AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂಡಿಕೆದಾರರಿಗೆ ‘ಚಿನ್ನ’ದ ಮೊಟ್ಟೆಯ ಗುಟ್ಟು ಬಿಚ್ಚಿಟ್ಟ ಮುಖ್ಯ ಆರ್ಥಿಕ ಸಲಹೆಗಾರ ಅನಂತನಾಗೇಶ್ವರನ್

CEA V Anantha Nageswaran on gold's relevance: ಭಾರತದಲ್ಲಿ ಚಿನ್ನಕ್ಕೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವ ಇದೆ. ಅದರ ನಡುವೆಯೂ ಹೂಡಿಕೆಯಾಗಿ ಚಿನ್ನವನ್ನು ಬಳಸಲಾಗುತ್ತಿದೆ. ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ಅವರು ಹೂಡಿಕೆದಾರರ ಪೋರ್ಟ್​ಫೋಲಿಯೋದಲ್ಲಿ ಚಿನ್ನ ಮಹತ್ವದ ಸ್ಥಾನ ಪಡೆದಿದೆ. ಮುಂಬರುವ ವರ್ಷಗಳಲ್ಲಿ ಹೂಡಿಕೆಯಾಗಿ ಚಿನ್ನದ ಮಹತ್ವ ಇನ್ನಷ್ಟು ಏರಲಿದೆ ಎಂದು ಹೇಳಿದ್ದಾರೆ.

ಹೂಡಿಕೆದಾರರಿಗೆ ‘ಚಿನ್ನ’ದ ಮೊಟ್ಟೆಯ ಗುಟ್ಟು ಬಿಚ್ಚಿಟ್ಟ ಮುಖ್ಯ ಆರ್ಥಿಕ ಸಲಹೆಗಾರ ಅನಂತನಾಗೇಶ್ವರನ್
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 03, 2025 | 6:23 PM

Share

ನವದೆಹಲಿ, ಮಾರ್ಚ್ 3: ಚಿನ್ನ ಈ ಭೂಮಿಯಲ್ಲಿ ಸೀಮಿತವಾಗಿ ಸಿಗುವ ಸಂಪತ್ತಾಗಿದ್ದರಿಂದ ಅದಕ್ಕೆ ಬೇಡಿಕೆ ಯಾವತ್ತೂ ಕಡಿಮೆ ಆಗುವುದಿಲ್ಲ ಎನ್ನುವುದು ಖಾತ್ರಿ. ಭಾರತ, ಚೀನಾದಂತಹ ದೇಶಗಳಲ್ಲಿ ಚಿನ್ನಕ್ಕೆ ಧಾರ್ಮಿಕ, ಸಾಂಸ್ಕೃತಿಕ ಆಯಾಯಗಳೂ ಇವೆ. ಈಗ ಹೂಡಿಕೆಗೂ ಚಿನ್ನದ ಬಳಕೆ ಹೆಚ್ಚುತ್ತಿದೆ. ಈ ವರ್ಷ ಷೇರು ಮಾರುಕಟ್ಟೆ ತೀವ್ರವಾಗಿ ಅಲುಗಾಡುತ್ತಿರುವಂತೆಯೇ, ಚಿನ್ನದ ಬೆಲೆ ಮಾತ್ರ ಕುಸಿಯಲಿಲ್ಲ. ಮಧ್ಯ ಮಧ್ಯದಲ್ಲಿ ತಾತ್ಕಾಲಿಕವಾಗಿ ಚಿನ್ನದ ಬೆಲೆಗೆ ಹಿನ್ನಡೆಯಾಯಿತಾದರೂ ಒಟ್ಟಾರೆ ಗಣನೀಯ ಏರಿಕೆ ಕಂಡಿದೆ. ಇದೇ ವೇಳೆ, ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ವಿ ಅನಂತನಾಗೇಶ್ವರನ್ ಅವರು ಹೂಡಿಕೆದಾರರ ಪೋರ್ಟ್​ಫೋಲಿಯೋದಲ್ಲಿ ಚಿನ್ನ ಪ್ರಧಾನ ಸ್ಥಾನ ಹೊಂದಿರುವುದು ಉತ್ತಮ ಎನ್ನುವ ಸಲಹೆ ನೀಡಿದ್ದಾರೆ.

ಇಂದು ಸೋಮವಾರ ಐಜಿಪಿಸಿ ಐಐಎಂಎ ವಾರ್ಷಿಕ ಚಿನ್ನ ಮಾರುಕಟ್ಟೆಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅನಂತ ನಾಗೇಶ್ವರನ್, ಮುಂಬರುವ ವರ್ಷಗಳಲ್ಲಿ ಹೂಡಿಕೆಯಾಗಿ ಚಿನ್ನಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಮ್ಮೆ ಹೊಸ ಟ್ಯಾಕ್ಸ್ ರಿಜೈಮ್ ಬಳಸಿದರೆ ಮತ್ತೆ ಹಳೆಯದನ್ನು ಬಳಸಬಾರದಾ? ಇಲ್ಲಿದೆ ಸತ್ಯಾಂಶ

ಕೇವಲ ಒಂದು ಮೌಲ್ಯಯುತ ವಸ್ತುವಾಗಿ ಮಾತ್ರವಲ್ಲ, ಅಥವಾ ಸಾಂಸ್ಕೃತಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಧರಿಸುವ ಆಭರಣವಾಗಿ ಮಾತ್ರವಲ್ಲ, ಹೂಡಿಕೆದಾರರ ಪೋರ್ಟ್​ಫೋಲಿಯೋ ವಿಸ್ತಾರದ ಭಾಗವಾಗಿಯೂ ಚಿನ್ನಕ್ಕೆ ಆದ್ಯತೆ ಇರುತ್ತದೆ. ಅನಂತ ನಾಗೇಶ್ವರನ್ ಅವರ ಪ್ರಕಾರ, ಈಗಿರುವ ಅಂತಾರಾಷ್ಟ್ರೀಯ ಹಣಕಾಸು ಅವ್ಯವಸ್ಥೆಯ ಪರಿಸ್ಥಿತಿಯಿಂದ ಸರಿಯಾದ ವ್ಯವಸ್ಥೆಗೆ ಬುರವವರೆಗೂ ಹೂಡಿಕೆದಾರರು ತಮ್ಮ ಪೋರ್ಟ್​ಫೋಲಿಯೋದಲ್ಲಿ ಚಿನ್ನವನ್ನು ಸೇರಿಸುವುದು ಬಹಳ ಮುಖ್ಯ.

ಭಾರತದಲ್ಲಿ ಚಿನ್ನಕ್ಕೆ ಸಾಂಸ್ಕೃತಿಕ, ಧಾರ್ಮಿಕ ಮಹತ್ವ ಇದ್ದಾಗ್ಯೂ ಈ ಆಸ್ತಿಯನ್ನು ಲಾಭದಾಯಕವಾಗಿ ವಿನಿಯೋಗಿಸಲು ಸಾಧ್ಯವಾಗುವಂತೆ ಮಾರ್ಗಗಳನ್ನು ಹುಡುಕುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸೂಕ್ತ ರೂಪಿಸುವ ಸವಾಲು ಇದೆ. ಹಿಂದಿನ ಚಿನ್ನ ನಗದೀಕರಣದ ಪ್ರಯತ್ನಗಳನ್ನು ಮರು ಅವಲೋಕಿಸಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರರು ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ಹೂಡಿಕೆ ಮಾಡುವ ಮುನ್ನ ಆ್ಯಕ್ಟಿವ್ ಮತ್ತು ಪಾಸಿವ್ ಫಂಡ್​ಗಳೇನು, ಅವುಗಳ ವೆಚ್ಚವೆಷ್ಟು ಈ ವ್ಯತ್ಯಾಸ ತಿಳಿದಿರಿ…

ಸರ್ಕಾರ ಚಿನ್ನದ ಮೇಲೆ ಜನರ ಹೂಡಿಕೆಯನ್ನು ಉತ್ತೇಜಿಸಲು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಇತ್ಯಾದಿ ಯೋಜನೆಗಳನ್ನು ರೂಪಿಸಿದ್ದಿದೆ.

ಎರಡು ದಶಕದಲ್ಲಿ ಚಿನ್ನದ ಬೆಲೆ 10 ಪಟ್ಟು ಹೆಚ್ಚಳ

ಚಿನ್ನದ ಮೌಲ್ಯ ಯಾವತ್ತೂ ಕುಂದದು ಎನ್ನುವುದಕ್ಕೆ ಎರಡು ದಶಕದ ಹಿಂದಿನ ನಿದರ್ಶನವೇ ಇದೆ. ಕಳೆದ ಎರಡು ದಶಕದಲ್ಲಿ ಚಿನ್ನದ ಬೆಲೆ ಹತ್ತು ಪಟ್ಟು ಹೆಚ್ಚಾಗಿದೆ. 2002ರಲ್ಲಿ ಒಂದು ಔನ್ಸ್ ಚಿನ್ನಕ್ಕೆ 250ರಿಂದ 290 ಡಾಲರ್ ಬೆಲೆ ಇತ್ತು. ಈಗ ಅದು 2,860 ಡಾಲರ್ ಆಗಿದೆ. ಕಳೆದ ಮೂರು ತಿಂಗಳಲ್ಲೇ ಶೇ. 8ರಷ್ಟು ಬೆಲೆ ಏರಿಕೆ ಆಗಿದೆ.’

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ