Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದ ಬೆಲೆ ದಿಢೀರ್ ಕುಸಿತಕ್ಕೆ ಏನು ಕಾರಣ? ಅಕ್ಷಯ ತೃತೀಯಕ್ಕೆ ಮತ್ತಷ್ಟು ಬೆಲೆ ಇಳಿಕೆ ಆಗುತ್ತಾ? ಶೇ. 38ರಷ್ಟು ಇಳಿಕೆ ಸಾಧ್ಯತೆ

Will gold rates fall 38% further?: ಚಿನ್ನದ ಬೆಲೆ ಇಂದು ಶುಕ್ರವಾರ ಗ್ರಾಮ್​​ಗೆ ಬರೋಬ್ಬರಿ 160 ರೂಗಳಷ್ಟು ಇಳಿಕೆ ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನದ ಬೆಲೆ ಕುಸಿಯುವುದು ಅಪರೂಪ. ಟ್ಯಾರಿಫ್ ಸಮರದ ಮಧ್ಯೆಯೂ ಬೆಲೆ ಇಳಿಕೆ ಆಗಿರುವುದು ಗಮನಾರ್ಹ ಸಂಗತಿ. ಟ್ರಂಪ್ ಅವರು ಸುಂಕ ವಿಧಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಚಿನ್ನದ ಮೇಲೆ ಹೆಚ್ಚು ಹೂಡಿಕೆಗಳಾಗಿದ್ದುವು. ಈಗ ಲಾಭಕ್ಕೆ ಮಾರಲಾಗುತ್ತಿರುವುದು ಬೆಲೆ ಇಳಿಯಲು ಕಾರಣ ಇರಬಹುದು.

ಚಿನ್ನದ ಬೆಲೆ ದಿಢೀರ್ ಕುಸಿತಕ್ಕೆ ಏನು ಕಾರಣ? ಅಕ್ಷಯ ತೃತೀಯಕ್ಕೆ ಮತ್ತಷ್ಟು ಬೆಲೆ ಇಳಿಕೆ ಆಗುತ್ತಾ? ಶೇ. 38ರಷ್ಟು ಇಳಿಕೆ ಸಾಧ್ಯತೆ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 04, 2025 | 6:38 PM

ನವದೆಹಲಿ, ಏಪ್ರಿಲ್ 4: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver rates) ಇವತ್ತು ಶುಕ್ರವಾರ ಗಣನೀಯವಾಗಿ ಕುಸಿತ ಕಂಡವು. ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಮಾರುಕಟ್ಟೆಯಲ್ಲಿ ಈ ಎರಡು ಅಮೂಲ್ಯ ಲೋಹಗಳ ಬೆಲೆ ಇಳಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 9,200 ರೂಗಿಂತ ಕೆಳಗೆ ಬಂದಿದೆ. ಎಂಸಿಎಕ್ಸ್​​ನಲ್ಲಿ ಬೆಲೆ 9,000 ರೂಗಿಂತ ಕಡಿಮೆ ಮಟ್ಟಕ್ಕೆ ಇಳಿಕೆ ಆಗಿದೆ. ಇದು ಚಿನ್ನದ ಬೆಲೆಯ ಮತ್ತಷ್ಟು ಕುಸಿತದ ಸಾಧ್ಯತೆಯನ್ನು ತೋರಿಸುತ್ತಿದೆ. ಅಮೆರಿಕದ ಕಾಮೆಕ್ಸ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ. 1.4ರಷ್ಟು ಕುಸಿತವಾಗಿದೆ. ಒಂದು ಔನ್ಸ್ ಚಿನ್ನಕ್ಕೆ 3,073 ಡಾಲರ್ ಬೆಲೆ ಇದೆ.

ಚಿನ್ನದ ಬೆಲೆ ಇಳಿಕೆಗೆ ಏನು ಕಾರಣ?

ಟ್ರಂಪ್ ಅವರು ಆರಂಭಿಸಿದ ಟ್ಯಾರಿಫ್ ಸಮರದಿಂದ ಅಮೆರಿಕದಲ್ಲಿ ಹಣದುಬ್ಬರ ಏರಿಕೆ ಮತ್ತು ಆರ್ಥಿಕ ಹಿಂಜರಿತ ಸೃಷ್ಟಿಯಾಗುವ ಅಪಾಯ ಇದೆ. ಇಂಥ ಪರಿಸ್ಥಿತಿಯಲ್ಲಿ ಚಿನ್ನದಂತಹ ಅಮೂಲ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಆದಾಗ್ಯೂ ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಆಗಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಅಮೆರಿಕದ ಸರಕುಗಳಿಗೆ ಚೀನಾದಿಂದಲೂ ಶೇ. 34 ಪ್ರತಿಸುಂಕ ಹೇರಿಕೆ; ಎಲ್ಲಿಯವರೆಗೆ ಹೋಗುತ್ತೆ ಈ ಟ್ರೇಡ್ ವಾರ್?

ಇದನ್ನೂ ಓದಿ
Image
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
Image
ಚಿನ್ನದ ಬೆಲೆ ಇಳಿಕೆ ಯಾವಾಗ?
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
Image
ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಪ್ರಾಶಸ್ತ್ಯ: ಸಿಇಎ

ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಪ್ರತಿಸುಂಕ ಘೋಷಣೆ ಮಾಡಿದಾಗ, ಕೆಲ ವಸ್ತುಗಳ ಮೇಲೆ ಸುಂಕ ವಿನಾಯಿತಿಯನ್ನೂ ನೀಡಿದ್ದಾರೆ. ಹೀಗೆ ವಿನಾಯಿತಿ ಪಡೆದ ವಸ್ತುಗಳಲ್ಲಿ ಚಿನ್ನವೂ ಸೇರಿದೆ. ಇದು ಗಮನಿಸಬೇಕಾದ ಒಂದು ಅಂಶ.

ಹಾಗೆಯೇ, ಚಿನ್ನದ ಮೇಲೆ ಟ್ರಂಪ್ ಅವರು ಸುಂಕ ಹಾಕಬಹುದು ಎನ್ನುವ ನಿರೀಕ್ಷೆಯಲ್ಲಿ ಮಾರುಕಟ್ಟೆ ಇತ್ತು. ಹೀಗಾಗಿ, ಚಿನ್ನದ ಮೇಲೆ ಸಾಕಷ್ಟು ಹೂಡಿಕೆಗಳಾಗಿತ್ತು. ಈಗ ಟ್ಯಾರಿಫ್ ಇಲ್ಲವಾಗಿರುವುದರಿಂದ ಹೂಡಿಕೆದಾರರು ಚಿನ್ನವನ್ನು ಮಾರಿ ಪ್ರಾಫಿಟ್ ಬುಕಿಂಗ್ ಮಾಡುತ್ತಿದ್ದಾರೆ ಎಂಬುದು ಅನಾಲಿಸ್ಟ್​​ಗಳು ಮಂಡಿಸುತ್ತಿರುವ ವಾದ.

ಅಕ್ಷಯ ತೃತೀಯಕ್ಕೂ ಇಳಿಯುತ್ತಾ ಚಿನ್ನ?

ಅಮೆರಿಕದ ಮಾರ್ನಿಂಗ್ ಸ್ಟಾರ್ ಎನ್ನುವ ಫೈನಾನ್ಷಿಯಲ್ ಸರ್ವಿಸ್ ಸಂಸ್ಥೆಯ ಮಾರ್ಕೆಟ್ ಸ್ಟ್ರಾಟಿಜಿಸ್ಟ್ ಆಗಿರುವ ಜಾನ್ ಮಿಲ್ಸ್ ಅವರು ಚಿನ್ನದ ಬೆಲೆ ಶೇ. 38ರಷ್ಟು ಇಳಿಕೆ ಆಗಬಹುದು ಎಂದು ಊಹಿಸಿದ್ದಾರೆ.

ಇದನ್ನೂ ಓದಿ: Gold Rate Today Bangalore: ಯದ್ವಾತದ್ವಾ ಇಳಿದ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ದರಪಟ್ಟಿ

ಔನ್ಸ್​​ಗೆ 3,080 ಡಾಲರ್ ಇರುವ ಚಿನ್ನದ ಬೆಲೆ 1,820 ರೂಗೆ ಇಳಿಕೆ ಆಗಬಹುದು ಎಂಬುದು ಅವರು ಮಾಡಿರುವ ಎಣಿಕೆ. ಅಂದರೆ, ಅವರ ಪ್ರಕಾರ ಚಿನ್ನದ ಬೆಲೆ ಶೇ. 38ರಷ್ಟು ಇಳಿಕೆ ಆಗಬಹುದು. ಆದರೆ, ಎಷ್ಟು ದಿನದ ಅವಧಿಯಲ್ಲಿ ಇಷ್ಟು ಇಳಿಕೆ ಆಗುತ್ತದೆ ಗೊತ್ತಿಲ್ಲ. ಭಾರತದಲ್ಲಿ ಅಕ್ಷಯ ತೃತೀಯ ದಿನವು ಏಪ್ರಿಲ್ 30ರಂದಿದೆ. ಅಷ್ಟರವರೆಗೂ ಚಿನ್ನದ ಬೆಲೆ ಇಳಿಕೆ ಆಗುತ್ತದಾ, ಅಥವಾ ಮೇಲೇರುತ್ತದಾ ನೋಡಬೇಕು.

ಜಾಗತಿಕ ಅನಿಶ್ಚಿತತೆ ಇದ್ದ ಕಾರಣಕ್ಕೆ ಚಿನ್ನದ ಬೆಲೆ ಹೆಚ್ಚಿತ್ತು. ಈಗ ರಷ್ಯಾ ಉಕ್ರೇನ್ ವಿಚಾರವಾಗಲೀ, ಇಸ್ರೇಲ್ ವಿದ್ಯಮಾನವಾಗಲೀ ಅಷ್ಟಾಗಿ ಕಾಡುತ್ತಿಲ್ಲ. ಟ್ಯಾರಿಫ್ ಯುದ್ಧ ಬಿಟ್ಟರೆ ಜಾಗತಿಕ ರಾಜಕೀಯ ಸ್ಥಿತಿ ತುಸು ಸ್ಥಿರವಾಗಿದೆ. ಹಿಂದೆ ಅನಗತ್ಯವಾಗಿ ಉಬ್ಬರವಾಗಿದ್ದ ಚಿನ್ನದ ಬೆಲೆ ಮೊದಲಿನ ಸಹಜ ಬೆಲೆಗೆ ಮರಳಲು ಎಡೆ ಮಾಡಿಕೊಡಬಹುದು ಎಂದು ಭಾವಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Fri, 4 April 25

ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ