ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿಗೆ ಇನ್ಷೂರೆನ್ಸ್ ಗ್ಯಾರಂಟಿ; 5 ಲಕ್ಷ ರೂ ಮಿತಿ ಹೆಚ್ಚಿಸಲು ಕೇಂದ್ರ ಯೋಜನೆ
Insurance guarantee for bank money: ಬ್ಯಾಂಕ್ನ ಗ್ರಾಹಕರ ಅಕೌಂಟ್ನಲ್ಲಿ ಐದು ಲಕ್ಷ ರೂವರೆಗಿನ ಹಣಕ್ಕೆ ಇನ್ಷೂರೆನ್ಸ್ ಗ್ಯಾರಂಟಿ ಇದೆ. ಬ್ಯಾಂಕ್ ದಿವಾಳಿ ಎದ್ದರೆ ಮೂರು ತಿಂಗಳೊಳಗೆ ಅಷ್ಟು ಹಣ ರೀಇಂಬುರ್ಸ್ ಆಗುತ್ತದೆ. ಆರ್ಬಿಐನ ಅಂಗಸಂಸ್ಥೆಯಾದ ಡೆಪಾಸಿಟ್ ಇನ್ಷೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಸಂಸ್ಥೆ ಈ ಇನ್ಷೂರೆನ್ಸ್ ನೀಡುತ್ತದೆ. ಡೆಪಾಸಿಟ್ ಇನ್ಷೂರೆನ್ಸ್ ಮಿತಿಯನ್ನು 5 ಲಕ್ಷ ರೂಗಿಂತ ಹೆಚ್ಚಿನ ಮೊತ್ತಕ್ಕೆ ಏರಿಸಲು ಸರ್ಕಾರ ಯೋಜಿಸುತ್ತಿದೆ.

ನವದೆಹಲಿ, ಫೆಬ್ರುವರಿ 17: ಒಂದು ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷ ರೂವರೆಗಿನ ನಿಮ್ಮ ಹಣಕ್ಕೆ ಇನ್ಷೂರೆನ್ಸ್ ಖಾತ್ರಿ ಸಿಗುತ್ತದೆ. ಡಿಐಸಿಜಿಸಿ ಸಂಸ್ಥೆ ಈ ವಿಮಾ ಸೇವೆ ನೀಡುತ್ತದೆ. ಅಕಸ್ಮಾತ್ ಆಗಿ ಬ್ಯಾಂಕ್ ದಿವಾಳಿ ಎದ್ದಾಗ ಖಾತೆದಾರರ ಹಣದ ಸುರಕ್ಷತೆಗೆ ಇದು ಸಹಾಯವಾಗುತ್ತದೆ. ಇದೀಗ ಈ ಇನ್ಷೂರೆನ್ಸ್ ಮೊತ್ತವನ್ನು ಹೆಚ್ಚಿಸಲು ಸರ್ಕಾರ ಆಲೋಚಿಸುತ್ತಿದೆ.
ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಸಂಸ್ಥೆಯು ಆರ್ಬಿಐ ಅಡಿ ಬರುತ್ತದೆ. ಬ್ಯಾಂಕ್ ದಿವಾಳಿ ಇದ್ದಾಗ ಸಣ್ಣ ಠೇವಣಿದಾರರ ಹಿತ ರಕ್ಷಣೆಯ ಹೊಣೆಗಾರಿಕೆ ಈ ಸಂಸ್ಥೆಗೆ ಇರುತ್ತದೆ. ಬ್ಯಾಂಕ್ನಲ್ಲಿ ಗ್ರಾಹಕರ ಸೇವಿಂಗ್ಸ್ ಅಕೌಂಟ್, ಎಫ್ಡಿ, ಆರ್ಡಿ, ಕರೆಂಟ್ ಅಕೌಂಟ್ಗಳಲ್ಲಿರುವ ಗರಿಷ್ಠ 5 ಲಕ್ಷ ರೂವರೆಗಿನ ಹಣಕ್ಕೆ ಇದು ಇನ್ಷೂರೆನ್ಸ್ ಖಾತ್ರಿ ಒದಗಿಸುತ್ತದೆ. ಭಾರತದಲ್ಲಿರುವ ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಡಿಐಸಿಜಿಸಿ ವಿಮಾ ವ್ಯಾಪ್ತಿಗೆ ಬರುತ್ತವೆ.
ಇದನ್ನೂ ಓದಿ: ಎನ್ಪಿಎಸ್ ವಾತ್ಸಲ್ಯ; ಮಕ್ಕಳ ಹಣಕಾಸು ಭದ್ರತೆಗೆ ಒಳ್ಳೆಯ ಸ್ಕೀಮ್; ಈ ಯೋಜನೆಯ ವಿವರ
ಈ ಬ್ಯಾಂಕುಗಳು ದಿವಾಳಿ ಎದ್ದಾಗ ಠೇವಣಿದಾರರ ಐದು ಲಕ್ಷ ರೂವರೆಗಿನ ಹಣವನ್ನು ಬಡ್ಡಿ ಸಮೇತವಾಗಿ ಮೂರು ತಿಂಗಳೊಳಗೆ ಇದು ಮರಳಿಸುತ್ತದೆ.
2021ರಲ್ಲಿ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ನ ತಿದ್ದುಪಡಿ ಕಾಯ್ದೆ ತರಲಾಯಿತು. ಅಲ್ಲಿಯವರೆಗೆ, ಯಾವುದೇ ಬ್ಯಾಂಕ್ ದಿವಾಳಿ ಎದ್ದಾಗ ಜನರ ಹಣ ಮರಳುವ ಖಾತ್ರಿ ಇರಲಿಲ್ಲ. ಠೇವಣಿ ಮರಳಿ ಪಡೆಯಲು ಕೆಲ ವರ್ಷಗಳೇ ಆಗುತ್ತಿದ್ದವು. 2021ರಲ್ಲಿ ತಿದ್ದುಪಡಿ ಕಾಯ್ದೆ ಮಾಡಿದಾಗ, ಐದು ಲಕ್ಷ ರೂವರೆಗಿನ ಠೇವಣಿ ಹಣವನ್ನು 90 ದಿನದೊಳಗೆ ಮರಳಿಸಬೇಕೆಂದು ನಿಯಮ ಮಾಡಲಾಯಿತು.
ಡಿಐಸಿಜಿಸಿ ಸಂಸ್ಥೆ ಪ್ರತೀ ಖಾತೆಗೂ ಐದು ಲಕ್ಷ ರೂವರೆಗಿನ ಹಣಕ್ಕೆ ಮಾತ್ರ ಇನ್ಷೂರೆನ್ಸ್ ಖಾತ್ರಿ ನೀಡುತ್ತದೆ. ಅದಕ್ಕೂ ಮೇಲ್ಪಟ್ಟ ಹಣ ಇದ್ದರೆ ಆ ಹೆಚ್ಚುವರಿ ಹಣಕ್ಕೆ ಖಾತ್ರಿ ಇರುವುದಿಲ್ಲ. ಬ್ಯಾಂಕ್ನ ದಿವಾಳಿ ಪ್ರಕ್ರಿಯೆ ಮುಗಿದು ಹಣ ಬಂದಿದ್ದರೆ ಠೇವಣಿದಾರರಿಗೆ ಅದು ವರ್ಗಾವಣೆ ಆಗುತ್ತದೆ. ಆದರೆ, ಅದು ಖಾತ್ರಿ ಇರುವುದಿಲ್ಲ. ಐದು ಲಕ್ಷ ರೂ ಡೆಪಾಸಿಟ್ಗೆ ಮಾತ್ರವೇ ಗ್ಯಾರಂಟಿ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ