ರಿಲಯನ್ಸ್ ಮತ್ತೊಂದು ಮೈಲಿಗಲ್ಲು, ಇಂಧನ ವಲಯದಲ್ಲಿ ಜಾಗತಿಕವಾಗಿ 2ನೇ ಸ್ಥಾನ

ರಿಲಯನ್ಸ್ ಮತ್ತೊಂದು ಮೈಲಿಗಲ್ಲು, ಇಂಧನ ವಲಯದಲ್ಲಿ ಜಾಗತಿಕವಾಗಿ 2ನೇ ಸ್ಥಾನ

ವಿಶ್ವದ ಅತಿದೊಡ್ಡ ಉದ್ದಿಮೆಯಾಗಿ ಬೆಳೆಯುವತ್ತ ದಾಪುಗಾಲಿಡುತ್ತಿರುವ ಮುಕೇಶ್ ಆಂಬಾನಿಯ ರಿಲಯನ್ಸ್ ಸಂಸ್ಥೆಯು, ಕಳೆದ ಶುಕ್ರವಾರದಂದು ತನ್ನ ಗುರಿಗೆ ಮತ್ತಷ್ಟು ಹತ್ತಿರವಾಗಿದೆ. ಇಂಧನ ವಲಯದಲ್ಲಿ ಅಮೆರಿಕದ ದೈತ್ಯ ಎಕ್ಸಾನ್ ಕಂಪನಿಯನ್ನು ಹಿಂದಿಕ್ಕಿರುವ ರಿಲಯನ್ಸ್, ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1.75 ಟ್ರಿಲಿಯನ್ ಡಾಲರ್ನಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸೌದಿ ಅರೇಬಿಯಾದ ಅರಾಮ್ಕೊ ಸಂಸ್ಥೆ ಮಾತ್ರ ರಿಲಯನ್ಸ್ ಇಂಡಸ್ಟ್ರೀಸ್ಗಿಂತ ಗಾತ್ರ, ಆದಾಯ ಮತ್ತು ವಹಿವಾಟಿನಲ್ಲಿ ಮುಂದಿದೆ. ಮೂಲಗಳ ಪ್ರಕಾರ ಈ ವರ್ಷ ಅಂಬಾನಿ ಕಂಪನಿಯ […]

Ayesha Banu

| Edited By:

Jul 28, 2020 | 12:04 PM

ವಿಶ್ವದ ಅತಿದೊಡ್ಡ ಉದ್ದಿಮೆಯಾಗಿ ಬೆಳೆಯುವತ್ತ ದಾಪುಗಾಲಿಡುತ್ತಿರುವ ಮುಕೇಶ್ ಆಂಬಾನಿಯ ರಿಲಯನ್ಸ್ ಸಂಸ್ಥೆಯು, ಕಳೆದ ಶುಕ್ರವಾರದಂದು ತನ್ನ ಗುರಿಗೆ ಮತ್ತಷ್ಟು ಹತ್ತಿರವಾಗಿದೆ. ಇಂಧನ ವಲಯದಲ್ಲಿ ಅಮೆರಿಕದ ದೈತ್ಯ ಎಕ್ಸಾನ್ ಕಂಪನಿಯನ್ನು ಹಿಂದಿಕ್ಕಿರುವ ರಿಲಯನ್ಸ್, ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1.75 ಟ್ರಿಲಿಯನ್ ಡಾಲರ್ನಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸೌದಿ ಅರೇಬಿಯಾದ ಅರಾಮ್ಕೊ ಸಂಸ್ಥೆ ಮಾತ್ರ ರಿಲಯನ್ಸ್ ಇಂಡಸ್ಟ್ರೀಸ್ಗಿಂತ ಗಾತ್ರ, ಆದಾಯ ಮತ್ತು ವಹಿವಾಟಿನಲ್ಲಿ ಮುಂದಿದೆ.

ಮೂಲಗಳ ಪ್ರಕಾರ ಈ ವರ್ಷ ಅಂಬಾನಿ ಕಂಪನಿಯ ಷೇರು ಶೇಕಡಾ 50 ರಷ್ಟು ಏರಿಕೆಯಾಗಿದೆ. ರಿಲಯನ್ಸ್ ಸಂಸ್ಥೆ ಈಗಾಗಲೇ ಡಿಜಿಟಲ್ ಮತ್ತು ರಿಟೇಲ್ ಉದ್ಯಮಗಳಲ್ಲಿ ಶೇಕಡಾ 46ರಷ್ಟು ವಿದೇಶಿ ಹೂಡಿಕೆ ಗಿಟ್ಟಿಸಿಕೊಂಡಿದ್ದು ಸ್ವದೇಶದ ಹೂಡಿಕೆದಾರರನ್ನು ಸಹ ಸೆಳೆಯುತ್ತಿದೆ.

ತಮ್ಮ ತಂದೆ ಧೀರೂಭಾಯಿ ಮರಣಾನಂತರ ಕಂಪನಿಯ ಸಾರಥ್ಯವಹಿಸಿಕೊಂಡ ಮುಕೇಶ್, ಅತ್ಯಂತ ಚಾಣಾಕ್ಷತೆಯಂದ ಅದನ್ನು ಮುನ್ನಡೆಸುತ್ತಾ ವಿಶ್ವದ ಅತಿದೊಡ್ಡ ಕಂಪನಿಗಳಲ್ಲೊಂದಾಗಿ ಮಾರ್ಪಡಿಸಿದ್ದಾರೆ. ಅವರ ಕಾರ್ಯಕ್ಷಮತೆ ಮತ್ತು ವ್ಯಾವಹಾರಿಕ ಬದ್ಧಿಮತ್ತಗೆ ಮಾರುಹೋಗಿರುವ ಗೂಗಲ್ ಮತ್ತು ಫೇಸ್ಬುಕ್ನಂಥ ಪ್ರತಿಷ್ಥಿತ ಸಂಸ್ಥೆಗಳು ಸಹ ರಿಲಯನ್ಸ್ನಲ್ಲಿ ಹೂಡಿಕೆ ಮಾಡಿವೆ.

ಕೊರೊನಾ ಹೊಡೆತಕ್ಕೆ ವಿಶ್ವದ ಎಲ್ಲಾ ಪ್ರಮುಖ ಕಂಪನಿಗಳು ತತ್ತರಿಸಿ ಅಪಾರ ನಷ್ಟ ಅನುಭವಿಸುತ್ತಿದ್ದರೆ, ರಿಲಯನ್ಸ್ ಮಾತ್ರ ತನ್ನ ಮಾರುಕಟ್ಟೆ ಹಾಗೂ ವಹಿವಾಟನ್ನು ಸತತವಾಗಿ ವಿಸ್ತರಿಸುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada