AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax Savings Options: ಹೊಸ ಟ್ಯಾಕ್ಸ್ ರಿಜೈಮ್​ನಲ್ಲಿ ಏನೇನೆಲ್ಲಾ ತೆರಿಗೆ ಉಳಿತಾಯದ ಅವಕಾಶಗಳಿವೆ? ಇಲ್ಲಿದೆ ಡೀಟೇಲ್ಸ್

Deductions in New Tax Regime 2025: ಓಲ್ಡ್ ಟ್ಯಾಕ್ಸ್ ರಿಜೈಮ್​ಗೆ ಹೋಲಿಸಿದರೆ ಹೊಸ ಟ್ಯಾಕ್ಸ್ ರಿಜೈಮ್​ನಲ್ಲಿ ಹೆಚ್ಚಿನ ಟ್ಯಾಕ್ಸ್ ಡಿಡಕ್ಷನ್ ಇಲ್ಲ. ಆದರೂ ಟ್ಯಾಕ್ಸ್ ರಿಬೇಟ್ ಇರುವುದರಿಂದ ಹೊಸ ಟ್ಯಾಕ್ಸ್ ರಿಜೈಮ್ ಆಕರ್ಷಕ ಎನಿಸಿದೆ. ಇದರ ಜೊತೆಗೆ ಒಂದಷ್ಟು ಟ್ಯಾಕ್ಸ್ ಡಿಡಕ್ಷನ್ ಅವಕಾಶಗಳೂ ಇವೆ. ಇದರಲ್ಲಿ ಪ್ರಮುಖವಾದುದು ಸಂಬಳದಾರರಿಗೆ ಸಿಗುವ 75,000 ರೂಗಳ ಸ್ಟ್ಯಾಂಡರ್ಡ್ ಡಿಡಕ್ಷನ್. ಜೊತೆಗೆ ಎನ್​ಪಿಎಸ್, ಇಪಿಎಫ್ ಕೊಡುಗೆಗಳಿಗೂ ಡಿಡಕ್ಷನ್ ಸಿಗುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ...

Tax Savings Options: ಹೊಸ ಟ್ಯಾಕ್ಸ್ ರಿಜೈಮ್​ನಲ್ಲಿ ಏನೇನೆಲ್ಲಾ ತೆರಿಗೆ ಉಳಿತಾಯದ ಅವಕಾಶಗಳಿವೆ? ಇಲ್ಲಿದೆ ಡೀಟೇಲ್ಸ್
ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 11, 2025 | 12:16 PM

Share

ಈ ಬಾರಿಯ ಬಜೆಟ್​ನಲ್ಲಿ ಹೊಸ ಟ್ಯಾಕ್ಸ್ ರಿಜೈಮ್ ಅನ್ನು ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. ಹಳೆಯ ಟ್ಯಾಕ್ಸ್ ರಿಜೈಮ್​ಗಿಂತ ಹೊಸ ಟ್ಯಾಕ್ಸ್ ರಿಜೈಮ್ ಹೆಚ್ಚು ತೆರಿಗೆ ಉಳಿತಾಯ ನೀಡುವ ಮಟ್ಟಕ್ಕೆ ವಿನಾಯಿತಿ, ರಿಯಾಯಿತಿಗಳನ್ನು ನೀಡಲಾಗಿದೆ. ವರ್ಷಕ್ಕೆ 12 ಲಕ್ಷ ರೂ ಆದಾಯ ಇರುವವರಿಗೆ ತೆರಿಗೆ ಬಾಧ್ಯತೆಯೇ ಇಲ್ಲದಂತೆ ಮಾಡಲಾಗಿದೆ. ಈ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಇದಕ್ಕೂ ಮೇಲ್ಪಟ್ಟ ಆದಾಯ ಇದ್ದರೆ ಟೆಕ್ನಿಕಲ್ ಆಗಿ ಟ್ಯಾಕ್ಸ್ ಸ್ಲ್ಯಾಬ್ ದರಗಳು ಅನ್ವಯ ಆಗುತ್ತವೆ. ಆದರೆ, ಕೆಲ ಟ್ಯಾಕ್ಸ್ ಡಿಡಕ್ಷನ್​ಗಳು ಹೊಸ ಟ್ಯಾಕ್ಸ್ ರಿಜೈಮ್​ನಲ್ಲೂ ಇದ್ದು, ಅದನ್ನು ಬಳಸಿದರೆ ಹೆಚ್ಚಿನ ಆದಾಯಕ್ಕೂ ತೆರಿಗೆ ವಿನಾಯಿತಿ (tax exemptions) ಪಡೆಯಲು ಸಾಧ್ಯ.

ಓಲ್ಡ್ ಟ್ಯಾಕ್ಸ್ ರಿಜೈಮ್​ನಲ್ಲಿ ಇರುವಷ್ಟು ಅಲ್ಲವಾದರೂ ಹೊಸ ಟ್ಯಾಕ್ಸ್ ರಿಜೈಮ್​ನಲ್ಲೂ ಕೆಲ ಪ್ರಮುಖ ಟ್ಯಾಕ್ಸ್ ಡಿಡಕ್ಷನ್ ಅವಕಾಶಗಳಿವೆ. ಸಂಬಳದಾರರಿಗೆ ತುಸು ಹೆಚ್ಚೇ ಡಿಡಕ್ಷನ್​ಗಳಿವೆ. ಸಂಬಳ ಆದಾಯದವರಿಗೆ 75,000 ರೂಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಇರುತ್ತದೆ. ಅಂದರೆ, ನಿಮ್ಮ ಟ್ಯಾಕ್ಸಬಲ್ ಇನ್ಕಮ್ ಇಷ್ಟು ಮೊತ್ತದಷ್ಟು ಕಡಿಮೆ ಆಗುತ್ತದೆ. ಎನ್​ಪಿಎಸ್ ಅಥವಾ ಇಪಿಎಫ್ ಇದ್ದರೆ ಅದರಿಂದಲೂ ಒಂದಷ್ಟು ಡಿಡಕ್ಷನ್ ಪಡೆಯಬಹುದು. ಆಫೀಸ್ ವತಿಯಿಂದ ಅಧಿಕೃತ ಪ್ರವಾಸಕ್ಕೆ ಕಳುಹಿಸಿದಾಗ ಅದರ ಕಂಪನಿ ವೆಚ್ಚದ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

ನಿಮ್ಮಲ್ಲಿ ಬಾಡಿಗೆಯಿಂದ ಆದಾಯ ಬರುತ್ತಿದ್ದರೆ, ಆಗ ಗೃಹ ಸಾಲಕ್ಕೆ ನೀವು ಕಟ್ಟುವ ಬಡ್ಡಿಯ ಹಣವನ್ನು ಬಳಸಿ ಟ್ಯಾಕ್ಸ್ ಸರಿದೂಗಿಸಬಹುದು, ಅಥವಾ ಕಡಿಮೆ ಮಾಡಬಹುದು. ಲೀವ್ ಎನ್​ಕ್ಯಾಷ್ಮೆಂಟ್, ಗ್ರಾಚುಟಿ ಹಣಕ್ಕೆ ಡಿಡಕ್ಷನ್ ಪಡೆಯಬಹುದು.

ಇದನ್ನೂ ಓದಿ: ನಿಮ್ಮ ವಾರ್ಷಿಕ ಆದಾಯ 12 ಲಕ್ಷ ರೂಗಿಂತ ತುಸು ಹೆಚ್ಚಿದ್ದರೆ ಏನಾಗುತ್ತೆ? ಮಾರ್ಜಿನಲ್ ರಿಲೀಫ್ ಲೆಕ್ಕಾಚಾರ

ಹೊಸ ಟ್ಯಾಕ್ಸ್ ರಿಜೈಮ್​ನಲ್ಲಿರುವ ಕೆಲ ಡಿಡಕ್ಷನ್ ಆಯ್ಕೆಗಳು

  • ಸಂಬಳದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂ
  • ಪಿಂಚಣಿದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 25,000 ರೂ
  • ಕೆಲಸ ಮಾಡುವ ಕಂಪನಿ ವತಿಯಿಂದ ನ್ಯಾಷನಲ್ ಪೆನ್ಷನ್ ಸ್ಕೀಮ್​ಗೆ ಸಂದಾಯ ಮಾಡುವ ಹಣಕ್ಕೆ ಡಿಡಕ್ಷನ್ ಇರುತ್ತದೆ. ಉದ್ಯೋಗಿಯ ಮೂಲವೇತನದ ಶೇ. 14ರಷ್ಟರವರೆಗಿನ ಮೊತ್ತಕ್ಕೆ ಡಿಡಕ್ಷನ್ ಸಿಗುತ್ತದೆ.
  • ಉದ್ಯೋಗಿಯ ಇಪಿಎಫ್ ಖಾತೆಗೆ ಕಂಪನಿ ವತಿಯಿಂದ ಹಾಕುವ ಹಣಕ್ಕೆ ಡಿಡಕ್ಷನ್ ಪಡೆಯಬಹುದು. (ಮೂಲವೇತನದ ಶೇ. 12ರಷ್ಟು ಹಣ)
  • ಗೃಹ ಸಾಲಕ್ಕೆ ಕಟ್ಟುವ ಬಡ್ಡಿಯ ಹಣವನ್ನು ಬಾಡಿಗೆ ಆದಾಯಕ್ಕೆ ಸರಿದೂಗಿಸಬಹುದು.
  • ಆಸ್ತಿಗೆ ಕಟ್ಟುವ ತೆರಿಗೆಯ ಹಣಕ್ಕೂ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ.
  • ಅಗ್ನಿವೀರ್ ಕಾರ್ಪಸ್ ಫಂಡ್​ಗೆ ನೀಡುವ ಕೊಡುಗೆ. ಇದು ಅಗ್ನಿವೀರ್ ಹುದ್ದೆಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಸಿಗುವ ಟ್ಯಾಕ್ಸ್ ಡಿಡಕ್ಷನ್.
  • ಉದ್ಯೋಗಿಯ ಅಧಿಕೃತ ಪ್ರವಾಸಕ್ಕೆ ಕಂಪನಿ ವತಿಯಿಂದ ಟಿಕೆಟ್ ಖರೀದಿಸಿದರೆ, ಮತ್ತು ಪ್ರವಾಸದ ವೇಳೆ ದಿನನಿತ್ಯದ ವೆಚ್ಚವನ್ನು ಮರುಪಾವತಿಸಿದರೆ ಆ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ.
  • ನಿವೃತ್ತರಾದಾಗ ಸಿಗುವ ಲೀವ್ ಎನ್​ಕ್ಯಾಶ್ಮೆಂಟ್ (25 ಲಕ್ಷ ರೂವರೆಗೆ ಎಕ್ಸೆಂಪ್ಷನ್)
  • ಗ್ರಾಚುಟಿ ಹಣಕ್ಕೆ (ಗರಿಷ್ಠ 20 ಲಕ್ಷ ರೂಗೆ ತೆರಿಗೆ ವಿನಾಯಿತಿ)
  • ವಾಲಂಟರಿ ರಿಟೈರ್ಮೆಂಟ್ ಪಡೆದಾಗ (5 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ