ಶ್ರಮಿಕ್ ಟ್ರೈನ್ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
ದೆಹಲಿ: ಲಾಕ್ಡೌನ್ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್ ಟ್ರೈನ್ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು. ಶ್ರಮಿಕ್ ಸ್ಪೆಷಲ್ ಟ್ರೈನ್ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ […]
ದೆಹಲಿ: ಲಾಕ್ಡೌನ್ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್ ಟ್ರೈನ್ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು.
ಶ್ರಮಿಕ್ ಸ್ಪೆಷಲ್ ಟ್ರೈನ್ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ತಿಳಿದುಬಂದಿದೆ. ಹೌದು, ಸರಿಸುಮಾರು 62 ಲಕ್ಷ ವಲಸೆ ಕಾರ್ಮಿಕರನ್ನ ಹೊತ್ತೊಯ್ದ ಈ ವಿಶೇಷ ರೈಲುಗಳ ಸೇವೆ ಆರಂಭವಾದ ಸಮಯದಿಂದ ಈಗಿನವರೆಗೆ 428 ಕೋಟಿ ರೂಪಾಯಿ ಗಳಿಸಿದೆ. ಅಂದ ಹಾಗೆ, ಈ ಮಾಹಿತಿಯನ್ನು ಅಜಯ್ ಬೋಸ್ ಎಂಬುವವರು RTI ಮೂಲಕ ರೈಲ್ವೇ ಇಲಾಖೆಯಿಂದ ಪಡೆದಿದ್ದಾರೆ.
ಕಾರ್ಮಿಕರಿಂದ ಟಿಕೆಟ್ ದರ ಪಡೆದಿಲ್ಲ: ಸ್ಪಷ್ಟನೆ ಹೀಗಾಗಿ, ಕೇಂದ್ರ ಸರ್ಕಾರ ವಲಸಿಗರನ್ನ ಉಚಿತವಾಗಿ ಕರೆದುಕೊಂಡು ಹೋಗಿಲ್ಲ ಎಂಬುದು ಅವರ ವಾದ. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಲಾಖೆಯು ಈ ಮೊತ್ತವನ್ನು ನಾವು ಆಯಾ ರಾಜ್ಯಗಳಿಂದ ಪಡೆದಿದ್ದೇವೆ. ಹಾಗಾಗಿ, ನಾವು ಕಾರ್ಮಿಕರಿಂದ ಟಿಕೆಟ್ ದರ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ, ವಿಶೇಷ ರೈಲು ಚಲಾಯಿಸುವ ಶೇಕಡಾ 85 ರಷ್ಟು ಮೊತ್ತವನ್ನ ನಾವೇ ಭರಿಸಿದ್ದೇವೆ ಎಂದು ತಿಳಿಸಿದ್ದಾರೆ.
Published On - 3:00 pm, Mon, 27 July 20