅಭಿಮಾನಿಗಳು ಹೇಳುತ್ತಾರೆ.
ವಿಜಯಪುರ, ಏಪ್ರಿಲ್1: ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರಾಗಿರುವ ಬಿಜೆಪಿ ಕಾರ್ಯಕರ್ತರು ಶಾಸಕನ ಉಚ್ಚಾಟನೆಯನ್ನು (expulsion) ಮರುಪರಿಶೀಲಿಸುವಂತೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಮಾತಾಡಿದ ಕಾರ್ಯಕರ್ತರೊಬ್ಬರು, ಹಿಂದೆ ಸೈಕಲ್ ತುಳಿದು ಪಕ್ಷ ಕಟ್ಟಿದ್ದಾಗಿ ಹೇಳುವ ಯಡಿಯೂರಪ್ಪನವರು ಈಗ ಸೈಕಲ್ ತುಳಿಯುವ ಅವಶ್ಯಕತೆ ಇಲ್ಲವೆಂದು ಹಿಂದೂತ್ವವಾದಿ ಮುಖಂಡರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆಯೇ? ತೇಜಸ್ವಿನಿ ಅನಂತಕುಮಾರ್, ಯತ್ನಾಳ್, ಸಿಟಿ ರವಿ, ಪ್ರತಾಪ್ ಸಿಂಹ ಮೊದಲಾದವರನ್ನೆಲ್ಲ ತುಳಿಯಲಾಗಿದೆ, ಯಡಿಯೂರಪ್ಪ ಮನೆಯಲ್ಲಿ 3-4 ಟಿಕೆಟ್ ನೀಡಬಹುದು, ಆದರೆ ಬೇರೆಯವರಿಗೆ ಮಾತ್ರ ಪರಿವಾರವಾದ ನಿಯಮ ಅನ್ವಯವಾಗುತ್ತದೆಯೇ ಎಂದು ಅವರು ಕೇಳಿದರು.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದಾಗ ಯಡಿಯೂರಪ್ಪ ನೋ ಕಾಮೆಂಟ್ಸ್ ಎಂದರು!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ