ಒಮ್ಮೆ ಹೊಸ ಟ್ಯಾಕ್ಸ್ ರಿಜೈಮ್ ಬಳಸಿದರೆ ಮತ್ತೆ ಹಳೆಯದನ್ನು ಬಳಸಬಾರದಾ? ಇಲ್ಲಿದೆ ಸತ್ಯಾಂಶ
Old tax regime and New tax regime: ಒಮ್ಮೆ ಹೊಸ ಟ್ಯಾಕ್ಸ್ ರಿಜೈಮ್ಗೆ ಬದಲಾದರೆ ಮತ್ತೆ ಹಳೆಯ ಟ್ಯಾಕ್ಸ್ ರಿಜೈಮ್ಗೆ ಬದಲಾಗಲು ಸಾಧ್ಯವಾಗುವುದಿಲ್ಲವಾ? ಇದು ಅರ್ಧಸತ್ಯ ಮಾತ್ರ. ಬಿಸಿನೆಸ್ ಅಥವಾ ವೃತ್ತಿಪರ ಕೆಲಸಗಳಿಂದ ಆದಾಯ ಗಳಿಸುತ್ತಿರುವವರಿಗೆ ಈ ನಿರ್ಬಂಧ ಇರುತ್ತದೆ. ಆದರೆ, ಸಂಬಳದ ಆದಾಯ ಪಡೆಯುತ್ತಿರುವವರು ಪ್ರತೀ ವರ್ಷ ಟ್ಯಾಕ್ಸ್ ರಿಜೈಮ್ ಬದಲಾಯಿಸಿಕೊಳ್ಳಲು ಅವಕಾಶ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

ನವದೆಹಲಿ, ಮಾರ್ಚ್ 3: ಆದಾಯ ತೆರಿಗೆ ಪಾವತಿದಾರರ (Income tax payers) ಎದುರು ಸದ್ಯ ಎರಡು ಆಯ್ಕೆಗಳಿವೆ. ಹೊಸ ಟ್ಯಾಕ್ಸ್ ರಿಜೈಮ್ ಮತ್ತು ಹಳೆಯ ಟ್ಯಾಕ್ಸ್ ರಿಜೈಮ್ ಆಯ್ಕೆಗಳಿವೆ. 2020ರ ಬಜೆಟ್ನಲ್ಲಿ ಹೊಸ ಟ್ಯಾಕ್ಸ್ ರಿಜೈಮ್ ಪರಿಚಯಿಸಲಾಗಿತ್ತು. ಆದರೆ, ಹಳೆಯ ರಿಜೈಮ್ ಅನ್ನೂ ಉಳಿಸಿಕೊಂಡು ಬರಲಾಗಿದೆ. ಆದಾಯ ತೆರಿಗೆ ಪಾವತಿದಾರರು ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ, 2023ರಲ್ಲಿ ಹೊಸ ಟ್ಯಾಕ್ಸ್ ರಿಜೈಮ್ ಡೀಫಾಲ್ಟ್ ಆಗಿ ಮಾಡಲಾಯಿತು. ಅಲ್ಲಿಂದ ಕೆಲವಿಷ್ಟು ಜನರಲ್ಲಿ ಗೊಂದಲ ಇದೆ. ಒಮ್ಮೆ ಹೊಸ ಟ್ಯಾಕ್ಸ್ ರಿಜೈಮ್ ಆಯ್ಕೆ ಮಾಡಿಕೊಂಡರೆ ಮತ್ತೆ ಹಳೆಯ ತೆರಿಗೆ ವಿಧಾನಕ್ಕೆ ಮರಳಲು ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದು ಅರ್ಧ ಸತ್ಯ ಮಾತ್ರ.
ಬ್ಯುಸಿನೆಸ್ ಆದಾಯ ಇರುವವರಿಗೆ ಆಯ್ಕೆ ನಿರ್ಬಂಧ
ಬಿಸಿನೆಸ್ನಿಂದ ವರಮಾನ ಅಥವಾ ವೃತ್ತಿಪರ ಆದಾಯ ಇರುವ ತೆರಿಗೆ ಪಾವತಿದಾರರಿಗೆ ನಿರ್ಬಂಧಗಳಿವೆ. ಇವರು ಎರಡು ಬಾರಿ ಮಾತ್ರವೇ ಟ್ಯಾಕ್ಸ್ ರಿಜೈಮ್ ಬದಲಿಸಿಕೊಳ್ಳಬಹುದು. ಒಮ್ಮೆ ಇವರು ಹೊಸ ಟ್ಯಾಕ್ಸ್ ರಿಜೈಮ್ನಿಂದ ಹಳೆಯ ಟ್ಯಾಕ್ಸ್ ರಿಜೈಮ್ಗೆ ಬದಲಾದರೆ, ಮತ್ತೆ ಹೊಸ ತೆರಿಗೆ ವಿಧಾನಕ್ಕೆ ಮರಳಬಹುದು. ಆದರೆ, ಮತ್ತೊಮ್ಮೆ ಅವರು ಹಳೆಯ ಟ್ಯಾಕ್ಸ್ ರಿಜೈಮ್ಗೆ ಮರಳಲು ಆಗುವುದಿಲ್ಲ.
ಇದನ್ನೂ ಓದಿ: ನಿಶ್ಚಿಂತೆಯ ನಿವೃತ್ತ ಜೀವನಕ್ಕೆ ಎಲ್ಐಸಿಯಿಂದ ಹೊಸ ಸ್ಮಾರ್ಟ್ ಪೆನ್ಷನ್ ಪ್ಲಾನ್
ಟ್ಯಾಕ್ಸ್ ರಿಜೈಮ್ ಬದಲಾವಣೆ: ಸಂಬಳದಾರರಿಗೆ ಪೂರ್ಣ ಸ್ವಾತಂತ್ರ್ಯ
ಸಂಬಳದ ಆದಾಯ ಇರುವ ತೆರಿಗೆ ಪಾವತಿದಾರರಿಗೆ ಪೂರ್ಣ ಸ್ವಾತಂತ್ರ್ಯ ಇದೆ. ಇವರು ಪ್ರತೀ ವರ್ಷ ಐಟಿ ರಿಟರ್ನ್ ಸಲ್ಲಿಸುವಾಗ ಯಾವ ಟ್ಯಾಕ್ಸ್ ರಿಜೈಮ್ ಅನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಈ ವರ್ಷ ಹಳೆಯ ಟ್ಯಾಕ್ಸ್ ರಿಜೈಮ್ನಲ್ಲಿ ಫೈಲಿಂಗ್ ಮಾಡಿದ್ದರೆ, ಮುಂದಿನ ವರ್ಷ ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಐಟಿಆರ್ ಸಲ್ಲಿಸಬಹುದು. ಅದರ ನಂತರದ ವರ್ಷದಲ್ಲಿ ಹಳೆಯ ತೆರಿಗೆ ವಿಧಾನಕ್ಕೆ ಮರಳಬಹುದು. ಹೀಗೆ, ಟ್ಯಾಕ್ಸ್ ರಿಜೈಮ್ ಆಯ್ಕೆಯಲ್ಲಿ ನಿರ್ಬಂಧ ಇರುವುದಿಲ್ಲ ಸಂಬಳದಾರರಿಗೆ.
ಆದರೆ, ಐಟಿಆರ್ ಸಲ್ಲಿಸಲು ನಿಗದಿ ಮಾಡಿರುವ ವಾಯಿದೆಯೊಳಗೆ ಈ ಆಯ್ಕೆ ಮಾಡಬೇಕು. ಗಡುವು ಮುಗಿದ ಬಳಿಕ ನಿಮಗೆ ಆಯ್ಕೆ ಸ್ವಾತಂತ್ರ್ಯ ಇರುವುದಿಲ್ಲ. ಹೊಸ ಟ್ಯಾಕ್ಸ್ ರಿಜೈಮ್ ನಿಮಗೆ ಡೀಫಾಲ್ಟ್ ರಿಜೈಮ್ ಆಗಿರುತ್ತದೆ.
ಒಂದೇ ವರ್ಷದಲ್ಲಿ ಟ್ಯಾಕ್ಸ್ ರಿಜೈಮ್ ಬದಲಿಸಲು ಸಾಧ್ಯ
ನೀವು ಸಂಬಳದಾರರಾಗಿದ್ದರೆ, ಪ್ರತೀ ವರ್ಷ ಟ್ಯಾಕ್ಸ್ ರಿಜೈಮ್ ಬದಲಿಸುವ ಅವಕಾಶ ಇರುತ್ತದೆ. ಅದು ಮಾತ್ರವಲ್ಲ, ಒಂದೇ ವರ್ಷದಲ್ಲಿ ಟ್ಯಾಕ್ಸ್ ರಿಜೈಮ್ ಬದಲಿಸಿಕೊಳ್ಳಬಹುದು. ನೀವು ಗಡುವಿನ ಒಳಗೆ ಐಟಿಆರ್ ಸಲ್ಲಿಸಿದ್ದರೆ ಈ ಅವಕಾಶ ಇರುತ್ತದೆ.
ಇದನ್ನೂ ಓದಿ: ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಏನೇನೆಲ್ಲಾ ತೆರಿಗೆ ಉಳಿತಾಯದ ಅವಕಾಶಗಳಿವೆ? ಇಲ್ಲಿದೆ ಡೀಟೇಲ್ಸ್
ಉದಾಹರಣೆಗೆ, ನೀವು ವಾಯಿದೆಯೊಳಗೆ ಹೊಸ ಟ್ಯಾಕ್ಸ್ ರಿಜೈಮ್ನ್ಲಲಿ ಐಟಿಆರ್ ಸಲ್ಲಿಸಿರುತ್ತೀರಿ. ನಂತರ ನಿಮಗೆ ಹಳೆಯ ಟ್ಯಾಕ್ಸ್ ರಿಜೈಮ್ ಸೂಕ್ತ ಎಂದು ತೋರಿದಲ್ಲಿ, ಆಗ ನೀವು ರಿವೈಸ್ಡ್ ರಿಟರ್ನ್ ಫೈಲ್ ಮಾಡುವಾಗ ಟ್ಯಾಕ್ಸ್ ರಿಜೈಮ್ ಬದಲಾಯಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ