ಗೆಳತಿ ಮುಖಕ್ಕೆ ಸ್ಯಾನಿಟೈಸರ್​ ಎರಚಿ, ಲೈಟರ್​ನಿಂದ ಬೆಂಕಿ ಹಚ್ಚಿದ ಯುವಕ, ಯಾಕೆ?

ಚಂಡೀಗಢ: ಕೇವಲ 2,000 ರೂಪಾಯಿಗಾಗಿ ತನ್ನ ಗೆಳತಿಯ ಮುಖಕ್ಕೆ ಯುವಕನೊಬ್ಬ ಸ್ಯಾನಿಟೈಸರ್​ ಎರಚಿ, ಲೈಟರ್​ನಿಂದ ಬೆಂಕಿ ಹಚ್ಚಿರುವ ಘಟನೆ ನಗರದಲ್ಲಿ ನಡೆದಿದೆ. ದೇಶದ ಈಶಾನ್ಯ ಭಾಗದ ಶಿಲ್ಲಾಂಗ್​ ಮೂಲದ 22 ವರ್ಷದ ಯುವತಿ ಕಳೆದ ವರ್ಷ ನೌಕರಿ ಅರಸಿ ನಗರಕ್ಕೆ ಬಂದು ನೆಲೆಸಿದ್ದಳು. ಈ ವೇಳೆ ಯುವತಿಗೆ ಆರೋಪಿಯ ಪರಿಚಯವಾಗಿ ಇಬ್ಬರೂ ಹತ್ತಿರವಾಗಿದ್ದರು. ಆದರೆ, ಇತ್ತೀಚೆಗೆ ಯುವಕನು ಆಕೆಯ ಬಳಿ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದನಂತೆ. ಅಂತೆಯೇ, ಈ ಬಾರಿಯೂ 2,000 ರೂಪಾಯಿ ಡಿಮ್ಯಾಂಡ್​ ಮಾಡಿದ್ದ. ಇವನ […]

ಗೆಳತಿ ಮುಖಕ್ಕೆ ಸ್ಯಾನಿಟೈಸರ್​ ಎರಚಿ, ಲೈಟರ್​ನಿಂದ ಬೆಂಕಿ ಹಚ್ಚಿದ ಯುವಕ, ಯಾಕೆ?
ಪ್ರಾತಿನಿಧಿಕ ಚಿತ್ರ
Follow us
KUSHAL V
| Updated By:

Updated on:Jul 28, 2020 | 12:48 AM

ಚಂಡೀಗಢ: ಕೇವಲ 2,000 ರೂಪಾಯಿಗಾಗಿ ತನ್ನ ಗೆಳತಿಯ ಮುಖಕ್ಕೆ ಯುವಕನೊಬ್ಬ ಸ್ಯಾನಿಟೈಸರ್​ ಎರಚಿ, ಲೈಟರ್​ನಿಂದ ಬೆಂಕಿ ಹಚ್ಚಿರುವ ಘಟನೆ ನಗರದಲ್ಲಿ ನಡೆದಿದೆ.

ದೇಶದ ಈಶಾನ್ಯ ಭಾಗದ ಶಿಲ್ಲಾಂಗ್​ ಮೂಲದ 22 ವರ್ಷದ ಯುವತಿ ಕಳೆದ ವರ್ಷ ನೌಕರಿ ಅರಸಿ ನಗರಕ್ಕೆ ಬಂದು ನೆಲೆಸಿದ್ದಳು. ಈ ವೇಳೆ ಯುವತಿಗೆ ಆರೋಪಿಯ ಪರಿಚಯವಾಗಿ ಇಬ್ಬರೂ ಹತ್ತಿರವಾಗಿದ್ದರು. ಆದರೆ, ಇತ್ತೀಚೆಗೆ ಯುವಕನು ಆಕೆಯ ಬಳಿ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದನಂತೆ.

ಅಂತೆಯೇ, ಈ ಬಾರಿಯೂ 2,000 ರೂಪಾಯಿ ಡಿಮ್ಯಾಂಡ್​ ಮಾಡಿದ್ದ. ಇವನ ಕಾಟಕ್ಕೆ ರೋಸು ಹೋಗಿದ್ದ ಯುವತಿ ನಿರಾಕರಿಸಿದಳು. ಅಷ್ಟಕ್ಕೇ ಸಿಟ್ಟಾದ ಆರೋಪಿ ಅಲ್ಲೇ ಇದ್ದ ಸ್ಯಾನಿಟೈಸರ್​ನ ಅವಳ ಮುಖಕ್ಕೆ ಎರಚಿ, ಲೈಟರ್​ನಿಂದ ಬೆಂಕಿ ಹಚ್ಚಿದ್ದಾನೆ. ಇದರಿಂದ ತೀವ್ರ ಸುಟ್ಟು ಗಾಯಗಳನ್ನ ಅನುಭವಿಸಿದ ಯುವತಿಯ ಚೀರಾಟ ಕೇಳಿ ಅಕ್ಕಪಕ್ಕದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅದೃಷ್ಟವಶಾತ್​ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದೀಗ ಯುವತಿ ನೀಡಿದ ದೂರಿನನ್ವಯ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ.

Published On - 4:38 pm, Mon, 27 July 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ