Reliance industries bonus | ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಎಲ್ಲ ಸಿಬ್ಬಂದಿಗೆ ಬೋನಸ್

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ನಿಂದ 2020- 21ನೇ ಸಾಲಿಗೆ ಎಲ್ಲ ಸಿಬ್ಬಂದಿಗೆ ಪೂರ್ಣವಾಗಿ ಬೋನಸ್ ನೀಡಲು ನಿರ್ಧರಿಸಲಾಗಿದೆ.

Reliance industries bonus | ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಎಲ್ಲ ಸಿಬ್ಬಂದಿಗೆ ಬೋನಸ್
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)
Follow us
Srinivas Mata
|

Updated on: May 03, 2021 | 11:42 PM

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಎಲ್ಲ ಸಿಬ್ಬಂದಿಗೆ 2020- 21ನೇ ಸಾಲಿನಲ್ಲಿ ಸಂಪೂರ್ಣವಾಗಿ ಬೋನಸ್ ನೀಡುವುದಕ್ಕೆ ನಿರ್ಧಾರ ಮಾಡಿದೆ. ಸವಾಲಿನ ವರ್ಷದಲ್ಲಿ ಕಂಪೆನಿಗೆ ಬದ್ಧತೆ ತೋರಿದ ಸಿಬ್ಬಂದಿಗೆ ಇದನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ. “ಈ ಹಿಂದೆಂದೂ ಕಂಡರಿಯದಂಥ ಸವಾಲಿನ ಅನುಭವವನ್ನು ಕೋವಿಡ್- 19 ಕಾರಣಕ್ಕೆ ಭಾರತದಾದ್ಯಂತ ಎದುರಿಸುತ್ತಿದ್ದೇವೆ. ಈ ಮಧ್ಯೆ ನಿಮ್ಮ ಮತ್ತು ನಿಮ್ಮ ಕುಟುಂಬದ ಸೌಖ್ಯವು ನಮ್ಮ ಅತಿ ಮುಖ್ಯ ಆದ್ಯತೆ. ಇದರ ಕಡೆಗೆ ನಮ್ಮ ಶ್ರಮವನ್ನು ಪ್ರಮುಖವಾಗಿ ವಿಸ್ತರಿಸಿದ್ದೇವೆ ಮತ್ತು ನಮ್ಮ ಎಲ್ಲ ಸಾಮರ್ಥ್ಯವನ್ನು ಒಗ್ಗೂಡಿಸಿ ನಿಮ್ಮ ಎಲ್ಲರಿಗೂ ಸಮಯಕ್ಕೆ ದೊರೆಯುವುದಕ್ಕೆ ಪ್ರಯತ್ನಿಸುತ್ತಿದ್ದೇವೆ,” ಎಂದು ರಿಲಯನ್ಸ್ ಆಡಳಿತ ಮಂಡಳಿಯಿಂದ ನೀಡಿದ ಪತ್ರದಲ್ಲಿ ಸಿಬ್ಬಂದಿಗೆ ತಿಳಿಸಿದೆ.

2020- 21ನೇ ಸಾಲಿನ ವೇರಿಯಬಲ್ ಪೇ ಅನ್ನು ಸೋಮವಾರ ವಿತರಣೆ ಮಾಡಿರುವುದಾಗಿ ಹೇಳಲಾಗಿದೆ. ಇದು ಸತತ ಎರಡನೇ ವರ್ಷ ಕಂಪೆನಿಯಿಂದ ಶೇ 100ರಷ್ಟು ವೇರಿಯಬಲ್ ಪೇ ಪಾವತಿಸಲಿದೆ. ಕೊರೊನಾ ಕಾರಣಕ್ಕೆ ಕಳೆದ ವರ್ಷದ ಏಪ್ರಿಲ್​ನಲ್ಲಿ ಕಂಪೆನಿಯು ಘೋಷಣೆ ಮಾಡಿದ ಪ್ರಕಾರ, ವೇತನ ಕಡಿತ ಹಾಗೂ ಬೋನಸ್ ಮುಂದೂಡಿಕೆ ಬಗ್ಗೆ ತಿಳಿಸಿತ್ತು. ಆ ನಂತರ ಅಕ್ಟೋಬರ್​ನಲ್ಲಿ ವೇತನ ಕಡಿತವನ್ನು ವಾಪಸ್ ಪಡೆದು, ಎಲ್ಲ ಸಿಬ್ಬಂದಿಗೆ ಬೋನಸ್ ನೀಡಲಾಗಿತ್ತು.

ಇಂಥ ಸವಾಲಿನ ಸಂದರ್ಭದಲ್ಲಿ ನಿಮ್ಮ ನಿರಂತರ ಕೊಡುಗೆಗೆ ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇವೆ. ನಿಮ್ಮ ಬದ್ಧತೆ ಹಾಗೂ ಸಮರ್ಪಣೆಯು ವಿಶಿಷ್ಟವಾದದ್ದು ಎಂದು ಸಮೂಹ ಸಂಸ್ಥೆಯು ಪತ್ರದಲ್ಲಿ ತಿಳಿಸಿದೆ. ಅಂದಹಾಗೆ ಕಂಪೆನಿಯಿಂದ ಎಲ್ಲ ಸಿಬ್ಬಂದಿಗೆ ಮತ್ತು ಅವರ ಕುಟುಂಬದವರಿಗೆ ಲಸಿಕೆ ಹಾಕುವ ಕಾರ್ಯವನ್ನು ಶುಕ್ರವಾರದಿಂದ ಶುರು ಮಾಡಲಾಗಿದೆ. ಯಾರು ಈಗಾಗಲೇ ಲಸಿಕೆ ಹಾಕಿಸಿಕೊಂಡಿರುತ್ತಾರೋ ಅವರಿಗೆ ರೀಎಂಬರ್ಸ್​ಮೆಂಟ್ ಮಾಡಲಾಗುತ್ತದೆ.

ನಮ್ಮ ಅತಿ ದೊಡ್ಡ ಆದ್ಯತೆ ಅಂದರೆ ಅದು ನಮ್ಮ ಜನರು ಮತ್ತು ಅವರ ಹಾಗೂ ಕುಟುಂಬದವರ ರಕ್ಷಣೆಗೆ ಏನೆಲ್ಲ ಮಾಡಬೇಕೋ ಅದನ್ನು ಮಾಡಲು ಬಯಸುತ್ತೇವೆ. ನೀವು ಹಾಗೂ ನಿಮ್ಮ ಕುಟುಂಬದವರು ಈ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ತುರ್ತಾಗಿ ಪಾಲ್ಗೊಂಡಲ್ಲಿ ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ ಎಂದು ರಿಲಯನ್ಸ್ ಹೇಳಿದೆ.

ಇದನ್ನೂ ಓದಿ: ಸೌದಿ ಅರಾಮ್ಕೋಗೆ ರಿಲಯನ್ಸ್ ಆಯಿಲ್-ಟು-ಕೆಮಿಕಲ್ಸ್ ಷೇರಿನ ಪಾಲು ಮಾರಾಟ ಮಾತುಕತೆಗೆ ಮತ್ತೆ ಚಾಲನೆ

(Mukesh Ambani led Reliance Industries announced bonus for 2020- 21 to all employees on Monday)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ