AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Smart Pension Plan: ನಿಶ್ಚಿಂತೆಯ ನಿವೃತ್ತ ಜೀವನಕ್ಕೆ ಎಲ್​ಐಸಿಯಿಂದ ಹೊಸ ಸ್ಮಾರ್ಟ್ ಪೆನ್ಷನ್ ಪ್ಲಾನ್

Annuity insurance plan: ಭಾರತೀಯ ಜೀವ ವಿಮಾ ನಿಗಮ ಮತ್ತೊಂದು ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಅದು ಸ್ಮಾರ್ಟ್ ಪೆನ್ಷನ್ ಪ್ಲಾನ್ ಎನ್ನುವ ರೆಗ್ಯುಲರ್ ಇನ್ಕಮ್ ಸ್ಕೀಮ್. ಒಂದೇ ಪ್ರೀಮಿಯಮ್ ಮಾತ್ರದ್ದಾಗಿದ್ದು, ಕೊನೆಗಾಲದವರೆಗೆ ನಿಯಮಿತವಾಗಿ ಆದಾಯ ಬರುತ್ತಿರುತ್ತದೆ. ಒಂದು ಲಕ್ಷ ರೂ ಪ್ರೀಮಿಯಮ್ ಕಟ್ಟಿದರೆ ನೀವು ಸಾಯುವವರೆಗೂ ಮಾಸಿಕವಾಗಿ ಒಂದು ಸಾವಿರ ರೂ ಆದಾಯ ಪಡೆಯಬಹುದು. ಇನ್ನೂ ಹೆಚ್ಚಿನ ಮೊತ್ತದ ಪ್ರೀಮಿಯಮ್ ಕಟ್ಟಿದರೆ ಇನ್ನೂ ಹೆಚ್ಚಿನ ರಿಟರ್ನ್ ಪಡೆಯಬಹುದು.

LIC Smart Pension Plan: ನಿಶ್ಚಿಂತೆಯ ನಿವೃತ್ತ ಜೀವನಕ್ಕೆ ಎಲ್​ಐಸಿಯಿಂದ ಹೊಸ ಸ್ಮಾರ್ಟ್ ಪೆನ್ಷನ್ ಪ್ಲಾನ್
ಎಲ್​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2025 | 4:46 PM

Share

ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾದ ಎಲ್​ಐಸಿ ಹೊಸ ಆ್ಯನ್ಯುಟಿ ಪ್ಲಾನ್​ವೊಂದನ್ನು ಆರಂಭಿಸಿದೆ. ಸ್ಮಾರ್ಟ್ ಪೆನ್ಷನ್ ಪ್ಲಾನ್ ಎಂದು ಹೆಸರಿಲಾಗಿರುವ ಈ ಸ್ಕೀಮ್ ನಿವೃತ್ತರ ವಿಶ್ರಾಂತ ಜೀವನಕ್ಕೆ ಪೂರಕವಾಗಿ ನಿಯಮಿತ ಆದಾಯ ನೀಡುತ್ತದೆ. ಒಂದೇ ಪ್ರೀಮಿಯಮ್ ಇದ್ದು, ಅದಕ್ಕೆ ಅನುಗುಣವಾಗಿ ತತ್​ಕ್ಷಣದಿಂದಲೇ ನಿಯಮಿತ ಆದಾಯ ಬರತೊಡಗುತ್ತದೆ. ವಿವಿಧ ಹಣಕಾಸು ಸ್ಥಿತಿ, ಆದಾಯ ಅಗತ್ಯಗಳಿಗೆ ತಕ್ಕಂತೆ ಪ್ರೀಮಿಯಮ್ ಮೊತ್ತವನ್ನು ಆಯ್ದುಕೊಳ್ಳಬಹುದು.

ಇದು ನಾನ್ ಪಾರ್ಟಿಸಿಪೇಟಿಂಗ್, ನಾನ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಆಗಿದೆ. ಅಂದರೆ, ಇದು ಮಾರುಕಟ್ಟೆಗೆ ಜೋಡಿತವಾಗಿರುವುದಿಲ್ಲ. ಪೂರ್ವನಿಗದಿತ ಆದಾಯದ ಖಾತ್ರಿ ನೀಡುತ್ತದೆ.

ಇದನ್ನೂ ಓದಿ: ಒಂದು ವರ್ಷದೊಳಗೆ ಇನ್ಷೂರೆನ್ಸ್ ಪಾಲಿಸಿ ರದ್ದುಗೊಳಿಸಲು ಸಾಧ್ಯವಾ? ಫ್ರೀಲುಕ್ ಅವಧಿ ವಿಸ್ತರಿಸಲು ಸರ್ಕಾರದ ಯೋಜನೆ

ಎಲ್​ಐಸಿ ಸ್ಮಾರ್ಟ್ ಪೆನ್ಷನ್ ಪ್ಲಾನ್​ನ ಪ್ರಮುಖ ಅಂಶಗಳು

  • ಈ ಪ್ಲಾನ್ ಯಾರು ಬೇಕಾದರೂ ಪಡೆಯಬಹುದು. ಆದರೆ, ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ 65ರಿಂದ 100 ವರ್ಷದವರೆಗೂ ಇದೆ.
  • ಈಗಾಗಲೇ ಎಲ್​ಐಸಿ ಪಾಲಿಸಿ ಮಾಡಿಸಿರುವವರಿಗೆ ಹೆಚ್ಚಿನ ಆ್ಯನುಟಿ ದರಗಳ ಆಫರ್ ನೀಡಲಾಗುತ್ತದೆ.
  • ಅಗತ್ಯಬಿದ್ದರೆ ಪಾಲಿಸಿದಾರರು ಪೂರ್ಣ ಹಣ ಹಿಂಪಡೆಯುವ ಅವಕಾಶವೂ ಇರುತ್ತದೆ.
  • ಆ್ಯನುಟಿ ಪ್ಲಾನ್​ನಲ್ಲಿ ನೀವು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ, ಅಥವಾ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ನಿರ್ದಿಷ್ಟ ಹಣ ಬರುವಂತೆ ಮಾಡುವ ಆಯ್ಕೆಗಳಿವೆ.
  • ಇತರ ಎಲ್​ಐಸಿ ಪ್ಲಾನ್​ಗಳಂತೆ ಇದರಲ್ಲೂ ಕೂಡ ಸಾಲದ ಅವಕಾಶ ಇರುತ್ತದೆ. ನಿಮ್ಮ ಪ್ರೀಮಿಯಮ್ ಮೊತ್ತಕ್ಕೆ ಅನುಗುಣವಾಗಿ ನೀವು ಸಾಲ ಪಡೆಯಲು ಸಾಧ್ಯ.

ಎನ್​ಪಿಎಸ್ ಹೊಂದಿದವರಿಗೆ ತತ್​ಕ್ಷಣದ ಆ್ಯನುಟಿ

ನ್ಯಾಷನಲ್ ಪೆನ್ಷನ್ ಸ್ಕೀಮ್ ಪಡೆದಿರುವವರು ನಿವೃತ್ತರಾದಾಗ ನಿರ್ದಿಷ್ಟ ಮೊತ್ತವನ್ನು ಆ್ಯನುಟಿ ಖರೀದಿಸಲು ಬಳಸಬೇಕೆಂಬ ನಿಯಮ ಇದೆ. ಇಂಥವರು ಎಲ್​ಐಸಿಯ ಸ್ಮಾರ್ಟ್ ಪೆನ್ಷನ್ ಪ್ಲಾನ್ ಅನ್ನು ಖರೀದಿಸಬಹುದು. ತತ್​ಕ್ಷಣದಿಂದಲೇ ಆ್ಯನುಟಿ ಅಥವಾ ರೆಗ್ಯುಲರ್ ಇನ್ಕಮ್ ಬರತೊಡಗುತ್ತದೆ.

ಕನಿಷ್ಠ ಪ್ರೀಮಿಯಮ್ ಮತ್ತು ಕನಿಷ್ಠ ಆ್ಯನುಟಿ

ಎಲ್​ಐಸಿ ಸ್ಮಾರ್ಟ್ ಪೆನ್ಷನ್ ಸ್ಕೀಮ್​ನಲ್ಲಿ ಒಂದೇ ಬಾರಿಗೆ ಪ್ರೀಮಿಯಮ್ ಪಾವತಿಸುವುದಿರುತ್ತದೆ. ಕನಿಷ್ಠ ಪ್ರೀಮಿಯಮ್ ದರ ಒಂದು ಲಕ್ಷ ರೂ ಇದೆ. ಗರಿಷ್ಠ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಭಾರತೀಯರ ಆದಾಯದ ಹೆಚ್ಚಿನ ಭಾಗ ಸಾಲಕ್ಕೆ ಚುಕ್ತಾ; ಬೇರೆ ಯಾವ್ಯಾವುದಕ್ಕೆಷ್ಟು ಖರ್ಚು? ಇಲ್ಲಿದೆ ಪಿಡಬ್ಲ್ಯುಸಿ ವರದಿ

ಕನಿಷ್ಠ ಆ್ಯನುಟಿ ಅಥವಾ ರೆಗ್ಯುಲರ್ ರಿಟರ್ನ್ ಮೊತ್ತ ತಿಂಗಳಿಗೆ ಒಂದು ಸಾವಿರ ರೂ ಇರುತ್ತದೆ. ಕ್ವಾರ್ಟರ್ ಅವಧಿಯ ರಿಟರ್ನ್ ಆಯ್ದುಕೊಂಡರೆ ಕನಿಷ್ಠ ಆ್ಯನುಟಿ 3,000 ರೂ ಇದೆ. ಅರ್ಧವರ್ಷವಾದರೆ ಆರು ಸಾವಿರ ರೂ, ಒಂದು ವರ್ಷದ್ದಾದರೆ 12,000 ರೂ ಆದಾಯ ನಿಯಮಿತವಾಗಿ ಬರುತ್ತಾ ಹೋಗುತ್ತದೆ.

ಪಾಲಿಸಿದಾರನಿಗೆ ಈ ಆ್ಯನುಟಿ ಕೊನೆಗಾಲದವರೆಗೂ ಬರುತ್ತಿರುತ್ತದೆ. ಸತ್ತ ಬಳಿಕ ನಾಮಿನಿಗಳಿಗೆ ಬೆನಿಫಿಟ್ ಇರುತ್ತದೆ. ನಾಮಿನಿಗೆ ಇದೇ ರೀತಿ ಆ್ಯನುಟಿ ಮುಂದುವರಿಸಬೇಕೋ ಅಥವಾ ಲಂಪ್ಸಮ್ ಹಣ ಕೊಡಬೇಕೋ ಎಂಬುದನ್ನು ಪಾಲಿಸಿದಾರ ಮೊದಲೇ ನಿರ್ಧರಿಸಿರಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!