AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈಗೆ ಹೋಗಿ ಅಧಿಕೃತವಾಗಿ ಎಷ್ಟು ಚಿನ್ನ ತರಲು ಸಾಧ್ಯ? ಅಲ್ಲಿಗೂ ಇಲ್ಲಿಗೂ ಬೆಲೆ ವ್ಯತ್ಯಾಸ ಎಷ್ಟು?

Gold import rules in India: ರನ್ಯಾ ರಾವ್ ಪ್ರಕರಣದ ಬಳಿಕ ಚಿನ್ನ ಕಳ್ಳ ಸಾಗಾಣಿಕೆ ವಿಚಾರ ಚರ್ಚೆಗೆ ಬಂದಿದೆ. ದುಬೈನಿಂದ ಈಕೆ ಹತ್ತು ಕಿಲೋಗೂ ಹೆಚ್ಚು ಚಿನ್ನವನ್ನು ಭಾರತಕ್ಕೆ ಸಾಗಿಸುತ್ತಿದ್ದಾಗ ಏರ್ಪೋರ್ಟ್​​ನಲ್ಲಿ ಸಿಕ್ಕಿಬಿದ್ದಿದ್ದಳು. ದುಬೈನಿಂದ ಯಾವುದೇ ಆಮದು ಸುಂಕ ಇಲ್ಲದೇ ಚಿನ್ನ ತರಬಹುದು. ಆದರೆ, ಮಿತಿ ಇದೆ. ಈ ಮಿತಿ ಮೀರಿದರೆ ಆಮದು ಸುಂಕ ಪಾವತಿಸಬೇಕು. ಹೀಗಾಗಿ, ಕೆಲವರು ಕಳ್ಳಸಾಗಾಣಿಕೆ ಹಾದಿ ಹಿಡಿಯುತ್ತಾರೆ.

ದುಬೈಗೆ ಹೋಗಿ ಅಧಿಕೃತವಾಗಿ ಎಷ್ಟು ಚಿನ್ನ ತರಲು ಸಾಧ್ಯ? ಅಲ್ಲಿಗೂ ಇಲ್ಲಿಗೂ ಬೆಲೆ ವ್ಯತ್ಯಾಸ ಎಷ್ಟು?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 07, 2025 | 6:50 PM

Share

ಬೆಂಗಳೂರು, ಮಾರ್ಚ್ 7: ಕನ್ನಡ ನಟಿ ರನ್ಯಾ ರಾವ್ (Ranya Rao) ದುಬೈನಿಂದ ಚಿನ್ನ ಕಳ್ಳಸಾಗಾಣಿಕೆ (gold smuggling) ಮಾಡುವ ವೇಳೆ ಸಿಕ್ಕಿಬಿದ್ದ ಪ್ರಸಂಗ ಕಳೆದ ಕೆಲ ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಸಾಕಷ್ಟು ಕುತೂಹಲ ಮತ್ತು ಆಸಕ್ತಿ ಹುಟ್ಟುಹಾಕಿದೆ. ಈ ನಟಿಗೆ ದುಬೈನಲ್ಲಿ ಯಾರು ಚಿನ್ನ ಸರಬರಾಜು ಮಾಡುತ್ತಿದ್ದರು, ಇಲ್ಲಿ ಯಾರಿಗೆ ಆ ಚಿನ್ನವನ್ನು ಈಕೆ ಕೊಡುತ್ತಿದ್ದಳು ಎಂಬಿತ್ಯಾದಿ ಪ್ರಶ್ನೆಗಳಿಗೆ ತನಿಖೆ ಮತ್ತು ವಿಚಾರಣೆಯಿಂದ ತಿಳಿಯಬಹುದು. ಈಕೆ ಪೊಲೀಸ್ ಅಧಿಕಾರಿಯ ಮಗಳಾದ್ದರಿಂದ ಆ ಪ್ರಭಾವ ಬಳಸಿ ಕಳ್ಳಸಾಗಾಣಿಕೆ ಮಾಡಲು ಸಾಧ್ಯವಾಯಿತು. ಆದರೆ, ಸಾಮಾನ್ಯ ವ್ಯಕ್ತಿ ಯಾವುದೇ ಕಳ್ಳತನ ಇಲ್ಲದೇ ದುಬೈನಿಂದ ಚಿನ್ನವನ್ನು ತಂದರೆ ಎಷ್ಟು ಲಾಭ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಈ ಲೇಖನ.

ದುಬೈ ಮತ್ತು ಭಾರತದಲ್ಲಿ ಚಿನ್ನದ ಬೆಲೆಗಳಲ್ಲಿ ಇರುವ ವ್ಯತ್ಯಾಸ…

ದುಬೈ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು ಶೇ. 5ರಿಂದ 7ರಷ್ಟು ವ್ಯತ್ಯಾಸ ಬರುತ್ತದೆ. ಇವತ್ತಿನ ಚಿನ್ನದ ಬೆಲೆ ಪರಿಗಣಿಸುವುದಾದರೆ, 22 ಕ್ಯಾರಟ್​​ನ ಒಂದು ಗ್ರಾಮ್ ಆಭರಣ ಚಿನ್ನದ ಬೆಲೆ ಭಾರತದಲ್ಲಿ ಇವತ್ತು 7,990 ರೂ ಇದೆ. ಆದರೆ, ದುಬೈನಲ್ಲಿ 327.75 ಅರಬ್ ದಿನಾರ್ ದರ ಇದೆ. ರುಪಾಯಿಗೆ ಪರಿವರ್ತಿಸಿದರೆ ಅದು ಸುಮಾರು 7,759 ರೂ ಆಗುತ್ತದೆ. ಗ್ರಾಮ್​ಗೆ ಸುಮಾರು 230 ರೂನಷ್ಟು ವ್ಯತ್ಯಾಸ ಬರುತ್ತದೆ.

ಆದರೆ, ಭಾರತದಲ್ಲಿ ನೀವು ಚಿನ್ನ ಖರೀದಿಸಿದರೆ ಶೇ. 3ರಷ್ಟು ಜಿಎಸ್​ಟಿ ಕಟ್ಟಬೇಕು. 7,990 ರೂಗೆ ಶೇ. 3 ಎಂದರೆ 240 ರೂ ಜಿಎಸ್​ಟಿ ಆಗುತ್ತದೆ. ಅಂದರೆ, ಸುಮಾರು ಶೇ. 6ರಷ್ಟು ವ್ಯತ್ಯಾಸ ಬರುತ್ತದೆ. ರನ್ಯಾ ರಾವ್​​ರಂತೆ ಒಬ್ಬ ವ್ಯಕ್ತಿ ಇವತ್ತು 10 ಕಿಲೋ ಚಿನ್ನವನ್ನು ದುಬೈನಿಂದ ಭಾರತಕ್ಕೆ ಕಳ್ಳತನದಲ್ಲಿ ಸಾಗಿಸುತ್ತಾರೆ ಎಂದಿಟ್ಟುಕೊಂಡರೆ ಆ ವ್ಯಕ್ತಿಗೆ ಆಗುವ ಲಾಭ 40-50 ಲಕ್ಷ ರೂ. ಆದರೆ, ಕಳ್ಳಸಾಗಾಣಿಕೆ ವೇಳೆ ಸಿಕ್ಕಿಬಿದ್ದರೆ ಏಳೆಂಟು ಕೋಟಿ ರೂ ಮಾಲು ಕೈತಪ್ಪುವ ರಿಸ್ಕ್ ಇರುತ್ತದೆ.

ಇದನ್ನೂ ಓದಿ
Image
Gold Rates 07 March: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ
Image
ಗೋಲ್ಡ್ ಲೋನ್ ಮೇಲೆ ಆರ್​ಬಿಐ ಕಣ್ಣು?
Image
ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಪ್ರಾಶಸ್ತ್ಯ: ಸಿಇಎ
Image
ವಿಶ್ವದ ಶೇ. 11ರಷ್ಟು ಚಿನ್ನ ಭಾರತೀಯ ಹೆಂಗಸರ ಬಳಿ

ಇದನ್ನೂ ಓದಿ: ಚಿನ್ನ ಒತ್ತೆ ಇಟ್ಟು ಸಾಲ ಪಡೆಯುವುದು ಕಷ್ಟವಾಗುತ್ತಾ? ನಿಯಮ ಬಿಗಿಗೊಳಿಸಲು ಬ್ಯಾಂಕುಗಳಿಗೆ ಆರ್​ಬಿಐ ಸೂಚಿಸುವ ಸಾಧ್ಯತೆ

ದುಬೈನಿಂದ ಇಷ್ಟಬಂದಷ್ಟು ಚಿನ್ನ ತರಲು ಆಗಲ್ಲ…

ನೀವು ವಿದೇಶಗಳಿಂದ ಎಷ್ಟು ಬೇಕಾದರೂ ಚಿನ್ನ ತರಬಹುದು. ಆದರೆ, ಆಮದು ಸುಂಕ ತೆರಬೇಕು. ನೀವು ಪದೇ ಪದೇ ಹೋಗಿ ತಂದರೆ ಆಮದು ಸುಂಕ ತೀರಾ ಹೆಚ್ಚಿರುತ್ತದೆ. ಆಮದು ಸುಂಕ ಇಲ್ಲದೇ ತರಬೇಕೆಂದರೆ ನಿರ್ಬಂಧಗಳಿವೆ. ಒಬ್ಬ ಪುರುಷ ಗರಿಷ್ಠ 20 ಗ್ರಾಮ್ ಚಿನ್ನ ತರಬಹುದು. ಆದರೆ, ಇದರ ಮೌಲ್ಯ 50,000 ರೂ ಮೀರಬಾರದು.

ಮಹಿಳೆಯಾದರೆ ಒಂದು ಲಕ್ಷ ರೂ ಮಿತಿಯೊಳಗೆ 40 ಗ್ರಾಮ್​ವರೆಗೂ ಚಿನ್ನಾಭರಣವನ್ನು ದುಬೈನಿಂದ ಭಾರತಕ್ಕೆ ತರಲು ಸಾಧ್ಯ. ಗಂಡ ಹೆಂಡತಿ ಜೋಡಿ ದುಬೈಗೆ ಹೋಗಿ ಒಂದೂವರೆ ಲಕ್ಷ ರೂವರೆಗೆ ಚಿನ್ನವನ್ನು ಖರೀದಿಸಿ ಭಾರತಕ್ಕೆ ತಂದರೆ ಏಳೆಂಟು ಸಾವಿರ ರೂ ಮಾತ್ರವೆ ಉಳಿಸಲು ಸಾಧ್ಯ.

ಹೆಚ್ಚಿನ ಚಿನ್ನಕ್ಕೆ ಆಮದು ಸುಂಕ ಎಷ್ಟು?

ಶುದ್ಧ ಚಿನ್ನ ಹಾಗೂ ಆಭರಣ ಚಿನ್ನಗಳ ಮೇಲೆ ಆಮದು ಸುಂಕದಲ್ಲಿ ವ್ಯತ್ಯಾಸ ಇರುತ್ತದೆ. ಶುದ್ಧ ಚಿನ್ನವಾದ ಗೋಲ್ಡ್ ಬಾರ್, ಕಾಯಿನ್​​ಗಳಾದರೆ 10 ಗ್ರಾಮ್​​​ಗೆ 300 ರೂ ಆಮದು ಸುಂಕ ಹಾಕಲಾಗುತ್ತದೆ. ಶೇ. 3ರಷ್ಟು ಎಜುಕೇಶನ್ ಸೆಸ್ ಕೂಡ ಅನ್ವಯ ಆಗುತ್ತದೆ.

ಆಭರಣವಾದರೆ 10 ಗ್ರಾಮ್​​​ಗೆ 750 ರೂ ಕಸ್ಟಂ ಡ್ಯೂಟಿ ಅನ್ವಯ ಆಗುತ್ತದೆ. ಜೊತೆಗೆ ಶೇ. 3ರಷ್ಟು ಎಜುಕೇಶನ್ ಸೆಸ್ ವಿಧಿಸಲಾಗುತ್ತದೆ.

ಇದನ್ನೂ ಓದಿ: ಹೂಡಿಕೆದಾರರಿಗೆ ‘ಚಿನ್ನ’ದ ಮೊಟ್ಟೆಯ ಗುಟ್ಟು ಬಿಚ್ಚಿಟ್ಟ ಮುಖ್ಯ ಆರ್ಥಿಕ ಸಲಹೆಗಾರ ಅನಂತನಾಗೇಶ್ವರನ್

ನೀವು ಇವತ್ತು ದುಬೈನಲ್ಲಿ ಮಿತಿಗಿಂತ ಹೆಚ್ಚುವರಿಯಾಗಿ 10 ಗ್ರಾಮ್ ಆಭರಣವನ್ನು ಖರೀದಿಸಿದರೆ 77,590 ರೂ ಆಗುತ್ತದೆ. ಅದಕ್ಕೆ ಶೇ. 3ರಷ್ಟು ಎಜುಕೇಶನ್ ಸೆಸ್ ಎಂದರೆ 2,327 ರೂ ಆಗುತ್ತದೆ. 750 ರೂ ಆಮದು ಸುಂಕ ಸೇರಿಸಿದರೆ 3,078 ರೂ ಆಗುತ್ತದೆ. ಇದರಿಂದ ಭಾರತ ಮತ್ತು ದುಬೈ ಮಧ್ಯೆ ಚಿನ್ನದ ಬೆಲೆಯಲ್ಲಿ ಹೆಚ್ಚೇನೂ ವ್ಯತ್ಯಾಸ ಬರದು.

ಚಿನ್ನ ತರಲು ಕನಿಷ್ಠ ಆರು ತಿಂಗಳ ಅಂತರ ಇರಬೇಕು

ನೀವು ದುಬೈನಿಂದ ಚಿನ್ನ ತಂದು ಮತ್ತೆ ಆರು ತಿಂಗಳೊಳಗೆ ಹೋಗಿ ಚಿನ್ನ ತಂದರೆ ಆಗ ಬರೋಬ್ಬರಿ ಶೇ. 36.05ರಷ್ಟು ಆಮದು ಸುಂಕ ಹಾಕಲಾಗುತ್ತದೆ. ಹೀಗಾಗಿ, ನೀವು ದುಬೈಗೆ ಹೋಗುತ್ತಿರುವಿರಾದರೆ ಮಿತಿಯೊಳಗೆ ಚಿನ್ನ ಖರೀದಿಸಿ ತಂದರೆ ಮಾತ್ರವೇ ಲಾಭ. ಚಿನ್ನ ತರಲೆಂದೇ ದುಬೈಗೆ ಹೋಗುತ್ತೀರೆಂದರೆ ಅದು ನಷ್ಟದ ಸಂಗತಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಅನಿಲ್ ಚೌಹಾಣ್
ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಅನಿಲ್ ಚೌಹಾಣ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು