ಒಂದು ವರ್ಷದೊಳಗೆ ಇನ್ಷೂರೆನ್ಸ್ ಪಾಲಿಸಿ ರದ್ದುಗೊಳಿಸಲು ಸಾಧ್ಯವಾ? ಫ್ರೀಲುಕ್ ಅವಧಿ ವಿಸ್ತರಿಸಲು ಸರ್ಕಾರದ ಯೋಜನೆ
Nirmala Sitharaman speaks at post-budget consultation: ಇನ್ಷೂರೆನ್ಸ್ ಪಾಲಿಸಿ ಖರೀದಿಸಿದ ಬಳಿಕ ಫ್ರೀ ಲುಕ್ ಅವಧಿಯ ಅವಕಾಶ ನೀಡಲಾಗಿರುತ್ತದೆ. ಪಾಲಿಸಿ ಬೇಡವೆನಿಸಿದಲ್ಲಿ ಈ ಅವಧಿಯೊಳಗೆ ನೀವು ರದ್ದು ಮಾಡಿದರೆ ದಂಡ ಇಲ್ಲದೆಯೇ ಪ್ರೀಮಿಯಮ್ ಹಣ ಪೂರ್ಣವಾಗಿ ರೀಫಂಡ್ ಆಗುತ್ತದೆ. ಸದ್ಯ ಒಂದು ತಿಂಗಳ ಫ್ರೀ ಲುಕ್ ಪೀರಿಯಡ್ ಇದೆ. ಇದನ್ನು ಒಂದು ವರ್ಷಕ್ಕೆ ಏರಿಸಬೇಕೆಂದು ವಿಮಾ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮುಂಬೈ, ಫೆಬ್ರುವರಿ 17: ಇನ್ಷೂರೆನ್ಸ್ ಪಾಲಿಸಿದಾರರಿಗೆ ಇರುವ ಫ್ರೀ ಲುಕ್ ಪೀರಿಯಡ್ ಅನ್ನು ಒಂದು ವರ್ಷದವರೆಗೆ ವಿಸ್ತರಿಸಲು ಸರ್ಕಾರ ಯೋಜಿಸುತ್ತಿದೆ. ಸದ್ಯಕ್ಕೆ ಹೆಚ್ಚಿನ ಇನ್ಷೂರೆನ್ಸ್ ಕಂಪನಿಗಳು ಒಂದು ತಿಂಗಳ ಫ್ರೀ ಲುಕ್ ಪೀರಿಯಡ್ ನೀತಿ ಹೊಂದಿವೆ. ಅಂದರೆ ಇನ್ಷೂರೆನ್ಸ್ ಪಾಲಿಸಿ ಮಾಡಿಸಿ, ಅದು ನಿಮಗೆ ತೃಪ್ತಿ ತಂದಿಲ್ಲ ಎಂದಲ್ಲಿ ಯಾವುದೇ ಪೆನಾಲ್ಟಿ ಇಲ್ಲದೇ ಪಾಲಿಸಿ ರದ್ದು ಮಾಡಲು ಇರುವ ಗಡುವು. ಈ ಒಂದು ತಿಂಗಳ ಗಡುವನ್ನು ಒಂದು ವರ್ಷಕ್ಕೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರವು ಇನ್ಷೂರೆನ್ಸ್ ಕಂಪನಿಗಳಿಗೆ ಕೇಳಿದೆ. ಹೀಗೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಸೋಮವಾರ ಬಜೆಟ್ನಂತರದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿರುವಾಗ ನಿರ್ಮಲಾ ಸೀತಾರಾಮನ್ ಈ ಇನ್ಷೂರೆನ್ಸ್ ಪಾಲಿಸಿಯ ಫ್ರೀ ಲುಕ್ ಅವಧಿಯ ಪರಾಮರ್ಶೆ ನಡೆಯಬೇಕೆನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಫ್ರೀ ಲುಕ್ ಅವಧಿಯನ್ನು ವಿಸ್ತರಿಸುವುದರಿಂದ ಪಾಲಿಸಿದಾರರಿಗೆ ತಾವು ಪಡೆದ ಇನ್ಷೂರೆನ್ಸ್ ಉತ್ಪನ್ನವನ್ನು ಪರಾಮರ್ಶಿಸಲು ಹೆಚ್ಚಿನ ಸಮಯಾವಕಾಶ ಸಿಗುತ್ತದೆ. ತಮ್ಮ ಅಗತ್ಯಗಳಿಗೆ ಈ ಪಾಲಿಸಿ ಎಷ್ಟು ಅಗತ್ಯ ಎಂಬುದನ್ನು ಕಂಡುಕೊಳ್ಳಲು ಸಾಕಷ್ಟು ಸಮಯ ಸಿಕ್ಕಂತಾಗುತ್ತದೆ. ತಪ್ಪಾದ ಇನ್ಷೂರೆನ್ಸ್ ಪಾಲಿಸಿಗೆ ಹಣ ಹೂಡಿಕೆ ಮಾಡುವುದನ್ನು ತಪ್ಪಿಸಿಕೊಳ್ಳುವ ಅವಕಾಶ ಸಿಗುತ್ತದೆ.
ಇದನ್ನೂ ಓದಿ: ಎಸ್ಐಬಿ ಕ್ವಿಕ್ ಎಫ್ಡಿ; ಎಸ್ಬಿ ಅಕೌಂಟ್ ಬೇಕಿಲ್ಲ, ನೇರವಾಗಿ ಠೇವಣಿ ಇಡಿ; ಬಹಳ ಸಿಂಪಲ್, ಎಲ್ಲಾ ಆನ್ಲೈನ್
ಸಾಮಾನ್ಯವಾಗಿ ಇನ್ಷೂರೆನ್ಸ್ ಏಜೆಂಟ್ಗಳು ಪಾಲಿಸಿ ಮಾರುವಾಗ ಸರಿಯಾದ ವಿವರ ನೀಡದೇ ಹೋಗಬಹುದು. ಇಲ್ಲದ ಭರವಸೆಗಳನ್ನು ನೀಡಿ ಪಾಲಿಸಿ ಖರೀದಿಸುವಂತೆ ಮಾಡಬಹುದು. ಆದರೆ, ವಾಸ್ತವದಲ್ಲಿ ಪಾಲಿಸಿ ಖರೀದಿ ಮಾಡಿದ ಬಳಿಕ ಅದರ ಇತಿಮಿತಿಗಳು ಅರಿವಿಗೆ ಬರುತ್ತದೆ. ಹೀಗಾಗಿ, ಫ್ರೀ ಲುಕ್ ಪೀರಿಯಡ್ ವಿಸ್ತರಿಸುವ ಬಗ್ಗೆ ಸರ್ಕಾರ ಹಿಂದೆಯೇ ಆಲೋಚಿಸಿ, ಇನ್ಷೂರೆನ್ಸ್ ಕಂಪನಿಗಳಿಗೆ ತಿಳಿಸಿತ್ತೆನ್ನಲಾಗಿದೆ.
ಫ್ರೀ ಲುಕ್ ಅವಧಿಯಲ್ಲಿ ನಿಮಗೆ ಇನ್ಷೂರೆನ್ಸ್ ಪಾಲಿಸಿ ಹಿಡಿಸಲಿಲ್ಲವೆಂದರೆ ಪಾಲಿಸಿ ರದ್ದು ಮಾಡಬಹುದು. ಯಾವುದೇ ಹಣ ಮುರಿದುಕೊಳ್ಳದೆಯೇ ಪೂರ್ಣ ಪಾಲಿಸಿ ಹಣವನ್ನು ರೀಫಂಡ್ ಮಾಡಲಾಗುತ್ತದೆ. ಫ್ರೀ ಲುಕ್ ಪೀರಿಯಡ್ ಬಳಿಕವೂ ನೀವು ಪಾಲಿಸಿ ರದ್ದು ಮಾಡಬಹುದಾದರೂ ದಂಡ ಮತ್ತಿತರ ಶುಲ್ಕಗಳನ್ನು ಕಟ್ಟಬೇಕಾಗುತ್ತದೆ.
ಇನ್ಷೂರೆನ್ಸ್ ಸೆಕ್ಟರ್ನಲ್ಲಿ ಮತ್ತಷ್ಟು ವಿದೇಶೀ ಹೂಡಿಕೆಗಳಿಗೆ ಉತ್ತೇಜಿಸಲಿದೆ ಸರ್ಕಾರ
ವಿಮಾ ವಲಯದಲ್ಲಿ ಮತ್ತಷ್ಟು ಎಫ್ಡಿಐ ಬರಲು ಸರ್ಕಾರ ಅಪೇಕ್ಷಿಸುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ಕಂಪನಿಗಳು ಬರಬೇಕು. ಮಾರುಕಟ್ಟೆಯ ಆಳ ಇನ್ನಷ್ಟು ಆಗಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿಗೆ ಇನ್ಷೂರೆನ್ಸ್ ಗ್ಯಾರಂಟಿ; 5 ಲಕ್ಷ ರೂ ಮಿತಿ ಹೆಚ್ಚಿಸಲು ಕೇಂದ್ರ ಯೋಜನೆ
ಇದೇ ವೇಳೆ, ಇನ್ಷೂರೆನ್ಸ್ ತಿದ್ದುಪಡಿ ಮಸೂದೆ ಪ್ರಸ್ತಾಪಿಸಿದ ಸಚಿವೆ, ಈ ಮಸೂದೆ ಬಗ್ಗೆ ಅಂತರಿಕ ಸಮಾಲೋಚನೆಗಳು ನಡೆಯುತ್ತಿದೆ. ಇದನ್ನು ಮಂಡಿಸುವ ಮುನ್ನ ಕಾನೂನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ