ವಿಶ್ವದ ಅತಿ ದೊಡ್ಡ ತೈಲ ರಫ್ತುದಾರ ಕಂಪೆನಿಯಾದ ಸೌದಿ ಅರಾಮ್ಕೋಗೆ ಮಾರಾಟ ಮಾಡುವುದರಲ್ಲಿ ಗುಜರಾತ್ನ ಜಾಮ್ನಗರ್ನಲ್ಲಿ ಇರುವ ಎರಡು ತೈಲ ರಿಫೈನರಿಗಳು ಮತ್ತು ಪೆಟ್ರೋಕೆಮಿಕಲ್ ಆಸ್ತಿಗಳು ಒಳಗೊಂಡಿವೆ. ಈ ವ್ಯವಹಾರ 2020ರ ಮಾರ್ಚ್ಗೆ ಪೂರ್ಣವಾಗಬೇಕಿತ್ತು. ಆದರೆ ಯಾವ ಕಾರಣಕ್ಕೆ ವಿಳಂಬ ಆಯಿತು ಎಂಬ ಕಾರಣ ಗೊತ್ತಾಗಿಲ್ಲ. ಫೈನಾನ್ಷಿಯಲ್ ಟೈಮ್ಸ್ನಿಂದ ಮೂಲಗಳನ್ನು ಆಧರಿಸಿ ವರದಿ ಮಾಡಲಾಗಿದ್ದು, ಈಚಿನ ವಾರಗಳಲ್ಲಿ ಮತ್ತೆ ಮಾತುಕತೆ ಆರಂಭವಾಗಿದೆ ಎನ್ನಲಾಗಿದೆ. ಅರಾಮ್ಕೋದಿಂದ ಷೇರು ಖರೀದಿಗೆ ಆರಂಭದಲ್ಲಿ ಷೇರಿನ ಮೂಲಕವೇ ಪಾವತಿಸುವ ಬಗ್ಗೆ ಚರ್ಚೆ ಆಗಿತ್ತು. ಆ ನಂತರ ಕೆಲ ವರ್ಷಗಳ ಕಾಲ ನಗದು ಪಾವತಿಸುವ ಬಗ್ಗೆ ಮಾತು ಬಂದಿತು. ಆದರೆ ಈಗ ಯಾವ ಪ್ರಮಾಣದಲ್ಲಿ ಷೇರು ಮತ್ತು ಎಷ್ಟು ಪ್ರಮಾಣದಲ್ಲಿ ನಗದು ಪಾವತಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅದಿನ್ನೂ ಅಂತಿಮ ಆಗಬೇಕಿದೆ.
ಈ ಬಗ್ಗೆ ಮಿಂಟ್ ವರದಿ ಮಾಡಿದ್ದು, ರಿಲಯನ್ಸ್ನಿಂದ ಪ್ರತಿಕ್ರಿಯೆ ಕೇಳಲು ಮಾಡಿದ ಇಮೇಲ್ಗೆ ಯಾವುದೇ ಉತ್ತರ ಬಂದಿಲ್ಲ ಎನ್ನಲಾಗಿದೆ. ಸೌದಿ ಅರೇಬಿಯಾದ ರಾಜ ಮೊಹ್ಮದ್ ಬಿನ್ ಸಲ್ಮಾನ್ ಅವರು ಮಂಗಳವಾರದಂದು ಮಾತನಾಡುವ ವೇಳೆ, ಸೌದಿ ರಾಷ್ಟ್ರೀಯ ತೈಲ ಕಂಪೆನಿಯಲ್ಲಿ ಅಲ್ಪ ಪ್ರಮಾಣದ ಷೇರಿನ ಪಾಲನ್ನು ವಿದೇಶಿ ಹೂಡಿಕೆದಾರರಿಗೆ ಮಾರಾಟ ಮಾಡುವ ಬಗ್ಗೆ ಹೇಳಿದ್ದಾರೆ. ನಾನೀಗ ಯಾವುದೇ ಮಾತು ನೀಡಲು ಬಯಸುವುದಿಲ್ಲ. ಆದರೆ ಶೇ 1ರಷ್ಟು ಖರೀದಿಗೆ ಮಾತುಕತೆ ನಡೆದಿದೆ ಎಂದು ಟೀವಿ ಸಂದರ್ಶನದಲ್ಲಿ ಹೇಳಿದ್ದಾರೆ. ಖರೀದಿ ಮಾಡುವವರು ಯಾರು ಮತ್ತಿತರ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ರಿಲಯನ್ಸ್ ಮತ್ತೊಂದು ಮೈಲಿಗಲ್ಲು, ಇಂಧನ ವಲಯದಲ್ಲಿ ಜಾಗತಿಕವಾಗಿ 2ನೇ ಸ್ಥಾನ
(Saudi Aramco and Reliance Industries deal revived again according to media reports)