Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟ್ಟೋಗ್ಬೇಡ! ಐಎಎಫ್ ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ

ಬಿಟ್ಟೋಗ್ಬೇಡ! ಐಎಎಫ್ ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ

ಸುಷ್ಮಾ ಚಕ್ರೆ
|

Updated on: Apr 04, 2025 | 10:29 PM

ಐಎಎಫ್ ಪೈಲಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಅವರನ್ನು ಇಂದು (ಏಪ್ರಿಲ್ 4) ಅವರ ಹುಟ್ಟೂರು ಹರಿಯಾಣದಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಇದಕ್ಕೂ ಮೊದಲು ಅವರ ಕುಟುಂಬ ಸದಸ್ಯರೊಂದಿಗೆ, ಊರಿನ ಜನರಿಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಿದ್ಧಾರ್ಥ್ ಅವರ ಜೊತೆ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಅವರ ಪ್ರೇಯಸಿ ಸೋನಿಯಾ ಯಾದವ್ ಕೂಡ ಸ್ಥಳದಲ್ಲಿ ಹಾಜರಿದ್ದರು. ಅವರಿಬ್ಬರೂ ನವೆಂಬರ್ 2ರಂದು ವಿವಾಹವಾಗಲಿದ್ದರು.

ಹರಿಯಾಣ, ಏಪ್ರಿಲ್ 4: ಭಾರತೀಯ ವಾಯುಪಡೆ (IAF) ಪೈಲಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಏಪ್ರಿಲ್ 2ರಂದು ಜಾಮ್​ನಗರದಲ್ಲಿ ತರಬೇತಿ ಹಾರಾಟದ ವೇಳೆ ಉಂಟಾದ ಯುದ್ಧವಿಮಾನ (Fighter Jet) ಅಪಘಾತದಲ್ಲಿ ಮೃತಪಟ್ಟಿದ್ದರು. ಇಂದು ಹರಿಯಾಣದ ಮಜ್ರಾ ಭಾಲ್ಖಿಯಲ್ಲಿರುವ ಅವರ ಸ್ವಗ್ರಾಮದಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. ತ್ರಿವರ್ಣ ಧ್ವಜ ಹೊದಿಸಿದ ಅವರ ಶವಪೆಟ್ಟಿಗೆಯ ಬಳಿ ನಿಂತಿದ್ದ ಅವರ ಕುಟುಂಬಸ್ಥರು ಮತ್ತು ಪ್ರೀತಿಪಾತ್ರರು ಅಂತಿಮ ವಿದಾಯ ಹೇಳಿದರು. ಈ ವೇಳೆ ಸಿದ್ಧಾರ್ಥ್ ಅವರ ಭಾವಿ ಪತ್ನಿ ಸೋನಿಯಾ ಯಾದವ್ ಕೂಡ ಸ್ಥಳದಲ್ಲಿ ಹಾಜರಿದ್ದರು. 10 ದಿನಗಳ ಹಿಂದಷ್ಟೇ ಅವರ ನಿಶ್ಚಿತಾರ್ಥವಾಗಿತ್ತು. ಅವರ ವಿವಾಹವು ನವೆಂಬರ್ 2ರಂದು ನಡೆಯಬೇಕಿತ್ತು. ಆದರೆ, ದುರದೃಷ್ಟವಶಾತ್ ಸಿದ್ಧಾರ್ಥ್ ಇಹಲೋಕ ತ್ಯಜಿಸಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದ ಸೋನಿಯಾ ತಾನು ಮದುವೆಯಾಗಿ, ಜೊತೆಯಲ್ಲೇ ಬಾಳಬೇಕೆಂದುಕೊಂಡಿದ್ದ ಸಿದ್ಧಾರ್ಥ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಸಿದ್ಧಾರ್ಥ್ ಏಪ್ರಿಲ್ 2ರ ಬುಧವಾರ ಗುಜರಾತ್‌ನ ಜಾಮ್‌ನಗರ ಬಳಿ ನಿಯಮಿತ ತರಬೇತಿ ಹಾರಾಟದ ಸಮಯದಲ್ಲಿ ಜಾಗ್ವಾರ್ ಫೈಟರ್ ಜೆಟ್ ಅಪಘಾತದಲ್ಲಿ ದುರಂತವಾಗಿ ಪ್ರಾಣ ಕಳೆದುಕೊಂಡರು. IAFನ ಡೀಪ್-ಪೆನೆಟ್ರೇಷನ್ ಸ್ಟ್ರೈಕ್ ಫ್ಲೀಟ್‌ನ ಭಾಗವಾಗಿರುವ ಜಾಗ್ವಾರ್ ಫೈಟರ್ ಜೆಟ್ ಜಾಮ್‌ನಗರ ವಾಯುಪಡೆ ನಿಲ್ದಾಣದಿಂದ ಹೊರಟಿತ್ತು. ಆ ವಿಮಾನವು ಜಾಮ್‌ನಗರ ನಗರದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಸುವರ್ದಾ ಗ್ರಾಮದ ಬಳಿ ರಾತ್ರಿ 9.30ರ ಸುಮಾರಿಗೆ ಅಪಘಾತಕ್ಕೀಡಾಯಿತು. ಪೈಲಟ್‌ಗಳಲ್ಲಿ ಒಬ್ಬರು ಸುರಕ್ಷಿತವಾಗಿ ಹೊರಗೆ ಹಾರುವಲ್ಲಿ ಯಶಸ್ವಿಯಾದರೂ, ಸಿದ್ಧಾರ್ಥ್ ಬದುಕುಳಿಯಲಿಲ್ಲ. ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆಯೊಂದಿಗೆ ದೊಡ್ಡ ಸ್ಫೋಟದ ಶಬ್ದ ಕೇಳಿದ ಸ್ಥಳೀಯ ಗ್ರಾಮಸ್ಥರು ಸ್ಥಳದಲ್ಲಿ ಸಿದ್ಧಾರ್ಥ್ ಅವರ ಮೃತದೇಹವನ್ನು ಕಂಡುಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ